ಯೆಹೋಶುವ 19:8 - ಕನ್ನಡ ಸತ್ಯವೇದವು J.V. (BSI)8 ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲತ್‍ಬೇರ್ ಎಂಬ ಊರಿನವರೆಗಿರುವ ಇತರ ಗ್ರಾಮಗಳೂ ಇವೇ. ಬಾಲತ್‍ಬೇರ್ ಎಂಬದು ದಕ್ಷಿಣದ ರಾಮ ಅನ್ನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯವು ಇದೇ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಅವುಗಳ ಸುತ್ತಣ ಪ್ರದೇಶದಲ್ಲಿ ರಾಮ ಎಂಬ ಬಾಲತ್ ಬೇರ್ ಎಂಬ ಊರಿನವರೆಗೂ ಇದ್ದ ಎಲ್ಲಾ ಗ್ರಾಮಗಳೂ ಆಗಿವೆ. ಬಾಲತ್ ಬೇರ್ ಎಂಬುದು ದಕ್ಷಿಣ ರಾಮ ಎನ್ನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಇವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲತ್ ಬೇರ್ ಎಂಬ ಊರಿನವರೆಗೆ ಇತರ ಗ್ರಾಮಗಳು ಇವೆ. ಬಾಲತ್ ಬೇರ್ ಎಂಬುದು ದಕ್ಷಿಣದ ರಾಮ ಎನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಆಸ್ತಿ ಇದೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಬಾಲತ್‌ಬೇರನ (ನೆಗೇವದಲ್ಲಿದ್ದ ರಾಮ)ವರೆಗೆ ಹಬ್ಬಿದ ಎಲ್ಲ ಪಟ್ಟಣಗಳ ಸುತ್ತಲಿನ ಹೊಲಗದ್ದೆಗಳನ್ನು ಸಹ ಅವರು ಪಡೆದುಕೊಂಡರು. ಇದೇ ಸಿಮೆಯೋನ್ ಕುಲದವರಿಗೆ ದೊರೆತ ಭಾಗವಾಗಿತ್ತು. ಪ್ರತಿಯೊಂದು ಗೋತ್ರದವರು ತಮ್ಮ ಭೂಮಿಯನ್ನು ಪಡೆದುಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಇದರೊಂದಿಗೆ ಬಾಲಾತ್ ಬೇರಿನವರೆಗೂ ಇರುವ ಎಲ್ಲಾ ಪಟ್ಟಣ ಮತ್ತು ಅದರ ಗ್ರಾಮಗಳೂ ಬಾಲತ್ ಬೇರ್ ಎಂಬುದು ದಕ್ಷಿಣದಲ್ಲಿರುವ ನೆಗೇವಿನ ರಾಮದಲ್ಲಿ ಇರುತ್ತದೆ. ಇದೇ ಸಿಮೆಯೋನನ ಗೋತ್ರದವರ ಕುಟುಂಬಗಳ ಪ್ರಕಾರ ದೊರೆತ ಸೊತ್ತು. ಅಧ್ಯಾಯವನ್ನು ನೋಡಿ |