ಯೆಹೆಜ್ಕೇಲನು 36:36 - ಕನ್ನಡ ಸತ್ಯವೇದವು J.V. (BSI)36 ಯೆಹೋವನಾದ ನಾನೇ ಬಿದ್ದುಹೋದದನ್ನು ಕಟ್ಟಿ ಹಾಳಾದದನ್ನು ಬೆಳೆಯಿಸಿದ್ದೇನೆಂಬದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವದು; ಯೆಹೋವನಾದ ನಾನೇ ನುಡಿದಿದ್ದೇನೆ, ನಡಿಸುತ್ತೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201936 ಯೆಹೋವನಾದ ನಾನೇ ಬಿದ್ದುಹೋದದ್ದನ್ನು ಕಟ್ಟಿ, ಹಾಳಾದದ್ದನ್ನು ಬೆಳೆಯಿಸಿದ್ದೇನೆ ಎಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಯೆಹೋವನಾದ ನಾನೇ ನುಡಿದಿದ್ದೇನೆ, ನಾನೇ ಇದನ್ನು ಮಾಡುತ್ತೇನೆ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)36 ಸರ್ವೇಶ್ವರನಾದ ನಾನೇ ಬಿದ್ದುಹೋದುದನ್ನು ಕಟ್ಟಿ, ಹಾಳಾದುದನ್ನು ಬೆಳೆಯಿಸಿದ್ದೇನೆಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಸರ್ವೇಶ್ವರನಾದ ನಾನೇ ನುಡಿದಿದ್ದೇನೆ, ಹಾಗೆಯೇ ನಡೆಸುತ್ತೇನೆ.” ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್36 ದೇವರು ಹೇಳುವುದೇನೆಂದರೆ, “ಯೆಹೋವನಾದ ನಾನೇ ಹಾಳುಬಿದ್ದ ಆ ಕಟ್ಟಡಗಳನ್ನು ಮತ್ತೆ ಕಟ್ಟಿದೆನೆಂದೂ ಮತ್ತು ಬರಿದಾಗಿದ್ದ ಈ ದೇಶದಲ್ಲಿ ಬೆಳೆಯಿಸುವೆನೆಂದೂ ನಿನ್ನ ಸುತ್ತಲೂ ಇನ್ನೂ ಇರುವ ಜನಾಂಗಗಳು ತಿಳಿದುಕೊಳ್ಳುವವು. ನಾನೇ ಯೆಹೋವನು. ಇವುಗಳನ್ನು ನಾನೇ ಹೇಳಿದ್ದೇನೆ ಮತ್ತು ನಾನೇ ಇವುಗಳನ್ನು ನೆರವೇರಿಸುವೆನು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ36 ಯೆಹೋವ ದೇವರಾದ ನಾನೇ ಬಿದ್ದುಹೋದದ್ದನ್ನು ಕಟ್ಟಿ, ಹಾಳಾದದ್ದನ್ನು ಬೆಳೆಯಿಸಿದ್ದೇನೆ ಎಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ ಮತ್ತು ನಾನೇ ಇದನ್ನು ಮಾಡುತ್ತೇನೆ.’ ಅಧ್ಯಾಯವನ್ನು ನೋಡಿ |