Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 33:2 - ಕನ್ನಡ ಸತ್ಯವೇದವು J.V. (BSI)

2 ನರಪುತ್ರನೇ, ನಿನ್ನ ಜನರನ್ನು ಸಂಬೋಧಿಸಿ ಅವರಿಗೆ ಹೀಗೆ ನುಡಿ - ನಾನು ದೇಶದ ಮೇಲೆ ಖಡ್ಗವನ್ನು ಬೀಳಮಾಡುವಾಗ ಆ ದೇಶದವರು ತಮ್ಮಲ್ಲಿ ಆರಿಸಿ ನೇವಿುಸಿಕೊಂಡ ಕಾವಲುಗಾರನು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ನರಪುತ್ರನೇ, ನಿನ್ನ ಜನರನ್ನು ಸಂಬೋಧಿಸಿ, ಅವರಿಗೆ ಹೀಗೆ ನುಡಿ, ‘ನಾನು ದೇಶದ ಮೇಲೆ ಖಡ್ಗವನ್ನು ಬೀಳಮಾಡುವಾಗ, ಆ ದೇಶದವರು ತಮ್ಮಲ್ಲಿ ಒಬ್ಬ ಮನುಷ್ಯನನ್ನು ಆರಿಸಿ, ತಮಗೆ ಕಾವಲುಗಾರನನ್ನಾಗಿ ನೇಮಿಸಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ನರಪುತ್ರನೇ, ಜನರನ್ನು ಸಂಭೋದಿಸಿ ಅವರಿಗೆ ಹೀಗೆ ನುಡಿ - “ನಾನು ದೇಶದ ಮೇಲೆ ಖಡ್ಗವನ್ನು ಬೀಳಮಾಡುವಾಗ, ಆ ದೇಶದವರು ತಮ್ಮಲ್ಲಿ ಆರಿಸಿ ನೇಮಿಸಿಕೊಂಡ ಕಾವಲುಗಾರನು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 “ನರಪುತ್ರನೇ, ನಿನ್ನ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು, ‘ನಾನು ಈ ದೇಶದೊಂದಿಗೆ ಯುದ್ಧ ಮಾಡಲು ಶತ್ರು ಸೈನಿಕರನ್ನು ಬರಮಾಡುತ್ತೇನೆ. ಈ ಸಮಯದಲ್ಲಿ ಜನರು ಒಬ್ಬ ಕಾವಲುಗಾರನನ್ನು ಆರಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 “ಮನುಷ್ಯಪುತ್ರನೇ, ನಿನ್ನ ಜನರ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ನಾನು ಬಂದು ದೇಶದ ಮೇಲೆ ಯಾವಾಗ ಖಡ್ಗವನ್ನು ತರುವೆನೋ ಆಗ ಆ ದೇಶದ ಜನರು ತಮ್ಮ ಪ್ರಾಂತದ ಒಬ್ಬ ಮನುಷ್ಯನನ್ನು ಆರಿಸಿ ತಮಗೆ ಕಾವಲುಗಾರನನ್ನಾಗಿ ಇಟ್ಟರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 33:2
26 ತಿಳಿವುಗಳ ಹೋಲಿಕೆ  

ನರಪುತ್ರನೇ, ನಿನ್ನ ಜನರು ಗೋಡೆಗಳ ನೆರಳಿನಲ್ಲಿಯೂ ಮನೆಯ ಬಾಗಿಲುಗಳಲ್ಲಿಯೂ ನಿನ್ನ ಪ್ರಸ್ತಾಪವನ್ನೆತ್ತಿ ಪರಸ್ಪರವಾಗಿ ಒಬ್ಬರಿಗೊಬ್ಬರು - ಯೆಹೋವನ ಬಾಯಿಂದ ಹೊರಟ ಮಾತೇನು ಕೇಳೋಣ ಬನ್ನಿರಿ ಎಂದು ಹೇಳಿಕೊಳ್ಳುತ್ತಿದ್ದಾರೆ.


ಆದರೆ ನಿನ್ನ ಜನರು ಕರ್ತನ ಕ್ರಮವು ಸಮವಲ್ಲವೆಂದು ಹೇಳುತ್ತಿದ್ದಾರೆ, ಅವರ ಕ್ರಮವೇ ಸಮವಲ್ಲವಷ್ಟೆ.


ಖಡ್ಗವೇ, ದೇಶವನ್ನು ಹೊಕ್ಕು ಹೋಗು ಎಂದು ಆಜ್ಞಾಪಿಸಿ ನಾನು ಅದನ್ನು ಆ ದೇಶಕ್ಕೆ ತಂದು ಜನಪಶುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ


ಸೆರೆಯಾಗಿರುವ ನಿನ್ನ ಸ್ವಜನರ ಬಳಿಗೆ ಹೋಗಿ ಅವರು ಕೇಳಿದರೂ ಕೇಳದೆಹೋದರೂ ಅವರನ್ನು ಪ್ರಬೋಧಿಸಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಎಂದು ಅವರಿಗೆ ಸಾರು.


ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಖಡ್ಗವೇ, ನಾನು ನೇವಿುಸಿದ ಕುರುಬನೂ ನನ್ನ ಸಂಗಡಿಗನೂ ಆಗಿರುವವನಿಗೆ ವಿರುದ್ಧವಾಗಿ ಎಚ್ಚರಗೊಳ್ಳು; ಕುರುಬನನ್ನು ಹೊಡೆ, ಕುರಿಗಳು ಚದರಿಹೋಗುವವು; ಮರಿಗಳ ಮೇಲೂ ಕೈಮಾಡಬೇಕೆಂದಿದ್ದೇನೆ.


ನಾನು ನಿನ್ನೊಡನೆ ಮತ್ತೆ ಮಾತಾಡುವ ಕಾಲದಲ್ಲಿ ನಿನ್ನ ಬಾಯನ್ನು ಬಿಚ್ಚುವೆನು; ಆಗ ನೀನು ಅವರಿಗೆ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಎಂದು ನುಡಿಯಬೇಕು; ಕೇಳುವವನು ಕೇಳಲಿ. ಕೇಳದವನು ಬಿಡಲಿ; ಅವರು ದ್ರೋಹದ ಜನವೇ.


ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇವಿುಸಿದ್ದೇನೆ; ಅವರು ಹಗಲೂ ಇರುಳೂ ಮೌನವಾಗಿರರು.


ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚುಹಾಕುತ್ತದೆ; ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಯ ಬಲೆಯು ಒಡ್ಡಿದೆ, ಅವನ ದೇವರ ಆಲಯದಲ್ಲಿಯೂ ಶತ್ರುವಿರೋಧವು ಕಾದಿದೆ.


ನಿನ್ನ ಜನರು - ಇದೇನು? ನಮಗೆ ತಿಳಿಸುವದಿಲ್ಲವೋ ಎಂದು ನಿನ್ನನ್ನು ಕೇಳುವಲ್ಲಿ ನೀನು ಅವರಿಗೆ -


ನರಪುತ್ರನೇ, ಜನರಿಗೆ ಹೀಗೆ ಹೇಳು - ಶಿಷ್ಟನು ದ್ರೋಹಮಾಡಿದ್ದಲ್ಲಿ ಅವನ ಪುಣ್ಯವು ಅವನನ್ನು ಉದ್ಧರಿಸದು; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ ಅವನ ಪಾಪವು ಅವನನ್ನು ಬೀಳಿಸದು; ಶಿಷ್ಟನು ಪಾಪಮಾಡಿದಲ್ಲಿ ಅವನ ಪುಣ್ಯವು ಅವನನ್ನು ಉಳಿಸಲಾರದು.


ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಕಾವಲುಗಾರನನ್ನಾಗಿ ನೇವಿುಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ ನನ್ನ ದೂತನಾಗಿ ಅವರನ್ನು ಎಚ್ಚರಪಡಿಸು.


ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಖಡ್ಗ ಕ್ಷಾಮ ದುಷ್ಟಮೃಗ ವ್ಯಾಧಿ ಎಂಬೀ ನಾಲ್ಕು ಬಾಧೆಗಳನ್ನು ಯೆರೂಸಲೇವಿುನ ಮೇಲೆ ಒಟ್ಟಿಗೆ ತಂದು ಜನಪಶುಗಳನ್ನು ನಿರ್ಮೂಲಮಾಡುವಾಗ ಹೇಳತಕ್ಕದ್ದೇನು!


ಖಡ್ಗಕ್ಕೆ ಹೆದರಿದ ನಿಮ್ಮನ್ನೇ ಖಡ್ಗಕ್ಕೆ ಗುರಿಮಾಡುವೆನು; ಇದು ಕರ್ತನಾದ ಯೆಹೋವನ ನುಡಿ.


ಇಸ್ರಾಯೇಲಿನ ಬೆಟ್ಟಗಳೇ, ಕರ್ತನಾದ ಯೆಹೋವನ ಈ ಮಾತನ್ನು ಕೇಳಿರಿ - ಕರ್ತನಾದ ಯೆಹೋವನು ಬೆಟ್ಟಗುಡ್ಡಗಳಿಗೂ ತೊರೆ ತಗ್ಗುಗಳಿಗೂ ಹೀಗೆ ಹೇಳುತ್ತಾನೆ - ಇಗೋ, ನಾನೇ ನಿಮ್ಮ ಮೇಲೆ ಖಡ್ಗವನ್ನು ಬರಮಾಡಿ ನಿಮ್ಮ ಪೂಜಾಸ್ಥಳಗಳನ್ನು ನಾಶಪಡಿಸುವೆನು.


ಬಾಬೆಲ್ ಕೋಟೆಗೆ ಎದುರಾಗಿ ಧ್ವಜವೆತ್ತಿರಿ, ಠಾಣ್ಯವನ್ನು ಬಲಪಡಿಸಿರಿ, ಕಾವಲುಗಾರರನ್ನು ನಿಲ್ಲಿಸಿರಿ, ಹೊಂಚುಗಾರರನ್ನು ಗೊತ್ತುಮಾಡಿರಿ; ಯೆಹೋವನು ಬಾಬೆಲಿನವರ ವಿಷಯದಲ್ಲಿ ನುಡಿದದ್ದನ್ನು ಚಿತ್ತಕ್ಕೆ ತಂದು ನೆರವೇರಿಸಿದ್ದಾನೆ.


ಶಬ್ದವು ಭೂವಿುಯ ಕಟ್ಟ ಕಡೆಯವರೆಗೆ ವ್ಯಾಪಿಸುವದು; ಯೆಹೋವನಿಗೂ ಜನಾಂಗಗಳಿಗೂ ವ್ಯಾಜ್ಯವುಂಟಷ್ಟೆ; ನರಜನ್ಮದವರೆಲ್ಲರ ಸಂಗಡ ನ್ಯಾಯಕ್ಕೆ ನಿಲ್ಲುವನು; ದುಷ್ಟರನ್ನು ಖಡ್ಗಕ್ಕೆ ಗುರಿಮಾಡುವನು. ಇದು ಯೆಹೋವನ ನುಡಿ.


ಕೊಳ್ಳೆಗಾರರು ಅರಣ್ಯದ ಎಲ್ಲಾ ಬೋಳುಗುಡ್ಡಗಳಲ್ಲಿಯೂ ಕಂಡುಬಂದಿದ್ದಾರೆ; ಯೆಹೋವನ ಖಡ್ಗವು ದೇಶದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ನುಂಗಿಬಿಡುತ್ತಿದೆ; ಯಾರಿಗೂ ನೆಮ್ಮದಿಯಿಲ್ಲ.


ಶತ್ರುಗಳ ಕತ್ತಿಯ ಮೂಲಕವಾಗಿ ನಿಮ್ಮನ್ನು ಸಂಹರಿಸುವೆನು; ನೀವು ನನ್ನ ನಿಬಂಧನವನ್ನು ಮೀರಿದದರಿಂದ ಆ ಕತ್ತಿಯು ಪ್ರತಿದಂಡನೆಮಾಡುವದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ನಿಮ್ಮಲ್ಲಿ ಅಂಟುರೋಗವುಂಟಾಗುವಂತೆ ಮಾಡುವೆನು; ಹೀಗೆ ನೀವು ಶತ್ರುಗಳ ಕೈಗೆ ಬೀಳುವಿರಿ.


ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು