ಯೆಹೋಶುವ 21:27 - ಕನ್ನಡ ಸತ್ಯವೇದವು J.V. (BSI)27 ಗೇರ್ಷೋನ್ಯರ ಕುಟುಂಬಗಳಿಗೆ ಅರ್ಧಮನಸ್ಸೆಯವರ ಸ್ವಾಸ್ತ್ಯದಿಂದ ಕೊಲೆಮಾಡಿದವನ ಆಶ್ರಯನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ಪಟ್ಟಣಗಳೂ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಗೆರ್ಷೋನ್ಯರ ಕುಟುಂಬಗಳಿಗೆ ಅರ್ಧ ಮನಸ್ಸೆಯವರ ಸ್ವತ್ತಿನಿಂದ ದೊರಕಿದ ಪಟ್ಟಣಗಳು ಇವು: ಕೊಲೆ ಮಾಡಿದವನಿಗೆ ಆಶ್ರಯ ನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ಪಟ್ಟಣಗಳು; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಗೇರ್ಷೋನ್ಯರ ಕುಟುಂಬ಼ಗಳಿಗೆ ಅರ್ಧ ಮನಸ್ಸೆಯವರ ಸೊತ್ತಿನಿಂದ ದೊರಕಿದವುಗಳು ಇವು: ಕೊಲೆ ಮಾಡಿದವನಿಗೆ ಆಶ್ರಯನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ನಗರಗಳು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಲೇವಿಯ ಸಂತತಿಯವರಾದ ಗೇರ್ಷೋನ್ಯರಿಗೆ ಈ ಊರುಗಳನ್ನು ಕೊಡಲಾಯಿತು: ಮನಸ್ಸೆಕುಲದ ಅರ್ಧಜನರು ಅವರಿಗೆ ಬಾಷಾನಿನಲ್ಲಿದ್ದ ಆಶ್ರಯನಗರವಾದ ಗೋಲಾನ್ ನಗರವನ್ನು ಕೊಟ್ಟರು. ಮನಸ್ಸೆಯವರು ಬೆಯೆಷ್ಟೆರಾವನ್ನು ಸಹ ಅವರಿಗೆ ಕೊಟ್ಟರು. ಒಟ್ಟಿನಲ್ಲಿ ಈ ಮನಸ್ಸೆಕುಲದ ಅರ್ಧಜನರು ಎರಡು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 ಲೇವಿ ಗೋತ್ರದ ಗೇರ್ಷೋನ್ಯರಿಗೆ ಮನಸ್ಸೆಯ ಅರ್ಧಗೋತ್ರದಲ್ಲಿ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿನಲ್ಲಿರುವ ಗೋಲಾನನ್ನೂ ಬೆಯೆಷ್ಟೆರಾವನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. ಅಧ್ಯಾಯವನ್ನು ನೋಡಿ |