ಯೆಹೆಜ್ಕೇಲನು 38:17 - ಕನ್ನಡ ಸತ್ಯವೇದವು J.V. (BSI)17 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳು ಪುರಾತನಕಾಲದಲ್ಲಿ ಬಹುವರುಷ ಪ್ರವಾದಿಸುತ್ತಾ ನಾನು ಒಬ್ಬನನ್ನು ಇಸ್ರಾಯೇಲ್ಯರ ಮೇಲೆ ಬೀಳಮಾಡುವೆನು ಎಂದು ಮುಂತಿಳಿಸಿದ್ದರಷ್ಟೆ; ನಾನು ಅವರ ಮೂಲಕ ಮುಂತಿಳಿಸಿದವನು ನೀನೇ ಅಲ್ಲವೇ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳು ಪುರಾತನ ಕಾಲದಲ್ಲಿ ಬಹು ವರ್ಷ ಪ್ರವಾದಿಸುತ್ತಾ, ನಾನು ಒಬ್ಬನನ್ನು ಇಸ್ರಾಯೇಲರ ಮೇಲೆ ಬೀಳ ಮಾಡುವೆನು” ಎಂದು ಮುಂತಿಳಿಸಿದಂತೆ; ನಾನು ಅವರ ಮೂಲಕ ಮುಂತಿಳಿಸಿದವನು ನೀನೇ ಅಲ್ಲವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ನನ್ನ ದಾಸರಾದ ಇಸ್ರಯೇಲಿನ ಪ್ರವಾದಿಗಳು ಪುರಾತನಕಾಲದಲ್ಲಿ ಬಹು ವರ್ಷ ಪ್ರವಾದಿಸುತ್ತಾ ನಾನು ಒಬ್ಬನನ್ನು ಇಸ್ರಯೇಲರ ಮೇಲೆ ಬೀಳಮಾಡುವೆನು, ಎಂದು ಮುಂತಿಳಿಸಿದ್ದರು; ನಾನು ಅವರ ಮುಖಾಂತರ ಮುಂತಿಳಿಸಿದವನು ನೀನೇ ಅಲ್ಲವೇ?’ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಇದು ನನ್ನ ಒಡೆಯನಾದ ಯೆಹೋವನ ನುಡಿ: “ಆಗ ನಾನು ನಿನ್ನ ವಿಷಯದಲ್ಲಿ ಹೇಳಿದ್ದು ಜನರು ಜ್ಞಾಪಕಕ್ಕೆ ಬರುವದು. ನಾನು ಇದನ್ನು ನನ್ನ ಸೇವಕರಾದ ಪ್ರವಾದಿಗಳಿಗೆ ತಿಳಿಸಿರುತ್ತೇನೆ ಎಂದು ಅರಿಯುವರು. ಹಿಂದಿನ ಕಾಲದಲ್ಲಿ ಇಸ್ರೇಲ್ ಪ್ರವಾದಿಗಳು ನನ್ನ ಪರವಾಗಿ ಮಾತನಾಡಿ ನೀವು ಅವರ ವಿರುದ್ಧವಾಗಿ ಯುದ್ಧಕ್ಕೆ ಬರುವಿರೆಂದು ಹೇಳಿರುತ್ತೇನೆ ಎಂಬುದನ್ನು ತಮ್ಮ ಜ್ಞಾಪಕಕ್ಕೆ ತರುವರು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಯಾವನ ವಿಷಯವಾಗಿ ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳಿಂದ ಪೂರ್ವಕಾಲದಲ್ಲಿ ಮಾತನಾಡಿದೆನೋ ಅವನು ನೀನೇ ಅಲ್ಲವೇ? ನಿನ್ನನ್ನು ಅವರಿಗೆ ವಿರೋಧವಾಗಿ ಬರಮಾಡುತ್ತೇನೆಂದು ಆ ದಿನಗಳಲ್ಲಿ ಅನೇಕ ವರ್ಷಗಳಿಗೆ ಮುಂಚೆ ಪ್ರವಾದಿಸಿದೆಯಲ್ಲವೇ? ಅಧ್ಯಾಯವನ್ನು ನೋಡಿ |