Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 40:13 - ಕನ್ನಡ ಸತ್ಯವೇದವು J.V. (BSI)

13 ಅವನು ಒಂದು ಕಡೆಯ ಗೋಡೇಕೋಣೆಗಳ ಮಾಳಿಗೆಯ ಹೊರಕೊನೆಯಿಂದ ಇನ್ನೊಂದು ಕಡೆಯ ಗೋಡೇಕೋಣೆಗಳ ಮಾಳಿಗೆಯ ಹೊರಕೊನೆಗೆ ಅಂದರೆ [ಒಂದು ಕೋಣೆಯ] ಬಾಗಿಲಿನಿಂದ [ಇನ್ನೊಂದು ಕೋಣೆಯ] ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಇಪ್ಪತೈದು ಮೊಳವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆಯಿಂದ ಇನ್ನೊಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆ ಅಂದರೆ ಒಂದು ಕೋಣೆಯ ಬಾಗಿಲಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಇಪ್ಪತ್ತೈದು ಮೊಳವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಕೊನೆಯಿಂದ ಇನ್ನೊಂದು ಕಡೆಯ ಗೋಡೇಕೋಣೆಗಳ ಮಾಳಿಗೆಯ ಹೊರ ಕೊನೆಗೆ, ಅಂದರೆ ಒಂದು ಕೋಣೆಯ ಬಾಗಿಲಿನಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಹನ್ನೆರಡುವರೆ ಮೀಟರಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಅವನು ಆ ಕೋಣೆಯ ಹೊರಭಾಗದ ತುದಿಯಿಂದ ಇನ್ನೊಂದು ಎದುರಿಗಿದ್ದ ಕೋಣೆಯ ಹೊರಭಾಗದ ತುದಿಯ ತನಕ ಅಳತೆ ಮಾಡಿದಾಗ ಅದು ಇಪ್ಪತ್ತೈದು ಮೊಳವಿತ್ತು. ಅದರ ಬಾಗಿಲುಗಳು ಎದುರುಬದುರಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆಗ ಅವನು, ಒಂದು ಕೋಣೆಯ ಉಪವಿಭಾಗದ ಮಾಳಿಗೆಯಿಂದ ಇನ್ನೊಂದು ಕೋಣೆಯ ಉಪವಿಭಾಗದ ಮಾಳಿಗೆಯವರೆಗೆ ಅಳೆದನು. ಆ ದ್ವಾರದಿಂದ ಈ ದ್ವಾರಕ್ಕೇರುವ ಅಗಲವು ಸುಮಾರು ಹದಿಮೂರು ಮೀಟರಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 40:13
3 ತಿಳಿವುಗಳ ಹೋಲಿಕೆ  

ಎರಡು ಪಕ್ಕಗಳಲ್ಲಿನ ಗೋಡೇಕೋಣೆಗಳ ಮುಂದೆ ಒಂದೊಂದು ಮೊಳ ಅವಕಾಶ; ಎರಡು ಕಡೆಯ ಗೋಡೇಕೋಣೆಗಳ ಅಗಲವು ಆರಾರು ಮೊಳ.


ಪ್ರಾಕಾರದಲ್ಲಿನ ನಿಲವುಕಂಬದವರೆಗೆ ನಿಲವುಕಂಬಗಳನ್ನು [ಅಳತೆ] ಮಾಡಲು ಅರುವತ್ತು ಮೊಳವಿದ್ದವು; ಹೆಬ್ಬಾಗಿಲನ್ನು ಸುತ್ತುಮುತ್ತಲು [ಅಳೆದನು].


ಅದರೊಳಗೆ ಎರಡು ಕಡೆ ಗೋಡೇಕೋಣೆಗಳು ಮೂರುಮೂರಿದ್ದವು; ಅಲ್ಲಿನ ನಿಲವುಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು; ಆ ಹೆಬ್ಬಾಗಿಲಿನ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು