Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 40:48 - ಕನ್ನಡ ಸತ್ಯವೇದವು J.V. (BSI)

48 ಕೂಡಲೆ ಅವನು ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರತಂದು ಅದನ್ನು ಅಳೆಯಲು ಅದರ ಎದುರುಬದುರಿನ ನಿಲವು ಕಂಬಗಳ ಅಗಲ ಐದೈದು ಮೊಳ, ಬಾಗಿಲಿನ ಎರಡು ಪಕ್ಕದ [ಗೋಡೆಗಳ] ಅಗಲ ಮೂರು ಮೂರು ಮೊಳ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

48 ಕೂಡಲೆ ಅವನು ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆ ತಂದನು. ಅದನ್ನು ಅಳೆಯಲು, ಅದರ ಎದುರುಬದುರಿನ ಕಂಬಗಳ ಅಗಲ ಐದೈದು ಮೊಳ, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಮೂರು ಮೂರು ಮೊಳವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

48 ಕೂಡಲೆ ಆ ಪುರುಷ ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆದುತಂದು ಅದನ್ನು ಅಳೆದನು. ಅದರ ಎದುರುಬದುರಿನ ನಿಲವುಕಂಬಗಳ ಅಗಲ ಎರಡುವರೆ ಮೀಟರುಗಳು, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಅರ್ಧರ್ಧ ಮೀಟರ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

48 ಆಮೇಲೆ ಅವನು ಆಲಯದ ಕೈಸಾಲೆಗೆ ನನ್ನನ್ನು ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿಯೂ ಇರುವ ಗೋಡೆಗಳನ್ನು ಅವನು ಅಳತೆ ಮಾಡಲಾಗಿ ಗೋಡೆಯು ಐದು ಮೊಳ ದಪ್ಪ, ಮೂರು ಮೊಳ ಅಗಲವಾಗಿತ್ತು. ಅದರ ಮಧ್ಯದ ಸ್ಥಳ ಹದಿನಾಲ್ಕು ಮೊಳವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

48 ಅವನು ನನ್ನನ್ನು ಮನೆಯ ದ್ವಾರಮಂಟಪಕ್ಕೆ ಕರೆದುಕೊಂಡು ಹೋಗಿ, ದ್ವಾರಮಂಟಪ ಪ್ರತಿಯೊಂದು ಕಂಬವನ್ನೂ ಅಳೆದನು. ದ್ವಾರಮಂಟಪ ಅಗಲವು ಸುಮಾರು ಏಳು ಮೀಟರ್ ಮತ್ತು ಪಕ್ಕದ ಗೋಡೆಗಳ ಅಗಲವು ಎರಡೂ ಬದಿಗಳಲ್ಲಿ ಸುಮಾರು ಒಂದೂವರೆ ಮೀಟರ್ ಆಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 40:48
5 ತಿಳಿವುಗಳ ಹೋಲಿಕೆ  

ಅಗಲವು ಇಪ್ಪತ್ತು ಮೊಳ, ದೇವಾಲಯದ ಮುಂದುಗಡೆಯಲ್ಲಿದ್ದ ಮಂಟಪದ ಉದ್ದವು ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಎತ್ತರವು ಇಪ್ಪತ್ತು ಮೊಳ. ಸೊಲೊಮೋನನು ಅದರ ಒಳಮೈಯನ್ನು ಚೊಕ್ಕಬಂಗಾರದ ತಗಡಿನಿಂದ ಹೊದಿಸಿದನು.


ದೇವಾಲಯದ ಪರಿಶುದ್ಧ ಸ್ಥಳದ ಮುಂದುಗಡೆಯಲ್ಲಿ ಒಂದು ಮಂಟಪವಿತ್ತು; ಅದರ ಉದ್ದವು ದೇವಾಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಅಗಲವು ಹತ್ತು ಮೊಳ.


ಆಮೇಲೆ ಅವನು ಇನ್ನೂ ಮುಂದಕ್ಕೆ ಹೋಗಿ ಪರಿಶುದ್ಧ ಸ್ಥಳದ ಕೊನೆಯಲ್ಲಿ [ಗರ್ಭಗೃಹವನ್ನು] ಅಳೆಯಲು ದ್ವಾರದ ಒಂದೊಂದು ನಿಲವುಕಂಬದ ಅಗಲ ಎರಡೆರಡು ಮೊಳ, ದ್ವಾರದ ಅಗಲ ಆರು ಮೊಳ,


ದ್ವಾರಮಂಟಪದ ಪಕ್ಕದ ಗೋಡೆಗಳಲ್ಲಿ ತೆರೆಯಲಾಗದ ಕಿಟಕಿಗಳೂ [ಚಿತ್ರಿತ] ಖರ್ಜೂರ ವೃಕ್ಷಗಳೂ ಇದ್ದವು.


ಒಂದೊಂದು ಕದಕ್ಕೆ ಎರಡೆರಡು ಮಡಚುವ ಭಾಗಗಳು; ಇತ್ತಕಡೆಯ ಕದಕ್ಕೆ ಎರಡು ಭಾಗ, ಅತ್ತಕಡೆಯ ಕದಕ್ಕೆ ಎರಡು ಭಾಗ ಇದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು