Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 36:30 - ಕನ್ನಡ ಸತ್ಯವೇದವು J.V. (BSI)

30 ನೀವು ಕ್ಷಾಮದೇಶದವರೆಂದು ಜನಾಂಗಗಳು ನಿಮ್ಮನ್ನು ನಿಂದಿಸದಂತೆ ನಾನು ಮರದ ಹಣ್ಣನ್ನೂ ಹೊಲದ ಬೆಳೆಯನ್ನೂ ಹೆಚ್ಚಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ನೀವು ಕ್ಷಾಮ ದೇಶದವರೆಂದು ಜನಾಂಗಗಳು ಇನ್ನು ನಿಮ್ಮನ್ನು ನಿಂದಿಸದಂತೆ, ನಾನು ಮರದ ಹಣ್ಣನ್ನೂ, ಹೊಲದ ಬೆಳೆಯನ್ನೂ ಹೆಚ್ಚಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ನೀವು ಕ್ಷಾಮದೇಶದವರೆಂದು ಜನಾಂಗಗಳು ಇನ್ನು ನಿಮ್ಮನ್ನು ನಿಂದಿಸದಂತೆ ನಾನು ಮರದ ಹಣ್ಣನ್ನೂ ಹೊಲದ ಬೆಳೆಯನ್ನೂ ಹೆಚ್ಚಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ನಿಮ್ಮ ಮರಗಳಿಂದ ಯಥೇಚ್ಛವಾಗಿ ಹಣ್ಣು ದೊರಕುವಂತೆ ಮಾಡುವೆನು. ಹೊಲಗಳು ಒಳ್ಳೆಯ ಬೆಳೆಗಳನ್ನು ಕೊಡುವಂತೆ ಮಾಡಿ ನೀವು ಅನ್ಯದೇಶದಲ್ಲಿ ಹಸಿವಿನಿಂದ ನರಳುವ ದಿವಸಗಳು ತಿರುಗಿ ಬಾರದಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಜನಾಂಗಗಳಲ್ಲಿ ನಿಮಗೆ ಬರಗಾಲದ ನಿಂದೆಯು ಇನ್ನು ಮೇಲೆ ಬಾರದ ಹಾಗೆ ನಾನು ಮರಗಳ ಫಲವನ್ನೂ ಹೊಲದ ಆದಾಯವನ್ನೂ ಹೆಚ್ಚಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 36:30
11 ತಿಳಿವುಗಳ ಹೋಲಿಕೆ  

ತೋಟದ ಮರಗಳು ಹಣ್ಣುಬಿಡುವವು; ಹೊಲಗಳು ಒಳ್ಳೆಯ ಬೆಳೆಕೊಡುವವು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು; ಅವರ ಮೇಲೆ ಹೇರಿದ ನೊಗದ ಗೂಟಗಳನ್ನು ನಾನು ಮುರಿದುಹಾಕಿ ಅವರನ್ನು ಅಡಿಯಾಳಾಗಿ ಮಾಡಿಕೊಂಡವರ ಅಧೀನದಿಂದ ಬಿಡಿಸಿದಾಗ ನಾನೇ ಯೆಹೋವನು ಎಂದು ಅವರಿಗೆ ದೃಢವಾಗುವದು.


ನೀವು ಹೊಟ್ಟೆತುಂಬಾ ಊಟಮಾಡಿ ತೃಪ್ತಿಗೊಂಡು ನಿಮಗಾಗಿ ಅದ್ಭುತಕಾರ್ಯಗಳನ್ನು ಮಾಡಿದ ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ; ನನ್ನ ಜನರು ಎಂದಿಗೂ ಆಶಾಭಂಗಪಡರು.


ಯೆಹೋವನ ಸೇವಕರಾದ ಯಾಜಕರು ದ್ವಾರಮಂಟಪಕ್ಕೂ ಯಜ್ಞವೇದಿಗೂ ನಡುವೆ ಅಳುತ್ತಾ - ಯೆಹೋವನೇ, ನಿನ್ನ ಜನರನ್ನು ಕರುಣಿಸು; ಅನ್ಯಜನಾಂಗಗಳು ಅವರ ಹೆಸರನ್ನು ಕಟ್ಟುಗಾದೆಯಾಗಿ ಎತ್ತುವ ನಿಂದೆಗೆ ನಿನ್ನ ಸ್ವಾಸ್ತ್ಯದವರನ್ನು ಗುರಿಮಾಡಬೇಡ; ಅವರ ದೇವರು ಎಲ್ಲಿ ಎಂಬ ಮಾತು ಮ್ಲೇಚ್ಫರಲ್ಲಿ ಏಕೆ ಸಲ್ಲಬೇಕು ಎಂದು ವಿಜ್ಞಾಪಿಸಲಿ.


ನಾನು ಮುಂಗಾರು ಹಿಂಗಾರು ಮಳೆಗಳನ್ನು ಆಯಾ ಕಾಲದಲ್ಲಿಯೇ ಬರಮಾಡುವೆನು; ನಿಮ್ಮ ಹೊಲಗಳು ಒಳ್ಳೇ ಬೆಳೆಯನ್ನು ಕೊಡುವವು, ತೋಟದ ಮರಗಳು ಬಹಳ ಫಲಕೊಡುವವು;


ಜನಾಂಗಗಳ ವಶದಿಂದ ತಪ್ಪಿಸಿ ದೇಶದೇಶಗಳಿಂದ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡಿ ಇಸ್ರಾಯೇಲಿನ ಬೆಟ್ಟಗಳಲ್ಲಿಯೂ ತೊರೆಗಳ ಬಳಿಯಲ್ಲಿಯೂ ಸೀಮೆಯ ಎಲ್ಲಾ ಹಕ್ಕೆಗಳಲ್ಲಿಯೂ ಮೇಯಿಸುವೆನು.


ಅವುಗಳಿಗೆ ಒಳ್ಳೆಯ ಮೇವನ್ನು ಮೇಯಿಸುವೆನು; ಅವುಗಳ ಹುಲ್ಗಾವಲು ಇಸ್ರಾಯೇಲಿನ ಎತ್ತರವಾದ ಬೆಟ್ಟಗಳಲ್ಲಿರುವದು; ಅಲ್ಲಿ ಒಳ್ಳೆಯ ತೆವರಿನಲ್ಲಿ ಮಲಗುವವು; ಇಸ್ರಾಯೇಲಿನ ಬೆಟ್ಟಗಳಲ್ಲಿ ಹಸಿಹುಲ್ಲನ್ನು ಮೇಯುವವು.


ನಿಮ್ಮ ಭೂವಿುಯು ಫಲವತ್ತಾಗುವದು, ನೀವು ಸಮೃದ್ಧಿಯಾಗಿ ಊಟಮಾಡುವಿರಿ, ಮತ್ತು ಆ ದೇಶದಲ್ಲಿ ನೀವು ನಿರ್ಭಯವಾಗಿ ವಾಸಮಾಡುವಿರಿ.


ನೀತಿಯು ಆತನ ಮುಂದೆ ಹೋಗುತ್ತಾ ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿಮಾಡುವದು.


ಅವರು ಬಂದು ಚೀಯೋನ್ ಶಿಖರದಲ್ಲಿ ಹಾಡುವರು; ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕರು, ಕುರಿಮರಿ, ಅಂತು ಯೆಹೋವನು ಅನುಗ್ರಹಿಸುವ ಎಲ್ಲಾ ಮೇಲುಗಳನ್ನು ಅನುಭವಿಸಲು ಪ್ರವಾಹ ಪ್ರವಾಹವಾಗಿ ಬರುವರು; ಅವರ ಆತ್ಮವು ಹದವಾಗಿ ನೀರು ಹಾಯಿಸಿದ ತೋಟದಂತಿರುವದು; ಅವರು ಇನ್ನು ಕಳೆಗುಂದರು.


ಅವರ ಬಿನ್ನಹವನ್ನು ಲಾಲಿಸಿ ಅವರಿಗೆ ಹೀಗೆ ಹೇಳಿದನು - ಇಗೋ, ನಾನು ಧಾನ್ಯದ್ರಾಕ್ಷಾರಸತೈಲಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ; ಅವುಗಳಿಂದ ನಿಮಗೆ ತೃಪ್ತಿಯಾಗುವದು; ನಿಮ್ಮನ್ನು ಅನ್ಯಜನಾಂಗಗಳ ನಿಂದೆಗೆ ಇನ್ನು ಗುರಿಮಾಡೆನು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು