Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 15:8 - ಕನ್ನಡ ಸತ್ಯವೇದವು J.V. (BSI)

8 ಅಲ್ಲಿಂದ ಅದು ಯೆರೂಸಲೇಮ್ ಪಟ್ಟಣವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣಮಾರ್ಗವಾಗಿ ಹಿನ್ನೋಮ್ ತಗ್ಗಿನ ಪಶ್ಚಿಮದಲ್ಲಿಯೂ ರೆಫಾಯೀಮ್ ತಗ್ಗಿನ ಉತ್ತರದಲ್ಲಿಯೂ ಇರುವ ಬೆಟ್ಟದ ತುದಿಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಬೆನ್ ಹಿನ್ನೋಮ್ ಕಣಿವೆಗೆ ಹೋಗುತ್ತದೆ. ಅಲ್ಲಿಂದ ಅದು ಯೆರೂಸಲೇಮ್ ಪಟ್ಟಣವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣ ಮಾರ್ಗವಾಗಿ ಹಿನ್ನೋಮ್ ಕಣಿವೆಯ ಪಶ್ಚಿಮದಲ್ಲಿರುವ ರೆಫಾಯೀಮ್ ಕಣಿವೆಯ ಉತ್ತರದಲ್ಲಿರುವ ಬೆಟ್ಟದ ತುದಿಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಬೆನ್ ಹಿನ್ನೋಮನ ಕಣಿವೆಗೆ ಹೊಗುತ್ತದೆ. ಅಲ್ಲಿಂದ ಅದು ಜೆರುಸಲೇಮ್ ನಗರವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣ ಮಾರ್ಗವಾಗಿ ಹಿನ್ನೋಮ್ ಕಣಿವೆಯ ಪಶ್ಚಿಮದಲ್ಲೂ ರೆಫಾಯೀಮ್ ಕಣಿವೆಯ ಉತ್ತರದಲ್ಲೂ ಇರುವ ಬೆಟ್ಟದ ತುದಿಗೆ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆ ಸೀಮೆಯು ಜೆರುಸಲೇಮ್ ಎಂದು ಕರೆಯಲ್ಪಟುವ ಯೆಬೂಸಿಯ ನಗರದ ದಕ್ಷಿಣ ಮಾರ್ಗವಾಗಿ ಬೆನ್‌ಹಿನ್ನೋಮ್ ಕಣಿವೆಗೆ ಹೋಗುತ್ತದೆ. ಆ ಸ್ಧಳದಲ್ಲಿ ಸೀಮೆಯು ಹಿನ್ನೋಮ್ ಕಣಿವೆಯ ಪಶ್ಚಿಮದಿಕ್ಕಿನ ಬೆಟ್ಟದ ತುದಿಗೆ ಹೋಗುತ್ತದೆ. ಇದು ರೆಫಾಯೀಮ್ ಕಣಿವೆಯ ಉತ್ತರದ ಕೊನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅಲ್ಲಿಂದ ಯೆಬೂಸಿಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣಮಾರ್ಗವಾಗಿ ಹಿನ್ನೋಮ್ ತಗ್ಗನ್ನು ದಾಟಿ, ಉತ್ತರಕ್ಕಿರುವ ರೆಫಾಯಿಮ್ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕೆ ಬೆನ್ ಹಿನ್ನೋಮನ ತಗ್ಗಿನ ಮುಂದಿರುವ ಬೆಟ್ಟದ ಶಿಖರದವರೆಗೂ ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 15:8
17 ತಿಳಿವುಗಳ ಹೋಲಿಕೆ  

ನೆಫ್ತೋಹ ಬುಗ್ಗೆಯ ಮೇಲೆ ಬೆನ್‍ಹಿನ್ನೋಮ್ ತಗ್ಗಿನ ಈಚೆಗೂ ರೆಫಾಯಿಮ್ ತಗ್ಗಿನ ಉತ್ತರದಲ್ಲಿಯೂ ಇರುವ ಬೆಟ್ಟದ ಅಂಚಿಗೆ ಹೋಗಿ ಅಲ್ಲಿಂದ ಯೆಬೂಸಿಯರ ಬೆಟ್ಟದ ದಕ್ಷಿಣದಲ್ಲಿದ್ದ ಬೆನ್‍ಹಿನ್ನೋಮ್ ತಗ್ಗಿನ ಮಾರ್ಗವಾಗಿ ಏನ್‍ರೋಗೆಲಿಗೆ ಬರುತ್ತದೆ.


ಯೆರೂಸಲೇವಿುನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸುವದು ಯೆಹೂದಕುಲದವರಿಂದ ಆಗದೆ ಹೋಯಿತು. ಆದದರಿಂದ ಅವರು ಇಂದಿನವರೆಗೂ ಯೆಹೂದಕುಲದವರೊಡನೆ ಯೆರೂಸಲೇವಿುನಲ್ಲೇ ವಾಸವಾಗಿದ್ದಾರೆ.


ಆ ಮನುಷ್ಯನು ಒಪ್ಪದೆ ತನ್ನ ಎರಡು ಕತ್ತೆಗಳಿಗೆ ತಡಿಹಾಕಿಸಿ ಉಪಪತ್ನಿಯನ್ನು ಕರೆದುಕೊಂಡು ಹೊರಟನು.


ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮ್, ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ನಗರಗಳೂ ಅವುಗಳ ಗ್ರಾಮಗಳೂ ಇವೇ. ಬೆನ್ಯಾಮೀನ್ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯವು ಇದೇ.


ತಮ್ಮ ಗಂಡುಹೆಣ್ಣು ಮಕ್ಕಳನ್ನು ಯಾರೂ ಮೋಲೆಕನಿಗೋಸ್ಕರ ಆಹುತಿ ಕೊಡದಂತೆ ಬೇನ್‍ಹಿನ್ನೋಮ್ ತಗ್ಗಿನಲ್ಲಿದ್ದ ತೋಫೆತ್ ಎಂಬ ಸ್ಥಳವನ್ನು ಹೊಲೆಮಾಡಿದನು.


ಯೆರೂಸಲೇವಿುನಲ್ಲಿದ್ದ ಯೆಬೂಸಿಯರನ್ನು ಹೊರಡಿಸುವದು ಬೆನ್ಯಾಮೀನ್ಯರಿಂದ ಆಗದೆ ಹೋಯಿತು. ಅವರು ಇಂದಿನವರೆಗೂ ಬೆನ್ಯಾಮೀನ್ಯರ ಸಂಗಡ ಯೆರೂಸಲೇವಿುನಲ್ಲಿಯೇ ವಾಸವಾಗಿದ್ದಾರೆ.


ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಬಂದು ಯೆಹೋವನ ಆಲಯದ ಪ್ರಾಕಾರದಲ್ಲಿ ನಿಂತುಕೊಂಡು -


ಆಹಾ, ಈ ಕಾರಣದಿಂದ ಈ ಸ್ಥಳಕ್ಕೆ ತೋಫೆತ್ ಮತ್ತು ಬೆನ್‍ಹಿನ್ನೋವಿುನ ತಗ್ಗು ಎಂಬ ಹೆಸರುಗಳು ಹೋಗಿ ಕೊಲೆಯ ತಗ್ಗು ಎಂಬ ಹೆಸರಾಗುವ ಕಾಲ ಬರುವದು;


ಬೋಕಿಯ ಬಾಗಿಲಿನ ಸಮೀಪದಲ್ಲಿರುವ ಬೆನ್‍ಹಿನ್ನೋಮ್ ತಗ್ಗಿಗೆ ಹೋಗಿ ನಾನು ನಿನಗೆ ತಿಳಿಸುವ ಮಾತುಗಳನ್ನು ಸಾರು -


ಹೊಲಕೊಯ್ಯುವವನು ದಂಟುಗಳನ್ನು ಒಟ್ಟುಗೂಡಿಸಿ ಕೈಯಿಂದ ತೆನೆಗಳನ್ನು ಕತ್ತರಿಸುವ ಹಾಗಿರುವದು; ಹೌದು, ರೆಫಾಯೀಮ್ ತಗ್ಗಿನಲ್ಲಿ ಹಕ್ಕಲನ್ನು ಆರಿಸುವಂತಿರುವದು.


ಅವನು ಬೆನ್‍ಹಿನ್ನೋಮ್ ಎಂಬ ತಗ್ಗಿನಲ್ಲಿ ಧೂಪ ಹಾಕಿಸಿದ್ದಲ್ಲದೆ ಯೆಹೋವನು ಇಸ್ರಾಯೇಲ್ಯರ ಎದುರಿನಿಂದ ಓಡಿಸಿಬಿಟ್ಟ ಜನಾಂಗಗಳ ಅಸಹ್ಯಕಾರ್ಯಗಳನ್ನು ಅನುಸರಿಸಿ ತನ್ನ ಮಕ್ಕಳನ್ನು ಆಹುತಿಕೊಟ್ಟನು.


ಫಿಲಿಷ್ಟಿಯರು ಇನ್ನೊಮ್ಮೆ ಹೊರಟು ಬಂದು ರೆಫಾಯೀಮ್ ತಗ್ಗಿನಲ್ಲಿ ಇಳುಕೊಂಡರು.


ಫಿಲಿಷ್ಟಿಯರು ದೇಶದೊಳಗೆ ನುಗ್ಗಿ ರೆಫಾಯೀಮ್ ತಗ್ಗಿಗೆ ಬಂದು ಪಾಳೆಯ ಮಾಡಿಕೊಂಡಿದ್ದಾರೆಂದು ತಿಳಿದು


ಯೆಹೂದ್ಯರು ಯೆರೂಸಲೇವಿುನವರೊಡನೆ ಯುದ್ಧಮಾಡಿ ಅದನ್ನು ಹಿಡಿದು ಜನರನ್ನು ಕತ್ತಿಯಿಂದ ಸಂಹರಿಸಿ ಪಟ್ಟಣಕ್ಕೆ ಬೆಂಕಿಹೊತ್ತಿಸಿದರು.


ದಾವೀದನು ಇಸ್ರಾಯೇಲ್ಯರೆಲ್ಲರನ್ನೂ ಕರಕೊಂಡು ಯೆಬೂಸೆನಿಸಿಕೊಂಡಿದ್ದ ಯೆರೂಸಲೇವಿುಗೆ ವಿರೋಧವಾಗಿ ಹೊರಟನು. ಆ ಪ್ರಾಂತದ ಮೂಲನಿವಾಸಿಗಳು ಯೆಬೂಸಿಯರು.


ಜನೋಹ, ಅದುಲ್ಲಾಮ್ ಇವುಗಳೂ ಇವುಗಳ ಗ್ರಾಮಗಳೂ ಲಾಕೀಷ್ ಊರೂ ಇದರ ಪ್ರಾಂತಗಳೂ ಅಜೇಕವೂ ಅದರ ಗ್ರಾಮಗಳೂ ಯೆಹೂದ ಕುಲದವರ ನಿವಾಸಸ್ಥಾನಗಳು. ಅವರು ಬೇರ್ಷೆಬದಿಂದ ಹಿನ್ನೋಮ್ ತಗ್ಗಿನವರೆಗೂ ವಾಸಿಸುತ್ತಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು