Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 20:3 - ಕನ್ನಡ ಸತ್ಯವೇದವು J.V. (BSI)

3 ನಿಮ್ಮಲ್ಲಿ ತಿಳಿಯದೆ ಅಕಸ್ಮಾತ್ತಾಗಿ ನರಹತ್ಯ ಮಾಡಿದವನು ಅಲ್ಲಿಗೆ ಓಡಿಹೋಗಲಿ. ಹತವಾದವನ ಸಮೀಪಬಂಧುವು ಮುಯ್ಯಿತೀರಿಸದಂತೆ ಅವು ನಿಮಗೆ ಆಶ್ರಯಸ್ಥಾನಗಳಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಿಮ್ಮಲ್ಲಿ ತಿಳಿಯದೆ ಆಕಸ್ಮಾತ್ತಾಗಿ ನರಹತ್ಯಮಾಡಿದವನು ಅಲ್ಲಿಗೆ ಓಡಿಹೋಗಲಿ. ಹತವಾದವನ ಸಮೀಪ ಬಂಧುವು ಮುಯ್ಯಿತೀರಿಸದಂತೆ ಅವು ನಿಮಗೆ ಆಶ್ರಯಸ್ಥಾನಗಳಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನಿಮ್ಮಲ್ಲಿ ಯಾರಾದರು ಅರಿಯದೆ ಅಕಸ್ಮಾತ್ತಾಗಿ ನರಹತ್ಯೆ ಮಾಡಿದ್ದೇ ಆದರೆ ಅಂಥವನು ಅಲ್ಲಿಗೆ ಓಡಿಹೋಗಲಿ. ಹತನಾದವನ ಹತ್ತಿರದ ಬಂಧು ಮುಯ್ಯಿತೀರಿಸದಂತೆ ಆ ನಗರಗಳು ನಿಮಗೆ ಆಶ್ರಯ ಸ್ಥಾನವಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಿಮ್ಮಲ್ಲಿ ಒಬ್ಬನು ತಿಳಿಯದೆ ಆಕಸ್ಮಿಕವಾಗಿ ನರಹತ್ಯ ಮಾಡಿದರೆ ಅವನು ಯಾವುದಾದರೊಂದು ಆಶ್ರಯನಗರಕ್ಕೆ ಹೋಗಿ ಅಡಗಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯಾವನಾದರು ಅರಿಯದೆ ಅಕಸ್ಮಾತ್ತಾಗಿ ಕೈತಪ್ಪಿ ಕೊಂದುಹಾಕಿದರೆ, ಅಂಥವನು ಅಲ್ಲಿಗೆ ಓಡಿಹೋಗಲಿ. ಅವನಿಗೆ ರಕ್ತದ ಸೇಡು ತೀರಿಸುವವನಿಂದ ತಪ್ಪಿಸಿಕೊಳ್ಳುವ ಆಶ್ರಯವಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 20:3
8 ತಿಳಿವುಗಳ ಹೋಲಿಕೆ  

ನೀನು ಇಸ್ರಾಯೇಲ್ಯರ ಸಂಗಡ ಮಾತಾಡಿ ಹೇಳಬೇಕಾದದ್ದೇನಂದರೆ - ಯಾವನೇ ಆಗಲಿ ತಿಳಿಯದೆ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವದನ್ನಾದರೂ ಮಾಡಿ ದೋಷಿಯಾದರೆ [ಅವನಿಗೆ ದೋಷಪರಿಹಾರ ಮಾಡುವ ಕ್ರಮ ಹೇಗಂದರೆ - ]


ಅವನು ಸಭೆಯವರಿಂದ ತೀರ್ಪುಹೊಂದುವದಕ್ಕಿಂತ ಮೊದಲೇ ಹತವಾದವನ ಸಮೀಪಬಂಧುವಿನಿಂದ ಸಾಯದಂತೆ ಆ ಆಶ್ರಯಸ್ಥಾನಗಳು ನಿಮ್ಮೊಳಗೆ ಇರಬೇಕು.


ನೀನು ಇಸ್ರಾಯೇಲ್ಯರಿಗೆ - ನಾನು ಮೋಶೆಯ ಮೂಲಕ ಆಜ್ಞಾಪಿಸಿದಂತೆ ನೀವು ನಿಮಗೋಸ್ಕರ ಕೆಲವು ಆಶ್ರಯನಗರಗಳನ್ನು ಗೊತ್ತು ಮಾಡಿಕೊಳ್ಳಿರಿ.


ಅಂಥ ಪಟ್ಟಣಕ್ಕೆ ಓಡಿಹೋದವನು ಮೊದಲು ಊರಬಾಗಲಲ್ಲೇ ನಿಂತುಕೊಂಡು ಅಲ್ಲಿನ ಹಿರಿಯರಿಗೆ ತನ್ನ ಸಂಗತಿಯನ್ನು ತಿಳಿಯಪಡಿಸಲಿ. ಅವರು ಅವನನ್ನು ಊರೊಳಗೆ ಸೇರಿಸಿಕೊಂಡು ಅವನ ವಾಸಕ್ಕೆ ಸ್ಥಳಕೊಡಲಿ.


ನರಹತ್ಯಮಾಡಿದವನು ಎಲ್ಲಿ ಸಿಕ್ಕಿದರೂ ಅವನನ್ನು ಕೊಲ್ಲಬೇಕಾದವನು ಯಾರಂದರೆ ಹತವಾದವನ ಸಮೀಪಬಂಧುವೇ.


ಆದರೆ ಒಬ್ಬನು ಯಾವ ದ್ವೇಷವೂ ಇಲ್ಲದೆ ಅಕಸ್ಮಾತ್ತಾಗಿ ನೂಕುವದರಿಂದಾಗಲಿ ಹಾನಿಮಾಡುವ ಸಮಯವನ್ನು ನೋಡಿಕೊಳ್ಳದೆ ಏನಾದರೂ ಎಸೆಯುವದರಿಂದಾಗಲಿ


ಆಗ ಆ ಸ್ತ್ರೀಯು - ಸಮೀಪಬಂಧುವು ನನ್ನ ಎರಡನೆಯ ಮಗನನ್ನು ಕೊಂದು ನನ್ನನ್ನು ಪೂರ್ಣವಾಗಿ ಹಾಳುಮಾಡದಂತೆ ಅರಸನು ತಾನಾಗಿ ನೋಡಿಕೊಳ್ಳುವನೆಂಬದಾಗಿ ನನ್ನ ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ಪ್ರಮಾಣಮಾಡಬೇಕು ಎಂದು ಬೇಡಿಕೊಂಡಳು. ಅದಕ್ಕೆ ಅರಸನು - ಯೆಹೋವನಾಣೆ, ನಿನ್ನ ಮಗನ ಕೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಗೊಡುವದಿಲ್ಲ ಎಂದು ಹೇಳಿದನು.


ಆಶ್ರಯವನ್ನು ಹೊಂದಬೇಕೆಂದು ಓಡಿಬಂದು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಎರಡು ನಿಶ್ಚಲವಾದ ಆಧಾರಗಳು ಇರುವ ಕಾರಣ ಬಲವಾದ ಧೈರ್ಯವುಂಟಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು