Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 41:8 - ಕನ್ನಡ ಸತ್ಯವೇದವು J.V. (BSI)

8 ದೇವಸ್ಥಾನದ ಸುತ್ತುಮುತ್ತಲು ಒಂದು ಜಗಲಿಯು ಕಾಣಿಸಿತು; ಅದು ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ತುಂಬಾ ಆರು ಮೊಳದ ಅಳತೇಕೋಲಿನಷ್ಟು ಎತ್ತರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ದೇವಸ್ಥಾನದ ಸುತ್ತುಮುತ್ತಲೂ ಒಂದು ಜಗಲಿಯು ಕಾಣಿಸಿತು; ಅದು ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮೊಳದ ಅಳತೆ ಕೋಲಿನಷ್ಟು ಎತ್ತರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ದೇವಸ್ಥಾನದ ಸುತ್ತಮುತ್ತಲು ಒಂದು ಜಗಲಿ ಕಾಣಿಸಿತು. ಅದು ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಮೂರು ಮೀಟರ್ ಅಳತೇ ಕೋಲಿನಷ್ಟು ಎತ್ತರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆಲಯದ ಸುತ್ತಲೂ ಒಂದು ಜಗಲಿ ಇರುವದನ್ನು ನಾನು ಕಂಡೆನು. ಇದು ಪಕ್ಕದ ಕೋಣೆಗಳಿಗೆ ಅಸ್ತಿವಾರವಾಗಿತ್ತು. ಇದು ಒಂದು ಅಳತೆ ಕೋಲಿನಷ್ಟು ಎತ್ತರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆಲಯದ ಸುತ್ತಮುತ್ತಲೂ ಒಂದು ಜಗಲಿಯನ್ನು ನಾನು ನೋಡಿದೆನು. ಅದು ಪಕ್ಕದ ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮೊಳದ ಅಳತೆಯ ಕೋಲಿನಷ್ಟು ಎತ್ತರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 41:8
3 ತಿಳಿವುಗಳ ಹೋಲಿಕೆ  

ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು; ಆ ಪುರುಷನ ಕೈಯಲ್ಲಿ ಆರು ಉದ್ದಮೊಳದ ಅಳತೇಕೋಲೊಂದಿತ್ತು (ಉದ್ದಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿಯುದ್ದ); ಅವನು ಆ ಗೋಡೆಯ ದಪ್ಪವನ್ನು ಒಂದು ಕೋಲು, ಎತ್ತರವನ್ನು ಒಂದು ಕೋಲು ಅಳೆದನು.


ಪಟ್ಟಣವು ಚಚ್ಚೌಕವಾಗಿದೆ; ಅದರ ಉದ್ದವು ಅದರ ಅಗಲದಷ್ಟಿದೆ. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆಮಾಡಿದನು; ಅಳತೆಯು ಹನ್ನೆರಡು ನೂರು ಮೈಲಿ ಆಯಿತು. ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿವೆ.


ಯಜ್ಞವೇದಿಯು ಉದ್ದಮೊಳದ ಅಳತೆಯ ಪ್ರಕಾರ ಹೀಗಿರಬೇಕು (ಉದ್ದಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿಯುದ್ದ) - ಕೆಳಭಾಗದ ಎತ್ತರವು ಒಂದು ಮೊಳ, ಮೇಲಿನ ಬಿಡುವಿನ ಅಗಲವು ಸುತ್ತಲೂ ಒಂದು ಮೊಳ, ಬಿಡುವಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಒಂದು ಗೇಣು; ಇದೇ ಯಜ್ಞವೇದಿಯ ಪೀಠ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು