ಯೆಹೆಜ್ಕೇಲನು 42:6 - ಕನ್ನಡ ಸತ್ಯವೇದವು J.V. (BSI)6 ಕೋಣೆಗಳು ಮೂರಂತಸ್ತಾಗಿದ್ದವು; [ಹೊರಗಣ] ಪ್ರಾಕಾರದ ಕೋಣೆಗಳಿಗೆ ಇದ್ದಂತೆ ಈ ಕೋಣೆಗಳಿಗೆ ಕೈಸಾಲೆಗಳಿರಲಿಲ್ಲ; ಆದದರಿಂದ ನೆಲಕ್ಕೆತ್ತರದಲ್ಲಿನ ಮೇಲಣ ಕೋಣೆಗಳು ಕೆಳಗಣ ಮತ್ತು ನಡುವಣ ಕೋಣೆಗಳಿಗಿಂತ ಇಕ್ಕಟ್ಟಾಗಿದ್ದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಕೋಣೆಗಳು ಮೂರು ಅಂತಸ್ತಾಗಿದ್ದವು. ಹೊರಗಿನ ಅಂಗಳದ ಕೋಣೆಗಳಿಗೆ ಇದ್ದಂತೆ ಈ ಕೋಣೆಗಳಿಗೆ ಪಡಸಾಲೆಗಳಿರಲಿಲ್ಲ. ಆದುದರಿಂದ ನೆಲದಿಂದ ಎತ್ತರದಲ್ಲಿದ್ದ ಮೇಲಿನ ಕೋಣೆಗಳು ಕೆಳಗಿನ ಮತ್ತು ಮಧ್ಯದ ಕೋಣೆಗಳಿಗಿಂತ ಚಿಕ್ಕದಾಗಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಕೋಣೆಗಳು ಮೂರಂತಸ್ತಾಗಿದ್ದವು; ಹೊರಗಿನ ಪ್ರಾಕಾರದ ಕೋಣೆಗಳಿಗೆ ಇದ್ದಂತೆ ಈ ಕೋಣೆಗಳಿಗೆ ಕೈಸಾಲೆಗಳಿರಲಿಲ್ಲ; ಆದುದರಿಂದ ನೆಲಕ್ಕೆತ್ತರದಲ್ಲಿನ ಮೇಲಿನ ಕೋಣೆಗಳು ಕೆಳಗಿನ ಮತ್ತು ನಡುವಣ ಕೋಣೆಗಳಿಗಿಂತ ಇಕ್ಕಟ್ಟಾಗಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಇವು ಮೂರು ಅಂತಸ್ತುಗಳಾಗಿದ್ದವು. ಆದರೆ ಅಂಗಳದ ಕಂಬಗಳ ಹಾಗೆ ಇವುಗಳಿಗೆ ಕಂಬಗಳಿರಲಿಲ್ಲ. ಆದ್ದರಿಂದ ನೆಲಕ್ಕೆ ಎತ್ತರದಲ್ಲಿನ ಮೇಲಣ ಕೋಣೆಗಳು ಕೆಳಗಿನ ಮತ್ತು ನಡುವಣ ಕೋಣೆಗಳಿಗಿಂತ ಚಿಕ್ಕದಾಗಿದ್ದವು. ಅಧ್ಯಾಯವನ್ನು ನೋಡಿ |