Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 44:24 - ಕನ್ನಡ ಸತ್ಯವೇದವು J.V. (BSI)

24 ವ್ಯಾಜ್ಯವಾಗುವಲ್ಲಿ ಅದನ್ನು ತೀರಿಸಲು ನಿಂತು ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಲಿ; ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್ತುಗಳು ಆಚರಿಸಲ್ಪಡುವಂತೆ ನೋಡಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ವ್ಯಾಜ್ಯವಾಡುವಾಗ ಅವರ ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಬೇಕು. ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್ತುಗಳನ್ನು ಪರಿಶುದ್ಧ ದಿನವೆಂದು ಆಚರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ವ್ಯಾಜ್ಯವಾಗುವಾಗ ಅದನ್ನು ತೀರಿಸಲು ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಲಿ; ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್‍ಗಳನ್ನು ಜನರು ಆಚರಿಸುವಂತೆ ನೋಡಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ವ್ಯಾಜ್ಯಗಳಿಗೆ ತೀರ್ಪು ನೀಡುವ ನ್ಯಾಯಾಧಿಶರಾಗಿ ಯಾಜಕರು ಸೇವೆಮಾಡಬೇಕು ಮತ್ತು ನನ್ನ ಆಡಳಿತವನ್ನು ಆಧರಿಸಿ ಅವರು ತೀರ್ಪು ನೀಡಬೇಕು. ಅವರು ವಿಶೇಷವಾದ ಕೂಟಗಳನ್ನು ಏರ್ಪಡಿಸುವಾಗ ನನ್ನ ವಿಧಿನಿಯಮಗಳನ್ನು ಅನುಸರಿಸುವರು ಮತ್ತು ವಿಶೇಷವಾದ ಎಲ್ಲಾ ರಜಾದಿನಗಳನ್ನು ಮತ್ತು ಸಬ್ಬತ್ ದಿನಗಳನ್ನು ಅವರು ಗೌರವಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 “ ‘ವ್ಯಾಜ್ಯವಾಗುವಾಗ ಅದನ್ನು ತೀರಿಸಲು ಯಾಜಕರು ನನ್ನ ನ್ಯಾಯಾನುಸಾರವಾಗಿ ನ್ಯಾಯಾಧಿಪತಿಗಳಾಗಿ ನ್ಯಾಯತೀರಿಸಲಿ. ಅವರು ನನ್ನ ತೀರ್ಪುಗಳನ್ನೂ, ನನ್ನ ನಿಯಮಗಳನ್ನೂ ನಾನು ನೇಮಿಸಿದ ಹಬ್ಬಗಳಲ್ಲಿಯೂ ನನ್ನ ಸಬ್ಬತ್ ದಿನಗಳಲ್ಲಿಯೂ ಪರಿಶುದ್ಧವಾಗಿ ಪಾಲಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 44:24
16 ತಿಳಿವುಗಳ ಹೋಲಿಕೆ  

ದಾವೀದನು ಇವರಲ್ಲಿ ಯೆಹೋವನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗಾಗಿ ಇಪ್ಪತ್ತನಾಲ್ಕು ಸಾವಿರ ಮಂದಿಯನ್ನೂ ನ್ಯಾಯಾಧಿಪತಿಗಳನ್ನಾಗಿ ಮತ್ತು


ಅಲ್ಲಿನ ಯಾಜಕರು ನನ್ನ ವಿಧಿಗಳನ್ನು ಭಂಗಮಾಡಿದ್ದಾರೆ, ನನ್ನ ಪರಿಶುದ್ಧವಸ್ತುಗಳನ್ನು ಹೊಲೆಮಾಡಿದ್ದಾರೆ; ಮೀಸಲಾದದ್ದಕ್ಕೂ ಮೀಸಲಲ್ಲದ್ದಕ್ಕೂ ಭೇದವೆಣಿಸಲಿಲ್ಲ, ಶುದ್ಧಾಶುದ್ಧವಿವೇಚನೆಯನ್ನು ಬೋಧಿಸಲಿಲ್ಲ; ನಾನು ನೇವಿುಸಿದ ಸಬ್ಬತ್ ದಿನಗಳಿಗೆ ವಿಮುಖರಾಗಿದ್ದಾರೆ; ಇದರಿಂದ ನಾನು ಅವರ ಮಧ್ಯದಲ್ಲಿ ಅಪಕೀರ್ತಿಗೆ ಗುರಿಯಾಗಿದ್ದೇನೆ.


ಆದರೆ ಒಂದು ವೇಳೆ ನಾನು ತಡಮಾಡಿದರೂ ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಬೇಕೆಂದು ಈ ಸಂಗತಿಗಳನ್ನು ಬರೆದಿದ್ದೇನೆ. ಆ ಸಭೆಯು ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ.


ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು. ಊರೀಮ್ ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬದಾಗಿ ದೇಶಾಧಿಪತಿಯು ತೀರ್ಪುಮಾಡಿದನು.


ವ್ಯಾಜ್ಯವಾಡುವ ಆ ಇಬ್ಬರೂ ಯೆಹೋವನ ಸನ್ನಿಧಿಯಲ್ಲಿ ಯಾಜಕರ ಮುಂದೆಯೂ ಆಗ ಇರುವ ನ್ಯಾಯಾಧಿಪತಿಗಳ ಮುಂದೆಯೂ ನಿಲ್ಲಬೇಕು.


ಲೇವಿಕುಲದವರಾದ ಯಾಜಕರಲ್ಲಿ ಕೆಲವರು ಹತ್ತಿರವಿರಬೇಕು. ನಿಮ್ಮ ದೇವರಾದ ಯೆಹೋವನು ಅವರನ್ನೇ ತನ್ನ ಸಾನ್ನಿಧ್ಯಸೇವೆಯನ್ನು ಮಾಡುವದಕ್ಕೂ ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವದಕ್ಕೂ ಆದುಕೊಂಡಿದ್ದಾನಲ್ಲ; ಅನುಮಾನವಾದ ಎಲ್ಲಾ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸಬೇಕು.


ನನಗೆ ಜ್ಞಾವನ್ನು ದಯಪಾಲಿಸು; ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಂಡು ನಡೆಯುವೆನು.


ಇದಲ್ಲದೆ ತಮ್ಮನ್ನು ದೇವಜನರನ್ನಾಗಿ ಮಾಡಿರುವ ಯೆಹೋವನು ನಾನೇ ಎಂದು ಅವರು ತಿಳುಕೊಳ್ಳುವಂತೆ ನನಗೂ ಅವರಿಗೂ ಗುರುತಾದ ಸಬ್ಬತ್ ದಿನಗಳನ್ನು ಅವರಿಗೆ ನೇವಿುಸಿದೆನು.


ನಾನು ನೇವಿುಸಿದ ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿರಿ; ನಾನು ನಿಮ್ಮ ದೇವರಾದ ಯೆಹೋವನು ಎಂದು ನೀವು ತಿಳುಕೊಳ್ಳುವಂತೆ ಅವು ನಿಮಗೂ ನನಗೂ ಗುರುತಾಗಿರುವವು ಎಂದು ಹೇಳಿದೆನು.


ದೇಶದ ಜನರಾದರೋ ಹಬ್ಬಗಳಲ್ಲಿ ಯೆಹೋವನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಬಡಗಣ ಬಾಗಿಲಿಂದ ಆರಾಧಿಸುವದಕ್ಕೆ ಪ್ರವೇಶಿಸಿದವನು ತೆಂಕಣ ಬಾಗಿಲಿಂದ ಹೊರಡಲಿ; ತೆಂಕಣ ಬಾಗಿಲಿಂದ ಪ್ರವೇಶಿಸಿದವನು ಬಡಗಣ ಬಾಗಿಲಿಂದ ಹೊರಡಲಿ; ತಾನು ಪ್ರವೇಶಿಸಿದ ಬಾಗಿಲಿಂದ ಹಿಂದಿರುಗದೆ ಬಂದ ಮುಖವಾಗಿಯೇ ಹೋಗಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು