ಯೆಹೆಜ್ಕೇಲನು 48:16 - ಕನ್ನಡ ಸತ್ಯವೇದವು J.V. (BSI)16 ರಾಜಧಾನಿಯ ಆಳತೆಯು ಹೀಗಿರಬೇಕು; ಬಡಗಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ, ತೆಂಕಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ, ಮೂಡಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ, ಪಡುವಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಪಟ್ಟಣದ ಅಳತೆಯು ಹೀಗಿರಬೇಕು: ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು, ದಕ್ಷಿಣದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು; ಪೂರ್ವದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು ಮತ್ತು ಪಶ್ಚಿಮಕ್ಕೆ ನಾಲ್ಕು ಸಾವಿರದ ಐನೂರು ಮೊಳವು ಇರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ರಾಜಧಾನಿಯ ಅಳತೆ ಹೀಗಿರಬೇಕು: ಉತ್ತರದ ಪಕ್ಕವು 2,240 ಮೀಟರ್, ದಕ್ಷಿಣದ ಪಕ್ಕವು 2,250 ಮೀಟರ್, ಪೂರ್ವದ ಪಕ್ಕವು 2,250 ಮೀಟರ್, ಪಶ್ಚಿಮದ ಪಕ್ಕವು 2,250 ಮೀಟರ್. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ನಗರದ ಅಳತೆಯು ಈ ರೀತಿಯಾಗಿ ಇರುವದು; ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ; ದಕ್ಷಿಣದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ, ಪೂರ್ವದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಮತ್ತು ಪಶ್ಚಿಮ ದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಇರುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಮತ್ತು ಅದರ ಅಳತೆಯು ಈ ರೀತಿ ಇರುತ್ತದೆ: ಉತ್ತರದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ದಕ್ಷಿಣದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ಪೂರ್ವಕ್ಕೆ ಸುಮಾರು ಎರಡೂವರೆ ಕಿಲೋಮೀಟರ್, ಪಶ್ಚಿಮಕ್ಕೆ ಸುಮಾರು ಎರಡೂವರೆ ಕಿಲೋಮೀಟರ್. ಅಧ್ಯಾಯವನ್ನು ನೋಡಿ |