Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 43:7 - ಕನ್ನಡ ಸತ್ಯವೇದವು J.V. (BSI)

7 ನುಡಿಯುವಾತನು ನನಗೆ ಹೀಗೆ ಹೇಳಿದನು - ನರಪುತ್ರನೇ, ಇದು ನನ್ನ ಸಿಂಹಾಸನ ಸ್ಥಾನ, ನನ್ನ ಪಾದಸನ್ನಿಧಿ; ಇಲ್ಲಿ ನಾನು ಇಸ್ರಾಯೇಲ್ಯರ ಮಧ್ಯೆ ಸದಾ ವಾಸಿಸುವೆನು; ಇಸ್ರಾಯೇಲ್‍ವಂಶದವರಾಗಲಿ ಅವರ ಅರಸರಾಗಲಿ ತಮ್ಮ ದೇವದ್ರೋಹದಿಂದಲೂ ಗತಿಸಿದ ಅರಸರ ಶವಗಳಿಂದಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಮಾತನಾಡುವಾತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಇದು ನನ್ನ ಸಿಂಹಾಸನ, ನನ್ನ ಪಾದ ಪೀಠ, ಇಲ್ಲಿ ನಾನು ಇಸ್ರಾಯೇಲರ ಮಧ್ಯದಲ್ಲಿ ಸದಾ ವಾಸಿಸುವೆನು. ಇಸ್ರಾಯೇಲ್ ವಂಶದವರಾಗಲಿ, ಅವರ ಅರಸರಾಗಲಿ ತಮ್ಮ ದೇವದ್ರೋಹದಿಂದಲೂ, ಗತಿಸಿದ ಅರಸರ ಶವಗಳಿಂದಲೂ ನನ್ನ ಪರಿಶುದ್ಧ ನಾಮವನ್ನು ಅಪವಿತ್ರ ಮಾಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ನುಡಿಯುವಾತನು ನನಗೆ ಹೀಗೆ ಹೇಳಿದನು: “ನರಪುತ್ರನೇ, ಇದು ನನ್ನ ಸಿಂಹಾಸನಸ್ಥಾನ, ನನ್ನ ಪಾದಸನ್ನಿಧಿ. ಇಲ್ಲಿ ನಾನು ಇಸ್ರಯೇಲರ ಮಧ್ಯೆ ಸದಾ ವಾಸಿಸುವೆನು. ಇಸ್ರಯೇಲ್ ವಂಶದವರಾಗಲಿ ಅವರ ಅರಸರಾಗಲಿ, ತಮ್ಮ ದೇವದ್ರೋಹದಿಂದ, ಗತಿಸಿದ ಅರಸರ ಶವಗಳಿಂದ ಹಾಗು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆಲಯದೊಳಗಿಂದ ಬಂದ ಸ್ವರವು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇದು ನನ್ನ ಸಿಂಹಾಸನವೂ ಪಾದಪೀಠವೂ ಇರುವ ಸ್ಥಳ. ನಾನು ಇಲ್ಲಿ ನನ್ನ ಜನರಾದ ಇಸ್ರೇಲರ ಮಧ್ಯದಲ್ಲಿ ನಿರಂತರವೂ ವಾಸಿಸುವೆನು. ಇಸ್ರೇಲ್ ಜನಾಂಗವು ಇನ್ನು ಮುಂದೆ ನನ್ನ ಪವಿತ್ರವಾದ ಹೆಸರನ್ನು ಹಾಳುಮಾಡುವದಿಲ್ಲ. ರಾಜರೂ ಅವರ ಜನರೂ ಲೈಂಗಿಕ ಪಾಪಗಳನ್ನು ಮಾಡಿ ನನ್ನನ್ನು ಅವಮಾನಪಡಿಸರು. ಅವರ ರಾಜರುಗಳ ಮೃತಶರೀರವನ್ನು ಇಲ್ಲಿ ಸಮಾಧಿ ಮಾಡುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅವರು ನನಗೆ, “ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ನನ್ನ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲರ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಎಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರದಿಂದಲೂ ಅವರ ಅರಸರ ಮರಣದ ಸಮಯದಲ್ಲಿ ಅವರ ಅಂತ್ಯಕ್ರಿಯೆಯ ವಿಧಿಗಳ ಅರ್ಪಣೆಯಿಂದ ಅಪವಿತ್ರಗೊಳಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 43:7
43 ತಿಳಿವುಗಳ ಹೋಲಿಕೆ  

ಈಗಲಾದರೂ ತಮ್ಮ ದೇವದ್ರೋಹವನ್ನು ಮತ್ತು ಅರಸರ ಶವಗಳನ್ನು ನನಗೆ ದೂರಮಾಡಲಿ; ಆಗ ನಾನು ಅವರ ಮಧ್ಯೆ ಸದಾ ವಾಸಿಸುವೆನು.


ದೇವರು ಸರ್ವಾಧಿಪತ್ಯವನ್ನು ವಹಿಸಿಕೊಂಡಿದ್ದಾನೆ; ತನ್ನ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾನೆ.


ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು; ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದು ಹಾಕುವೆನು; ನಿಮ್ಮ ಬೊಂಬೆಗಳ ಮುಂಡಗಳ ಮೇಲೆ ನಿಮ್ಮ ಮುಂಡಗಳನ್ನು ಬೀಸಾಡುವೆನು; ನಿಮ್ಮ ವಿಷಯದಲ್ಲಿ ಅಸಹ್ಯಪಡುವೆನು.


ಇನ್ನು ಶಾಪಗ್ರಸ್ತವಾದದ್ದು ಒಂದೂ ಇರುವದಿಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನವಿರುವದು.


ಇಸ್ರಾಯೇಲ್ ವಂಶದವರೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಹೋಗಿರಿ, ನಿಮ್ಮ ಬೊಂಬೆಗಳನ್ನು ಸೇವಿಸಿಕೊಳ್ಳಿರಿ; ಮುಂದಂತು ನನ್ನ ಮಾತನ್ನು ಕೇಳೇ ಕೇಳುವಿರಿ, ಇನ್ನು ಮೇಲೆ ನನ್ನ ಪರಿಶುದ್ಧನಾಮವನ್ನು ನಿಮ್ಮ ಬಲಿಗಳಿಂದಲೂ ಬೊಂಬೆಗಳಿಂದಲೂ ನೀವು ಅಪಕೀರ್ತಿಗೆ ಗುರಿಮಾಡುವದೇ ಇಲ್ಲ.


ಅವುಗಳ ತಲೆಗಳ ಮೇಲ್ಗಡೆಯ ನೆಲಗಟ್ಟಿನ ಮೇಲೆ ಇಂದ್ರ ನೀಲಮಣಿಯಂತೆ ಹೊಳೆಯುವ ಸಿಂಹಾಸನಾಕಾರವು ಕಾಣಿಸಿತು; ಅದರ ಮೇಲೆ ನರರೂಪದಂಥ ರೂಪವುಳ್ಳ ಒಬ್ಬಾತನು ಆಸೀನನಾಗಿದ್ದನು.


ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಜನಾಂಗಗಳು ನಡುಗಲಿ. ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನು ಆಳುತ್ತಾನೆ; ಭೂವಿುಯು ಕಂಪಿಸಲಿ.


ಅವರು ಕೂಡಿ ಬಂದಾಗ ಅರಸನಾದ ದಾವೀದನು ಎದ್ದು ನಿಂತು ಅವರಿಗೆ ಹೇಳಿದ್ದೇನಂದರೆ - ನನ್ನ ಸಹೋದರರೇ, ಪ್ರಜೆಗಳೇ, ಕೇಳಿರಿ. ಯೆಹೋವನ ನಿಬಂಧನಮಂಜೂಷಕ್ಕೋಸ್ಕರವೂ ನಮ್ಮ ದೇವರ ಪಾದಪೀಠಕ್ಕೋಸ್ಕರವೂ ಆಲಯವನ್ನು ಕಟ್ಟಿಸಬೇಕೆಂದು ಮನಸ್ಸು ಮಾಡಿ ಅದಕ್ಕಾಗಿ ಎಲ್ಲವನ್ನೂ ಸಿದ್ಧಪಡಿಸಿದೆನು.


ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು? ನಾವು ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ. ಇದರ ಸಂಬಂಧವಾಗಿ ದೇವರು ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ.


ಯೇಸು ಅವನಿಗೆ - ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು, ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು ಅವನ ಬಳಿಯಲ್ಲಿ ಬಿಡಾರವನ್ನು ಮಾಡಿಕೊಳ್ಳುವೆವು.


ಆ ವಾಕ್ಯವೆಂಬವನು ನರಾವತಾರ ಎತ್ತಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.


ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು.


ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಆ ದಿನದಲ್ಲಿ ನಾನು ವಿಗ್ರಹಗಳನ್ನು ದೇಶದೊಳಗಿಂದ ನಿರ್ನಾಮಮಾಡುವೆನು, ಅವು ಇನ್ನು ಯಾರ ನೆನಪಿಗೂ ಬಾರವು; ಅಲ್ಲದೆ ಪ್ರವಾದಿಗಳನ್ನೂ ದುರಾತ್ಮವನ್ನೂ ದೇಶದೊಳಗಿಂದ ತೊಲಗಿಸಿಬಿಡುವೆನು.


ಹೀಗೆ ನಾನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ನೆಲೆಯಾಗಿ ನಿಮ್ಮ ದೇವರಾದ ಯೆಹೋವನಾಗಿದ್ದೇನೆ ಎಂದು ನಿಮಗೆ ದೃಢವಾಗುವದು; ಆಗ ಯೆರೂಸಲೇಮು ಪವಿತ್ರವಾಗಿರುವದು; ಮ್ಲೇಚ್ಫರು ಇನ್ನು ಅದನ್ನು ಹಾದುಹೋಗರು.


ಎಫ್ರಾಯೀಮು - ವಿಗ್ರಹಗಳ ಗೊಡವೆ ನನಗೆ ಇನ್ನೇಕೆ [ಅಂದುಕೊಳ್ಳುವದು]; ನಾನು ಅದಕ್ಕೆ ಒಲಿದು ಕಟಾಕ್ಷಿಸುವೆನು; ನಾನು ಸೊಂಪಾದ ತುರಾಯಿ ಮರದಂತಿದ್ದೇನೆ; ನನ್ನಿಂದಲೇ ನೀನು ಫಲಿಸುವಿ.


ಪಟ್ಟಣದ ಸುತ್ತಳತೆಯು ಹದಿನೆಂಟು ಸಾವಿರ ಮೊಳ; ಅದನ್ನು ನಿರ್ಮಿಸಿದಂದಿನಿಂದ ಆ ಪಟ್ಟಣಕ್ಕೆ ಯೆಹೋವನ ನೆಲೆ ಎಂಬ ಹೆಸರಾಗುವದು.


ನಾನು ನನ್ನ ಪವಿತ್ರನಾಮವನ್ನು ನನ್ನ ಜನರಾದ ಇಸ್ರಾಯೇಲ್ಯರ ನಡುವೆ ವ್ಯಕ್ತಗೊಳಿಸುವೆನು, ಅದನ್ನು ಇನ್ನು ಮುಂದೆ ಅಪಕೀರ್ತಿಗೆ ಗುರಿಯಾಗಲೀಸೆನು; ನಾನೇ ಯೆಹೋವ, ಇಸ್ರಾಯೇಲಿನ ಸದಮಲಸ್ವಾವಿು ಎಂದು ಜನಾಂಗಗಳಿಗೆ ಗೊತ್ತಾಗುವದು.


ಇಗೋ, ನಾನು ನೋಡಲಾಗಿ ಕೆರೂಬಿಗಳ ತಲೆಗಳ ಮೇಲಣ ನೆಲಗಟ್ಟಿನ ಮೇಲ್ಗಡೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನಾಕಾರವು ಕಾಣಿಸಿತು.


ನಮ್ಮ ಪವಿತ್ರಾಲಯಸ್ಥಾನವು ಆದಿಯಿಂದಲೂ ಉನ್ನತವಾದ ಮಹಿಮೆಯ ಸಿಂಹಾಸನವಾಗಿದೆ.


ಅವರ ಅಧರ್ಮಕ್ಕೂ ಪಾಪಕ್ಕೂ ಎರಡರಷ್ಟು ಶಿಕ್ಷೆಯನ್ನು ಮೊದಲು ಕೊಡುವೆನು; ಹೆಣಗಳಂತಿರುವ ತಮ್ಮ ಹೇಯ ವಿಗ್ರಹಗಳಿಂದ ನನ್ನ ದೇಶವನ್ನು ಹೊಲಸು ಮಾಡಿ ನನ್ನ ಸ್ವಾಸ್ತ್ಯವನ್ನು ತಮ್ಮ ಅಸಹ್ಯ ವಸ್ತುಗಳಿಂದ ತುಂಬಿಸಿದ್ದಾರಷ್ಟೆ.


ನಿನ್ನ ನಾಮದ ಮೇಲೆ ದೃಷ್ಟಿಯಿಡು, ನಿನ್ನ ಮಹಿಮೆಯ ಸಿಂಹಾಸನವನ್ನು ಅಸಡ್ಡೆಮಾಡಬೇಡ, ಅವಮಾನಪಡಿಸಬೇಡ; ನೀನು ನಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕಕ್ಕೆ ತಂದುಕೋ, ಅದನ್ನು ಭಂಗಪಡಿಸದಿರು.


ಆ ಕಾಲದಲ್ಲಿ ಯೆರೂಸಲೇಮನ್ನು ಯೆಹೋವನ ಸಿಂಹಾಸನವೆಂದು ಕರೆಯುವರು; ಯೆಹೋವನ ನಾಮಮಹತ್ವದ ಸ್ಥಾನವಾದ ಯೆರೂಸಲೇವಿುಗೆ ಸಕಲ ಜನಾಂಗಗಳವರು ನೆರೆದುಬರುವರು; ಇನ್ನು ಮೇಲೆ ತಮ್ಮ ದುಷ್ಟಹೃದಯದ ಹಟದಂತೆ ನಡೆಯರು.


ಯೆಹೋವನು ಹೀಗನ್ನುತ್ತಾನೆ - ಆಕಾಶವು ನನಗೆ ಸಿಂಹಾಸನ, ಭೂವಿುಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು?


ಅರಸನಾದ ಉಜ್ಜೀಯನು ಕಾಲವಾದ ವರುಷದಲ್ಲಿ ಕರ್ತನು ಉನ್ನತೋನ್ನತ ಸಿಂಹಾಸನಾರೂಢನಾಗಿರುವದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಮಂದಿರದಲ್ಲೆಲ್ಲಾ ಹರಡಿತ್ತು.


ಆತನು - ಇದು ನನ್ನ ಶಾಶ್ವತವಾಸಸ್ಥಾನ; ಇಲ್ಲೇ ಇರುವೆನು; ಇದು ನನಗೆ ಇಷ್ಟವು.


ನಮ್ಮ ಯೆಹೋವದೇವರನ್ನು ಘನಪಡಿಸಿರಿ; ಆತನ ಪಾದಪೀಠದ ಮುಂದೆ ಅಡ್ಡಬೀಳಿರಿ. ಆತನು ಪರಿಶುದ್ಧನು.


ನೀನು ಜಯಿಸಿದ ಬಹು ಜನರನ್ನು ಸೆರೆಹಿಡುಕೊಂಡು ಹೋಗಿ ನಿನಗೆ ದ್ರೋಹಿಗಳಾದ ಮನುಷ್ಯರಿಂದಲೇ ಕಪ್ಪಗಳನ್ನು ಸಂಗ್ರಹಿಸಿ ಉನ್ನತಸ್ಥಾನಕ್ಕೆ ಏರಿದ್ದೀ. ದೇವನಾದ ಯಾಹುವೇ, ಅಲ್ಲೇ ವಾಸಿಸುವಿ.


ನಾನು ಇಸ್ರಾಯೇಲ್ಯರ ಮಧ್ಯದಲ್ಲಿ ವಾಸವಾಗಿದ್ದು ಅವರಿಗೆ ದೇವರಾಗಿರುವೆನು.


ದೇವರು ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ. ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು.


ನಾನು ಇಸ್ರಾಯೇಲ್ಯರ ಶವಗಳನ್ನು ಅವರ ಬೊಂಬೆಗಳ ಮುಂದೆ ಹಾಕಿ ನಿಮ್ಮ ಯಜ್ಞವೇದಿಗಳ ಸುತ್ತಲು ನಿಮ್ಮ ಎಲುಬುಗಳನ್ನು ಎರಚಿಬಿಡುವೆನು.


ಆ ವಂಶದವರು ಎತ್ತರವಾದ ಎಲ್ಲಾ ಗುಡ್ಡಗಳ ಮೇಲೂ ಎಲ್ಲಾ ಬೆಟ್ಟಗಳ ತುದಿಗಳಲ್ಲಿಯೂ ಸೊಂಪಾದ ಎಲ್ಲಾ ಮರಗಳ ಕೆಳಗೂ ತಮ್ಮ ಸಮಸ್ತ ವಿಗ್ರಹಗಳಿಗೆ ಸುಗಂಧಹೋಮಮಾಡುತ್ತಿದ್ದ ದಟ್ಟವಾದ ಎಲ್ಲಾ ಏಲಾ ಮರಗಳ ಕೆಳಗೂ ಹತರಾಗಿ ತಮ್ಮ ಯಜ್ಞವೇದಿಗಳ ಸುತ್ತಲು ತಮ್ಮ ಬೊಂಬೆಗಳ ನಡುವೆ ಬಿದ್ದಿರುವಾಗ ನಾನೇ ಯೆಹೋವನು ಎಂದು ಗೊತ್ತಾಗುವದು.


ನಾನು ಅವರ ಮಧ್ಯದಲ್ಲಿ ವಾಸಿಸುವದಕ್ಕೆ ನನಗೆ ಒಂದು ದೇವಸ್ಥಾನವನ್ನು ಕಟ್ಟಿಸಬೇಕು.


ನಾನು ನಿನಗೋಸ್ಕರ ಒಂದು ಮಂದಿರವನ್ನು ಕಟ್ಟಿಸಿದ್ದೇನೆ; ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಿರಲಿ ಎಂದು ಪ್ರಾರ್ಥನೆಮಾಡಿದನು.


ಪೂಜಾಸ್ಥಳಗಳಲ್ಲಿಯೂ ದಿನ್ನೆಗಳ ಮೇಲೆಯೂ ಎಲ್ಲಾ ಹಸುರು ಮರಗಳ ಕೆಳಗೆಯೂ ಯಜ್ಞಧೂಪಗಳನ್ನು ಸಮರ್ಪಿಸಿದನು.


ದೇವರಿಗೆ ಸಹಸ್ರಾರು ಮಾತ್ರವಲ್ಲ, ಲಕ್ಷಾಂತರ ರಥಗಳು ಇವೆ. ಕರ್ತನಾದ ಯೆಹೋವನು ಅವುಗಳ ಸಮೇತವಾಗಿ ಸೀನಾಯಿಬೆಟ್ಟದಲ್ಲಿದ್ದ ಹಾಗೆ ಪವಿತ್ರಾಲಯದಲ್ಲಿದ್ದಾನೆ.


ಆ ಕುಂಟುಜನವನ್ನು ಉಳಿಸಿ ಕಾಪಾಡುವೆನು, ದೂರತಳ್ಳಲ್ಪಟ್ಟ ಪ್ರಜೆಯನ್ನು ಪ್ರಬಲ ಜನಾಂಗವನ್ನಾಗಿ ಮಾಡುವೆನು; ಯೆಹೋವನು ಚೀಯೋನ್ ಪರ್ವತದಲ್ಲಿ ಇಂದಿನಿಂದ ಎಂದೆಂದಿಗೂ ಅವರ ರಾಜನಾಗಿರುವನು.


ಆಗ ಯಾವನಾದರೂ ಮತ್ತೆ ಪ್ರವಾದನೆಮಾಡಿದರೆ ಅವನ ಹೆತ್ತ ತಾಯಿತಂದೆಗಳು ಅವನಿಗೆ - ನೀನುಳಿಯಬೇಡ; ಯೆಹೋವನ ಹೆಸರೆತ್ತಿ ಸುಳ್ಳಾಡುತ್ತೀ ಎಂದು ಹೇಳಿ ಆ ಹೆತ್ತ ತಾಯಿತಂದೆಗಳೇ ಅವನ ಪ್ರವಾದನೆಯ ನಿವಿುತ್ತ ಅವನನ್ನು ಇರಿದುಬಿಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು