Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 43:4 - ಕನ್ನಡ ಸತ್ಯವೇದವು J.V. (BSI)

4 ಆಗ ಯೆಹೋವನ ತೇಜಸ್ಸು ಮೂಡಣ ಬಾಗಿಲ ಮಾರ್ಗವಾಗಿ ದೇವಸ್ಥಾನವನ್ನು ಪ್ರವೇಶಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆಗ ಯೆಹೋವನ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿನ ಮಾರ್ಗವಾಗಿ ಆಲಯವನ್ನು ಪ್ರವೇಶಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಆಗ ಸರ್ವೇಶ್ವರನ ತೇಜಸ್ಸು ಪೂರ್ವಬಾಗಿಲ ಮಾರ್ಗವಾಗಿ ದೇವಸ್ಥಾನವನ್ನು ಪ್ರವೇಶಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಯೆಹೋವನ ಮಹಿಮೆಯು ಪೂರ್ವದಿಕ್ಕಿನ ದ್ವಾರದ ಮೂಲಕ ಆಲಯದೊಳಗೆ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆಗ ಯೆಹೋವ ದೇವರ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿನ ಮಾರ್ಗವಾಗಿ ಆಲಯದೊಳಗೆ ಪ್ರವೇಶಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 43:4
11 ತಿಳಿವುಗಳ ಹೋಲಿಕೆ  

ಆಗ ಯೆಹೋವನು ನನಗೆ - ಈ ಬಾಗಿಲು ಮುಚ್ಚಿರಬೇಕು, ಇದನ್ನು ತೆರೆಯಕೂಡದು. ಇದರಿಂದ ಯಾರೂ ಪ್ರವೇಶಿಸದಿರಲಿ; ಇಸ್ರಾಯೇಲಿನ ದೇವರಾದ ಯೆಹೋವನು ಇದರಿಂದ ಪ್ರವೇಶಿಸಿದ್ದಾನಲ್ಲಾ; ಇದು ಮುಚ್ಚೇ ಇರಬೇಕು.


ಇಗೋ, ಇಸ್ರಾಯೇಲಿನ ದೇವರ ತೇಜಸ್ಸು ಮೂಡಣ ಮಾರ್ಗವಾಗಿ ಬಂತು; ಆತನ ಧ್ವನಿಯು ಜಲಪ್ರವಾಹದ ಘೋಷದಂತಿತ್ತು; ಆತನ ತೇಜಸ್ಸಿನಿಂದ ಭೂವಿುಯು ಬೆಳಗಿತು.


ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿತು.


ಮಳೆಗಾಲದಲ್ಲಿ ಮೇಘಮಂಡಲದೊಳಗೆ ಬಿಲ್ಲು ಹೊಳೆಯುವಂತೆ ಆತನ ಸುತ್ತಣ ಪ್ರಕಾಶವು ಹೊಳೆಯುತ್ತಿತ್ತು. ಹೀಗೆ ಯೆಹೋವನ ಮಹಿಮಾದ್ಭುತ ದರ್ಶನವು ಆಯಿತು. ಇದು ಕಣ್ಣಿಗೆ ಬೀಳಲು ನಾನು ಅಡ್ಡಬಿದ್ದು ಮಾತಾಡುವಾತನ ವಾಣಿಯನ್ನು ಕೇಳಿದೆನು.


ಆಗ ಯೆಹೋವನ ತೇಜಸ್ಸು ಪಟ್ಟಣದ ಮಧ್ಯದೊಳಗಿಂದ ಏರಿ ಪಟ್ಟಣಕ್ಕೆ ಮೂಡಲಲ್ಲಿರುವ ಗುಡ್ಡದ ಮೇಲೆ ನಿಂತಿತು.


ಆಮೇಲೆ ಆತನು ನನ್ನನ್ನು ಮೂಡಣ ಬಾಗಿಲಿಗೆ ಬರಮಾಡಿದಾಗ


ಬಳಿಕ ಆ ಪುರುಷನು ಬಡಗಣ ಹೆಬ್ಬಾಗಿಲ ಮಾರ್ಗವಾಗಿ ನನ್ನನ್ನು ದೇವಸ್ಥಾನದ ಮುಂದುಗಡೆಗೆ ಕರತಂದನು; ಆಹಾ, ನಾನು ನೋಡಲಾಗಿ ಯೆಹೋವನ ತೇಜಸ್ಸು ಯೆಹೋವನ ಆಲಯವನ್ನು ತುಂಬಿಕೊಂಡಿತ್ತು; ಅದನ್ನು ನೋಡಿ ಅಡ್ಡಬಿದ್ದೆನು.


ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿರುವದರಿಂದಲೂ ಯೆಹೋವನ ತೇಜಸ್ಸು ಗುಡಾರದೊಳಗೆ ತುಂಬಿರುವದರಿಂದಲೂ ಮೋಶೆ ಗುಡಾರದಲ್ಲಿ ಹೋಗಲಾರದೆ ಇದ್ದನು.


ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.


ಆಮೇಲೆ ದೇವರಾತ್ಮವು ನನ್ನನ್ನು ಎತ್ತಿಕೊಂಡು ಹೋಗಲಾಗಿ ಮಹಿಮೆಯಿಂದ ಕೂಡಿದ ಯೆಹೋವನಿಗೆ ಆತನ ವಾಸಸ್ಥಾನದಲ್ಲಿ ಸ್ತೋತ್ರವಾಗಲಿ ಎಂಬ ಮಹಾಶಬ್ದವು ನನ್ನ ಹಿಂದೆ ಭರಭರನೆ ಕೇಳಿಸಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು