Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 17:14 - ಕನ್ನಡ ಸತ್ಯವೇದವು J.V. (BSI)

14 ಆದರೆ ಯೋಸೇಫ್ಯರು ಯೆಹೋಶುವನಿಗೆ - ನೀನು ಚೀಟುಹಾಕಿ ನಮಗೆ ಒಂದೇ ಭಾಗವನ್ನು ಕೊಟ್ಟದ್ದೇಕೆ? ಯೆಹೋವನು ನಮ್ಮನ್ನು ಇಂದಿನವರೆಗೂ ಆಶೀರ್ವದಿಸಿದ್ದರಿಂದ ನಾವು ಮಹಾಜನಾಂಗವಾಗಿದ್ದೇವಲ್ಲಾ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆದರೆ ಯೋಸೇಫನ ಸಂತಾನದವರು ಯೆಹೋಶುವನಿಗೆ, “ನೀನು ಚೀಟು ಹಾಕಿ, ನಮಗೆ ಒಂದೇ ಭಾಗವನ್ನು ಕೊಟ್ಟದ್ದೇಕೆ? ಯೆಹೋವನು ನಮ್ಮನ್ನು ಇಂದಿನವರೆಗೂ ಆಶೀರ್ವದಿಸಿರುವುದರಿಂದ ನಾವು ಮಹಾಜನಾಂಗವಾಗಿದ್ದೇವಲ್ಲಾ?” ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಜೋಸೆಫ್ಯರು ಯೆಹೋಶುವನಿಗೆ, “ನೀವು ಚೀಟುಹಾಕಿ, ನಮಗೆ ಒಂದೇ ಒಂದುಭಾಗವನ್ನು ಕೊಟ್ಟಿದ್ದೀರಿ, ಇದು ಸರಿಯೆ? ಸರ್ವೇಶ್ವರ ಸ್ವಾಮಿ ನಮ್ಮನ್ನು ಇಂದಿನವರೆಗೂ ಆಶೀರ್ವದಿಸಿ ನಮ್ಮನ್ನು ಮಹಾಜನಾಂಗವಾಗಿಸಿದ್ದಾರಲ್ಲವೆ?” ಎಂದು ಕೇಳಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೋಸೇಫನ ವಂಶಸ್ಥರು ಯೆಹೋಶುವನೊಂದಿಗೆ ಮಾತನಾಡಿ, “ನೀನು ನಮಗೆ ಸ್ವಾಸ್ತ್ಯದ ಒಂದು ಕ್ಷೇತ್ರವನ್ನು ಮಾತ್ರ ಕೊಟ್ಟಿರುವೆ. ಆದರೆ ನಾವು ಬಹಳ ಜನರಿದ್ದೇವೆ. ಯೆಹೋವನು ತನ್ನ ಜನರಿಗೆ ಕೊಟ್ಟ ಈ ದೇಶದಲ್ಲಿ ನೀನು ನಮಗೆ ಕೇವಲ ಒಂದು ಭಾಗವನ್ನು ಮಾತ್ರ ಏಕೆ ಕೊಟ್ಟೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಯೋಸೇಫನ ಸಂತತಿಯರು ಯೆಹೋಶುವನಿಗೆ, “ಯೆಹೋವ ದೇವರು ನಮ್ಮನ್ನು ಈವರೆಗೂ ಆಶೀರ್ವದಿಸುತ್ತಾ ಬಂದದ್ದರಿಂದ, ನಾವು ಮಹಾ ಜನಾಂಗವಾಗಿದ್ದೇವೆ. ಹೀಗಿರುವಾಗ ನೀವು ನಮಗೆ ಸೊತ್ತಾಗಿ ಒಂದೇ ಒಂದು ಭಾಗವನ್ನು ಮಾತ್ರ ಪಾಲನ್ನಾಗಿ ಕೊಟ್ಟಿದ್ದು ಏಕೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 17:14
12 ತಿಳಿವುಗಳ ಹೋಲಿಕೆ  

ಇದಲ್ಲದೆ ನಾನು ನಿನ್ನ ಅಣ್ಣಂದಿರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ನಾನು ಕತ್ತಿಬಿಲ್ಲುಗಳಿಂದ ಅಮೋರಿಯರ ವಶದಿಂದ ತಪ್ಪಿಸಿ ಪಡೆದ ಬೆಟ್ಟದ ತಪ್ಪಲನ್ನು ನಿನಗೆ ಕೊಟ್ಟಿದ್ದೇನೆ ಎಂದು ಹೇಳಿದನು.


ಅದರೆ ಅವನ ತಂದೆ ಒಪ್ಪದೆ - ಮಗನೇ, ನಾನು ಬಲ್ಲೆ, ಬಲ್ಲೆ; ಇವನಿಂದಲೂ ಜನಾಂಗವುಂಟಾಗುವದು; ಇವನೂ ಬಲಿಷ್ಠನಾಗುವನು; ಆದರೂ ಇವನಿಗಿಂತಲೂ ಇವನ ತಮ್ಮನು ಬಲಿಷ್ಠನಾಗುವನು; ತಮ್ಮನ ಸಂತತಿಯಲ್ಲಿಯೇ ಜನರು ಹೇರಳವಾಗಿ ಹುಟ್ಟುವರು ಎಂದು ಹೇಳಿದನು.


ಇಸ್ಸಾಕಾರ್ ಕುಲದ ಯೋಸೇಫನ ಮಗನಾದ ಇಗಾಲ್,


ಇದು ಯೋಸೇಫನ ಮಕ್ಕಳಾದ ಮನಸ್ಸೆ ಎಫ್ರಾಯೀಮ್ ಎಂಬ ಕುಲಗಳಿಗೆ ಸಿಕ್ಕಿದ ಸ್ವಾಸ್ತ್ಯದ ಮೇರೆಯು.


ಯೆಹೋಶುವನು ಅವರಿಗೆ - ಮಹಾಜನಾಂಗವಾದ ನಿಮಗೆ ಎಫ್ರಾಯೀಮ್ ಬೆಟ್ಟದ ಸೀಮೆ ಸಾಲದಿದ್ದರೆ ಪೆರಿಜ್ಜೀಯರ ಮತ್ತು ರೆಫಾಯರ ಸೀಮೆಗಳಿಗೆ ಹೋಗಿ ಅಲ್ಲಿನ ಕಾಡು ಕಡಿದು ಸ್ಥಳಮಾಡಿಕೊಳ್ಳಿರಿ ಅಂದನು.


ಮನಸ್ಸೆಯ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಎಫ್ರಾಯೀವಿುಗೆ ಒಂದು ಪಾಲು.


ಆ ಕಾಲದಲ್ಲಿ ಅವನು ಅವರನ್ನು ಆಶೀರ್ವದಿಸಿ - ಇಸ್ರಾಯೇಲ್ಯರು ಯಾರನ್ನಾದರೂ ಆಶೀರ್ವದಿಸುವಾಗ - ಎಫ್ರಾಯೀಮನಿಗೂ ಮನಸ್ಸೆಗೂ ಉಂಟಾದ ಸಂತತಿಯಂತೆ ದೇವರು ನಿನಗೂ ಸಂತಾನವನ್ನು ಅನುಗ್ರಹಿಸಲಿ ಎಂದು ನಿಮ್ಮನ್ನು ದೃಷ್ಟಾಂತಮಾಡಿ ಹೇಳುವರು ಅಂದನು. ಹೀಗೆ ಹೇಳಿದ್ದರಿಂದ ಎಫ್ರಾಯೀಮನನ್ನು ಮನಸ್ಸೆಗೆ ಮುಂದಾಗಿ ಇಟ್ಟನು.


ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂವಿುಯನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು.


ಅವರು ಯೋಸೇಫನ ಮಗನಾದ ಮನಸ್ಸೆಯ ಕುಲದವರಿಗೇ ಮದುವೆಯಾದದರಿಂದ ಅವರ ಸ್ವಾಸ್ತ್ಯವು ತಂದೆಯ ಕುಲದಲ್ಲಿಯೇ ನಿಂತಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು