Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 2:7 - ಕನ್ನಡ ಸತ್ಯವೇದವು J.V. (BSI)

7 ಅರಸನ ಆಳುಗಳು ಯೊರ್ದನಿನ ದಾರಿಹಿಡಿದು ಹೋಗಿ ಹೊಳೆದಾಟುವ ಸ್ಥಳಗಳವರೆಗೂ ಹುಡುಕಿದರು. ಹುಡುಕುವವರು ಹೊರಟ ಕೂಡಲೆ ಊರುಬಾಗಲನ್ನು ಮುಚ್ಚಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅರಸನ ಆಳುಗಳು ಯೊರ್ದನಿನ ದಾರಿ ಹಿಡಿದು ಹೋಗಿ ಹೊಳೆದಾಟುವ ಸ್ಥಳದವರೆಗೂ ಹುಡುಕಿದರು. ಅವರನ್ನು ಹಿಂದಟ್ಟುವವರು ಹೋದ ಕೂಡಲೇ ಹೆಬ್ಬಾಗಿಲನ್ನು ಮುಚ್ಚಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಅರಸನ ಆಳುಗಳು ಜೋರ್ಡನ್ ದಾರಿ ಹಿಡಿದು ಹೋಗಿ ನದಿದಾಟುವ ಸ್ಥಳದವರೆಗೂ ಹುಡುಕಿದರು. ಹುಡುಕುವವರು ಹೊರಟಕೂಡಲೆ ಊರಬಾಗಿಲನ್ನು ಮುಚ್ಚಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ರಾಜಭಟರು ನಗರದ ಹೊರಗೆ ಹೋಗಿ ನಗರದ ದ್ವಾರಗಳನ್ನು ಮುಚ್ಚಿ ಇಸ್ರೇಲಿನಿಂದ ಬಂದ ಆ ಇಬ್ಬರನ್ನು ಹುಡುಕಿಕೊಂಡು ಹೋದರು. ಅವರು ಜೋರ್ಡನ್ ನದಿಯವರೆಗೆ ಹೋಗಿ ಜನರು ನದಿದಾಟುವ ಎಲ್ಲ ಸ್ಥಳಗಳಲ್ಲಿ ಹುಡುಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆ ಮನುಷ್ಯರು ಯೊರ್ದನ್ ನದಿ ದಾರಿ ಹಿಡಿದು ಹೋಗಿ ನದಿ ದಾಟುವ ಸ್ಥಳದವರೆಗೂ ಅವರನ್ನು ಹಿಂದಟ್ಟಿದರು. ಅವರನ್ನು ಹಿಂದಟ್ಟುವವರು ಹೊರಟುಹೋದ ಕೂಡಲೆ, ಪಟ್ಟಣದ ಹೆಬ್ಬಾಗಿಲು ಮುಚ್ಚಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 2:7
6 ತಿಳಿವುಗಳ ಹೋಲಿಕೆ  

ಅವನು ಅವರ ನಾಯಕನಾಗಿ - ನನ್ನನ್ನು ಹಿಂಬಾಲಿಸಿರಿ; ಯೆಹೋವನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆಂದು ಹೇಳಲು ಅವರು ಅವನನ್ನು ಹಿಂಬಾಲಿಸಿ ಮೋವಾಬಿಗೆ ಹೋಗುವ ಹಾಯಗಡಗಳನ್ನೆಲ್ಲಾ ಹಿಡಿದರು; ಯಾರನ್ನೂ ದಾಟಗೊಡಲಿಲ್ಲ.


ಕಾವಲಿನ ಮನೆ ಪೂರ್ಣ ಭದ್ರವಾಗಿ ಮುಚ್ಚಿರುವದನ್ನೂ ಕಾವಲುಗಾರರು ಬಾಗಿಲುಗಳಲ್ಲಿ ನಿಂತಿರುವದನ್ನೂ ಕಂಡೆವು; ಆದರೆ ತೆರೆದಾಗ ಒಳಗೆ ಒಬ್ಬರನ್ನೂ ಕಾಣಲಿಲ್ಲ ಎಂದು ತಿಳಿಸಿದರು.


ಇದಲ್ಲದೆ ಅವರು ಎಫ್ರಾಯೀವಿುಗೆ ಹೋಗುವ ಯೊರ್ದನಿನ ಹಾಯಗಡಗಳನ್ನೆಲ್ಲಾ ಹಿಡಿದರು. ತಪ್ಪಿಸಿಕೊಂಡ ಎಫ್ರಾಯೀಮ್ಯರಲ್ಲೊಬ್ಬನು ಅಲ್ಲಿಗೆ ಬಂದು ನನ್ನನ್ನು ದಾಟಗೊಡಿರಿ ಎಂದು ಅವರನ್ನು ಕೇಳಿದರೆ ಅವರು - ನೀನು ಎಫ್ರಾಯೀಮ್ಯನೋ ಎಂದು ಕೇಳುವರು.


ಊರುಬಾಗಲನ್ನು ಮುಚ್ಚುವ ಹೊತ್ತಿನಲ್ಲಿ ಕತ್ತಲೊಳಗೆ ಹೊರಟುಹೋದರು. ಎಲ್ಲಿಗೆ ಹೋದರೆಂಬದೂ ಗೊತ್ತಿಲ್ಲ. ಬೇಗನೆ ಅವರನ್ನು ಬೆನ್ನಟ್ಟಿರಿ; ನಿಮಗೆ ಸಿಕ್ಕಾರು ಎಂದು ಹೇಳಿದಳು.


ಆದರೆ ಅವಳು ಆ ಮನುಷ್ಯರನ್ನು ಮಾಳಿಗೆಯ ಮೇಲೆ ಹತ್ತಿಸಿ ಅಲ್ಲಿ ಸಾಲಾಗಿ ಇಟ್ಟಿದ್ದ ಪುಂಡಿಯ ಹೊರೆಗಳಲ್ಲಿ ಅಡಗಿಸಿಟ್ಟಿದ್ದಳು.


ಆ ಮನುಷ್ಯರಿಬ್ಬರೂ ಮಲಗಿಕೊಳ್ಳುವ ಮೊದಲು


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು