Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 40:25 - ಕನ್ನಡ ಸತ್ಯವೇದವು J.V. (BSI)

25 ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಅಂಥ ಕಿಟಕಿಗಳೇ ಇದ್ದವು; ಹೆಬ್ಬಾಗಿಲಿನ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಕಿಟಕಿಗಳೇ ಇದ್ದವು; ಅದರ ಉದ್ದವೂ ಐವತ್ತು ಮೊಳ ಮತ್ತು ಅಗಲವೂ ಇಪ್ಪತ್ತೈದು ಮೊಳವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಅದರಲ್ಲೂ ಅದರ ಕೈಸಾಲೆಯಲ್ಲೂ ಎಲ್ಲ ಕಡೆ ಅಂಥ ಕಿಟಕಿಗಳೇ ಇದ್ದವು; ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಅಂಥ ಕಿಟಕಿಗಳೇ ಇದ್ದವು. ಆ ಪ್ರವೇಶದ್ವಾರವು ಐವತ್ತು ಮೊಳ ಉದ್ದ ಮತ್ತು ಇಪ್ಪತ್ತೈದು ಮೊಳ ಅಗಲವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಆ ಕಿಟಕಿಗಳ ಹಾಗೆಯೇ ಕಿಟಕಿಗಳೂ ಇದ್ದವು. ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 40:25
9 ತಿಳಿವುಗಳ ಹೋಲಿಕೆ  

ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು; ಆ ಹೆಬ್ಬಾಗಿಲಿನ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ.


ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲಾ ಕಡೆಯಿದ್ದವು; ಹೆಬ್ಬಾಗಿಲಿನ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ.


ಗೋಡೇಕೋಣೆಗಳಲ್ಲಿಯೂ ಒಳಗಣ ಎರಡು ಕಡೆಯ ನಿಲವು ಕಂಬಗಳಲ್ಲಿಯೂ ಕೈಸಾಲೆಯಲ್ಲಿಯೂ ತೆರೆಯಲಾಗದ ಕಿಟಕಿಗಳು ಹೆಬ್ಬಾಗಿಲೊಳಗೆ ಸುತ್ತುಮುತ್ತಲಿದ್ದವು; [ಹೊರಗಣ] ನಿಲವುಕಂಬಗಳಲ್ಲಿ ಖರ್ಜೂರವೃಕ್ಷಗಳು ಚಿತ್ರಿತವಾಗಿದ್ದವು.


ಇದಲ್ಲದೆ ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ. ನಿಮ್ಮ ಹೃದಯದೊಳಗೆ ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಡುವದೇ ಒಳ್ಳೇದು.


ಈಗ ಕಂಚಿನ ದರ್ಪಣದಲ್ಲಿ ಕಾಣಿಸುವಂತೆ [ದೇವರ ಮುಖವು] ನಮಗೆ ಮೊಬ್ಬಾಗಿ ಕಾಣಿಸುತ್ತದೆ; ಆಗ ಮುಖಾಮುಖಿಯಾಗಿ ಆತನನ್ನು ನೋಡುವೆವು. ಈಗ ಸ್ವಲ್ಪ ಮಾತ್ರ ನನಗೆ ತಿಳಿದದೆ; ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳುಕೊಂಡಂತೆ ನಾನು ಸಂಪೂರ್ಣವಾಗಿ ತಿಳುಕೊಳ್ಳುವೆನು.


ನನ್ನನ್ನು ನಂಬುವ ಒಬ್ಬನಾದರೂ ಕತ್ತಲೆಯಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.


ಗರ್ಭಗೃಹ, ಪ್ರಾಕಾರದಲ್ಲಿನ ದ್ವಾರಮಂಟಪಗಳು, ಹೊಸ್ತಲುಗಳು, ತೆರೆಯಲಾಗದ ಕಿಟಕಿಗಳು, ಹೊಸ್ತಲಿನ ಎದುರಿಗೆ ಮೂರಂತಸ್ತಾಗಿ ಸುತ್ತಲು ಕಟ್ಟಲ್ಪಟ್ಟ ಗೋಡೆಯಟ್ಟಗಳು, ಇವುಗಳನ್ನೂ ಅಳೆದನು;


ಬೆಳಕು ಎದುರೆದುರಾಗಿ ಬೀಳುವಂತೆ ಎರಡು ಗೋಡೆಗಳಿಗೆ ಮೂರು ಮೂರು ಸಾಲು ಬೆಳಕು ಕಂಡಿಗಳಿದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು