Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 35:1 - ಕನ್ನಡ ಸತ್ಯವೇದವು J.V. (BSI)

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 35:1
13 ತಿಳಿವುಗಳ ಹೋಲಿಕೆ  

ಯಾಕಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.


ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು -


ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು -


ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -


ನನ್ನ ಖಡ್ಗವು ಮೇಲಿನ ಲೋಕದಲ್ಲಿ ರೋಷಪಾನಮಾಡಿ ನಾನು ಶಪಿಸಿದ ಎದೋಮೆಂಬ ಜನಾಂಗದ ಮೇಲೆ ನ್ಯಾಯತೀರಿಸುವದಕ್ಕೆ ದುಮುಕುವದು.


ಆಹಾ, ರಕ್ತವರ್ಣದ ಉಡುಪನ್ನುಟ್ಟು ಘನವಸ್ತ್ರಗಳನ್ನು ಧರಿಸಿಕೊಂಡು ಮಹಾಶೌರ್ಯಯುಕ್ತನಾಗಿ ಮೆರೆಯುತ್ತಾ ಎದೋವಿುನ ಬೊಚ್ರದಿಂದ ಬರುವ ಈತನು ಯಾರು? ಸತ್ಯಾನುಸಾರವಾಗಿ ಮಾತಾಡುವ, ರಕ್ಷಿಸಲು ಸಮರ್ಥನಾದ ನಾನೇ.


ನೀವು ನನ್ನ ಕುರಿಗಳು, ನನ್ನ ಕಾವಲಿನ ಕುರಿಗಳು; ನರಪ್ರಾಣಿಗಳಾದ ನಿಮಗೆ ನಾನು ದೇವರು ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ.


ನರಪುತ್ರನೇ, ನೀನು ಸೇಯೀರ್ ಬೆಟ್ಟದ ಸೀಮೆಗೆ ಅಭಿಮುಖನಾಗಿ ಅದಕ್ಕೆ ಈ ದೈವೋಕ್ತಿಯನ್ನು ನುಡಿ -


ಯೆಹೋವನು ಇಂತೆನ್ನುತ್ತಾನೆ - ಎದೋಮು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಅದು ಕತ್ತಿಹಿಡಿದು ತನ್ನ ಸಹೋದರನನ್ನು ಹಿಂದಟ್ಟಿ ಕರುಣೆಯನ್ನು ತೊರೆದು ಸಿಟ್ಟಿನಿಂದ ಸದಾ ಸಿಗಿದುಬಿಡುತ್ತಾ ತನ್ನ ಕೋಪವನ್ನು ಶಾಶ್ವತಮಾಡಿಕೊಂಡಿತಷ್ಟೆ.


ದೂಮದ ವಿಷಯವಾದ ದೈವೋಕ್ತಿ. ಕಾವಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು, ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು ಎಂಬ ಕೂಗು ಸೇಯೀರಿನಿಂದ ನನಗೆ ಕೇಳಿಸುತ್ತಿತ್ತು.


ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ - ತೇಮಾನ್ ಸೀಮೆಗಿದ್ದ ಬುದ್ಧಿಯು ಇನ್ನಿಲ್ಲವೋ? ವಿವೇಕಿಗಳ ಆಲೋಚನಾಶಕ್ತಿಯು ಅಳಿಯಿತೋ? ಅವರ ಜ್ಞಾನವು ಮಾಯವಾಯಿತೋ?


ಕರ್ತನಾದ ಯೇಹೋವನು ಇಂತೆನ್ನುತ್ತಾನೆ - ಎದೋಮು ಯೆಹೂದವಂಶಕ್ಕೆ ಪ್ರತೀಕಾರಮಾಡಿದೆ; ಮುಯ್ಯಿಗೆ ಮುಯ್ಯಿತೀರಿಸಿ ಮಹಾಪರಾಧವನ್ನು ನಡಿಸಿದೆ;


ಓಬದ್ಯನಿಗಾದ ದೈವದರ್ಶನ. ಕರ್ತನಾದ ಯೆಹೋವನು ಎದೋವಿುನ ವಿಷಯವಾಗಿ ನುಡಿದ ವಾಕ್ಯ. ಯೆಹೋವನಿಂದ ಬಂದ ಸಮಾಚಾರವನ್ನು ಕೇಳಿದ್ದೇವೆ; ಆತನು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿಕಳುಹಿಸಿದ್ದಾನೆ - ಹೊರಡಿರಿ, ಯುದ್ಧಕ್ಕೆ ಹೊರಟು ಎದೋವಿುನ ಮೇಲೆ ಬೀಳೋಣ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು