ಯೆಹೆಜ್ಕೇಲನು 33:28 - ಕನ್ನಡ ಸತ್ಯವೇದವು J.V. (BSI)28 ನಾನು ದೇಶವನ್ನು ಹಾಳುಪಾಳುಮಾಡುವೆನು, ಅದರ ಶಕ್ತಿಯ ಮದವು ಇಳಿದುಹೋಗುವದು; ಇಸ್ರಾಯೇಲಿನ ಮಲೆನಾಡು ಬೀಡುಬೀಳುವದು; ಯಾರೂ ಅಲ್ಲಿ ಹಾದುಹೋಗರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ನಾನು ದೇಶವನ್ನು ಹಾಳುಮಾಡುವೆನು, ಅದರ ಶಕ್ತಿಯ ಅಹಂಕಾರವು ಇಳಿದು ಹೋಗುವುದು; ಇಸ್ರಾಯೇಲಿನ ಪರ್ವತಗಳು ಹಾಳಾಗಿರುವುದರಿಂದ ಯಾರೂ ಅಲ್ಲಿ ಹಾದು ಹೋಗುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ನಾನು ದೇಶವನ್ನು ಹಾಳುಪಾಳು ಮಾಡುವೆನು, ಅದರ ಶಕ್ತಿಯ ಮದವು ಇಳಿದುಹೋಗುವುದು; ಇಸ್ರಯೇಲಿನ ಮಲೆನಾಡು ಬೀಡುಬೀಳುವುದು; ಯಾರೂ ಇಲ್ಲಿ ಹಾದುಹೋಗರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28 ನಾನು ಈ ದೇಶವನ್ನು ಬರಿದಾಗಿಯೂ ಬಂಜರು ಭೂಮಿಯನ್ನಾಗಿಯೂ ಮಾಡುವೆನು. ಈ ದೇಶವು ಹೆಮ್ಮೆಪಟ್ಟುಕೊಳ್ಳುತ್ತಿದ್ದ ವಿಷಯಗಳನ್ನೆಲ್ಲಾ ಅವರು ಕಳೆದುಕೊಳ್ಳುವರು. ಇಸ್ರೇಲಿನ ಪರ್ವತಗಳು ಬೋಳುಗುಡ್ಡಗಳಾಗುವವು. ಯಾರೂ ಅದನ್ನು ದಾಟಿ ಹೋಗಲಾರರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ನಾನು ಈ ದೇಶವನ್ನು ಹಾಳುಪಾಳುಮಾಡುವೆನು. ಅದರ ಬಲದ ಮಹತ್ತು ತೀರಿಹೋಗುವುದು. ಇಸ್ರಾಯೇಲಿನ ಪರ್ವತಗಳು ಹಾಳಾಗಿರುವುದರಿಂದ ಯಾರೂ ಅದರ ಮೂಲಕ ಹಾದು ಹೋಗುವುದಿಲ್ಲ. ಅಧ್ಯಾಯವನ್ನು ನೋಡಿ |