Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 40:36 - ಕನ್ನಡ ಸತ್ಯವೇದವು J.V. (BSI)

36 ಅದರಲ್ಲಿ ಎಲ್ಲಾ ಕಡೆ ಕಿಟಕಿಗಳಿದ್ದವು; ಅದರ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಅಲ್ಲಿನ ಕೋಣೆಗಳ, ಕಂಬಗಳ, ಕೈಸಾಲೆಗಳ ಎಲ್ಲಾ ಕಡೆಗಳಲ್ಲಿಯೂ ಕಿಟಕಿಗಳಿದ್ದವು; ಅದರ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಅದರಲ್ಲಿ ಎಲ್ಲಾ ಕಡೆ ಕಿಟಕಿಗಳಿದ್ದವು; ಅದರ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಅದರ ಕೋಣೆಗಳು, ಗೋಡೆಗಳು ಮತ್ತು ಕೈಸಾಲೆ ಇವೆಲ್ಲವೂ ಬೇರೆ ದ್ವಾರದ ಅಳತೆಯಂತಿತ್ತು. ದ್ವಾರದ ಸುತ್ತಲೂ ಕಿಟಕಿಗಳಿದ್ದವು. ದ್ವಾರವು ಐವತ್ತು ಮೊಳ ಉದ್ದ, ಇಪ್ಪತ್ತೈದು ಮೊಳ ಅಗಲವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಅಲ್ಲಿಯ ಕೋಣೆಯ ಉಪವಿಭಾಗಗಳು, ಅಲ್ಲಿನ ಕಂಬಗಳು, ಅಲ್ಲಿನ ಕೈಸಾಲೆಗಳು ಮತ್ತು ಅದರ ಸುತ್ತಲೂ ಇರುವ ಕಿಟಕಿಗಳ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 40:36
5 ತಿಳಿವುಗಳ ಹೋಲಿಕೆ  

ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲಾ ಕಡೆಯಿದ್ದವು; ಹೆಬ್ಬಾಗಿಲಿನ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ.


ಅದರೊಳಗೆ ಎರಡು ಕಡೆ ಗೋಡೇಕೋಣೆಗಳು ಮೂರುಮೂರಿದ್ದವು; ಅಲ್ಲಿನ ನಿಲವುಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು; ಆ ಹೆಬ್ಬಾಗಿಲಿನ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ.


ಗೋಡೇಕೋಣೆಗಳಲ್ಲಿಯೂ ಒಳಗಣ ಎರಡು ಕಡೆಯ ನಿಲವು ಕಂಬಗಳಲ್ಲಿಯೂ ಕೈಸಾಲೆಯಲ್ಲಿಯೂ ತೆರೆಯಲಾಗದ ಕಿಟಕಿಗಳು ಹೆಬ್ಬಾಗಿಲೊಳಗೆ ಸುತ್ತುಮುತ್ತಲಿದ್ದವು; [ಹೊರಗಣ] ನಿಲವುಕಂಬಗಳಲ್ಲಿ ಖರ್ಜೂರವೃಕ್ಷಗಳು ಚಿತ್ರಿತವಾಗಿದ್ದವು.


ಅಲ್ಲಿ [ಗೋಡೆಯಲ್ಲಿದ್ದ] ಒಂದೊಂದು ಕೋಣೆಯ ಉದ್ದ ಒಂದು ಕೋಲು, ಅಗಲ ಒಂದು ಕೋಲು; ಆ ಗೋಡೇಕೋಣೆಗಳು ಒಂದಕ್ಕೊಂದು ಐದೈದು ಮೊಳ ದೂರವಾಗಿದ್ದವು; ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಲಿನ ಅಗಲವು ಒಂದು ಕೋಲು.


ಬೆಳಕು ಎದುರೆದುರಾಗಿ ಬೀಳುವಂತೆ ಎರಡು ಗೋಡೆಗಳಿಗೆ ಮೂರು ಮೂರು ಸಾಲು ಬೆಳಕು ಕಂಡಿಗಳಿದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು