Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 32:18 - ಕನ್ನಡ ಸತ್ಯವೇದವು J.V. (BSI)

18 ನರಪುತ್ರನೇ, ನೀನು ಐಗುಪ್ತದ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ ಅವರನ್ನೂ ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 “ನರಪುತ್ರನೇ, ನೀನು ಐಗುಪ್ತದ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ, ಅವರನ್ನೂ ಮತ್ತು ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 “ನರಪುತ್ರನೇ, ನೀನು ಈಜಿಪ್ಟಿನ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ ಅವರನ್ನೂ ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 “ನರಪುತ್ರನೇ, ಈಜಿಪ್ಟಿನ ಜನರಿಗಾಗಿ ಗೋಳಾಡು. ಪಾತಾಳಕ್ಕೆ ಇಳಿದುಹೋಗಿರುವ ಇತರ ಎಲ್ಲರೊಡನೆ ಇರುವದಕ್ಕಾಗಿ ಈಜಿಪ್ಟನ್ನು ಮತ್ತು ಇತರ ಜನಾಂಗಗಳ ಉಳಿದ ಪಟ್ಟಣಗಳನ್ನು ಸಮಾಧಿಗೆ ಕಳುಹಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 “ಮನುಷ್ಯಪುತ್ರನೇ, ಈಜಿಪ್ಟಿನ ಜನಸಮೂಹದ ವಿಷಯವಾಗಿ ಗೋಳಾಡು; ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಪುತ್ರಿಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಕೆಯೊಳಗೆ ಇಳಿಯುವವರ ಜೊತೆ ತಳ್ಳಿಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 32:18
20 ತಿಳಿವುಗಳ ಹೋಲಿಕೆ  

ನೀರಾವರಿಯ ಯಾವ ಮರಗಳೂ ತಮ್ಮ ನೀಳವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗಲಿಸದಿರಲೆಂದೂ ನೀರನ್ನು ಹೀರುತ್ತಲೇ ಇರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ನಿಗುರಿಕೊಳ್ಳದಿರಲೆಂದೂ ಹೀಗಾಯಿತು; ಅವೆಲ್ಲಾ ಮರಣದ ಪಾಲಾಗುವವು, ಅಧೋಲೋಕವೇ ಅವುಗಳ ಗತಿ; ಪಾತಾಳಕ್ಕೆ ಇಳಿದುಹೋದವರ ಬಳಿಗೆ ನರಜನ್ಮದವರೊಂದಿಗೆ ಒಂದೇ ಗುಂಪಾಗಿ ಸೇರುವವು.


ಇದಕ್ಕಾಗಿ ನಾನು ಅರಿಚಾಟ ಕಿರಿಚಾಟ ಮಾಡುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ನಡೆಯುವೆನು; ನರಿಗಳಂತೆ ಅರಚಿಕೊಳ್ಳುವೆನು, ಉಷ್ಟ್ರಪಕ್ಷಿಗಳ ಹಾಗೆ ಕಿರಚಿಕೊಳ್ಳುವೆನು.


ಪ್ರಲಾಪಿಸುವವರು ಈ ಶೋಕಗೀತವನ್ನೆತ್ತಲಿ; ಜನಾಂಗಗಳ ಯುವತಿಯರು ಹೀಗೆ ಗೋಳಿಡಲಿ; ಐಗುಪ್ತಕ್ಕಾಗಿಯೂ ಅಲ್ಲಿನ ಬಹುಪ್ರಜೆಗಾಗಿಯೂ ದುಃಖಿಸಿ ಈ ಗೀತವನ್ನು ಹಾಡಲಿ; ಇದು ಕರ್ತನಾದ ಯೆಹೋವನ ನುಡಿ.


ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ವಿಷಯವಾಗಿ ಶೋಕಗೀತವನ್ನೆತ್ತಿ ಅವನಿಗೆ ಹೀಗೆ ನುಡಿ - ನೀನು ಜನಾಂಗಗಳಲ್ಲಿ ಮೃಗರಾಜನೆನಿಸಿಕೊಂಡಿದ್ದಿ; ಇಗೋ ಮಹಾನದಿಯಲ್ಲಿನ ಪೇರ್ಮೊಸಳೆಯಾಗಿಬಿಟ್ಟಿ; ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು ನೀರನ್ನು ನಿನ್ನ ಕಾಲುಗಳಿಂದ ಕಲಕಿ ಜನಾಂಗಗಳ ಹೊಳೆಗಳನ್ನೂ ತುಳಿದು ಬದಿಮಾಡಿದಿ.


ಕಿತ್ತುಹಾಕುವದು, ಕೆಡವುವದು, ನಾಶಪಡಿಸುವದು, ಹಾಳುಮಾಡುವದು, ಕಟ್ಟುವದು, ನೆಡುವದು, ಈ ಕಾರ್ಯಗಳನ್ನು ಮಾಡುವದಕ್ಕೋಸ್ಕರ ಜನಾಂಗಗಳ ಮೇಲೂ ರಾಜ್ಯಗಳ ಮೇಲೂ ನಿನ್ನನ್ನು ಈ ದಿನ ನೇವಿುಸಿದ್ದೇನೆ ಅಂದನು.


ಆದಕಾರಣ ನಾನು ನಿಮ್ಮ ಜನರನ್ನು ಪ್ರವಾದಿಗಳ ಮೂಲಕ ಹತಿಸಿದ್ದೇನೆ, ನನ್ನ ಬಾಯಿ ಮಾತುಗಳಿಂದ ಸಂಹರಿಸಿದ್ದೇನೆ; ನನ್ನ ನ್ಯಾಯದಂಡನೆಯು ವಿುಂಚಿನಂತೆ ಹೊರಡುವದು.


ಮೊದಲು ನನಗೆ ಕಂಡುಬಂದ ತೇಜಸ್ಸಿನಂತೆ ಅದು ಕಾಣಿಸಿತು; ಪಟ್ಟಣವನ್ನು ಹಾಳುಮಾಡಲು ನಾನು ಬಂದಾಗ ಎಂಥದನ್ನು ಕಂಡೆನೋ ಅಂಥದನ್ನು ಕಂಡೆನು; ಕೆಬಾರ್ ನದಿಯ ಹತ್ತಿರ ನನಗಾದ ಅದ್ಭುತದರ್ಶನದಂಥಾ ದರ್ಶನವು ಈಗಲೂ ನನಗಾಯಿತು; ಅದನ್ನು ನೋಡಿ ಅಡ್ಡಬಿದ್ದೆನು.


ನಾನು ಅದನ್ನು ಪ್ರೇತಗಳ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲಜನಾಂಗಗಳು ನಡುಗಿದವು; ಮತ್ತು [ಪೂರ್ವಕಾಲದಲ್ಲಿ] ಅಧೋಲೋಕದ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮ ವೃಕ್ಷಗಳು, ಅಂತು ನೀರಾವರಿಯ ಸಕಲ ವನಸ್ಪತಿಗಳೂ ಅಲ್ಲಿ ಸಂತೈಸಿಕೊಂಡವು.


ಪುರಾತನಕಾಲದಲ್ಲಿ ಹಾಳಾದ ಪಟ್ಟಣಗಳಂತೆ ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ಪೂರ್ವಕಾಲದವರೊಂದಿಗೆ ವಾಸಿಸಮಾಡುವೆನು; ಹೌದು, ನೀನು ನಿನ್ನ ಮಹಿಮೆಯನ್ನು ಜೀವಲೋಕದಲ್ಲಿ ನೆಲೆಗೊಳಿಸದೆ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕೆ ಇಳಿದವರ ಸಹವಾಸದಲ್ಲಿ ಸೇರಿಸುವೆನು.


ಹೀಗಿರಲು ಸಿಬ್ಮದ ದ್ರಾಕ್ಷಾಲತೆಯ ನಿವಿುತ್ತ ಯಜ್ಜೇರಿನವರೊಂದಿಗೆ ನಾನು ಅಳುವೆನು. ಹೆಷ್ಬೋನೇ, ಎಲ್ಲಾಲೇ, ನನ್ನ ಕಣ್ಣೀರಿನಿಂದ ನಿಮ್ಮನ್ನು ತೋಯಿಸುವೆನು; ನಿಮ್ಮ ಹಣ್ಣಿನ ಮೇಲೆಯೂ ಬೆಳೆಯ ಮೇಲೆಯೂ ಬಿದ್ದು ಆರ್ಭಟಿಸುತ್ತಾರೆ;


ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.


ತರುವಾಯ ಆತನು ಸಮೀಪಕ್ಕೆ ಬಂದಾಗ ಪಟ್ಟಣವನ್ನು ನೋಡಿ ಅದರ ವಿಷಯವಾಗಿ ಅತ್ತು -


ಪಾತಾಳದೊಳಗಿನ ಬಲಿಷ್ಠಶೂರರು ಅದನ್ನೂ ಅದರ ಸಹಾಯಕರನ್ನೂ ನೋಡಿ ಓಹೋ, ಇವರು ಸುನ್ನತಿಹೀನರು, ಖಡ್ಗಹತರು, ಇಳಿದುಬಂದು ಒರಗಿಬಿದ್ದರು ಅಂದುಕೊಳ್ಳುವರು.


ಆದರೆ ನೀನು ಪಾತಾಳಕ್ಕೆ, ಅಧೋಲೋಕದ ಅಗಾಧಸ್ಥಳಗಳಿಗೆ, ತಳ್ಳಲ್ಪಡುತ್ತಿದ್ದೀ.


ನನ್ನ ಜೀವಕ್ಕೆ ಕೇಡುಬಗೆಯುವವರೋ ಅಧೋಲೋಕಕ್ಕೆ ಇಳಿದುಹೋಗುವರು.


ನನ್ನನ್ನು ಕೊಂದುಹಾಕಿ ಸಮಾಧಿಗೆ ಸೇರಿಸಿದರೆ ನಿನಗೆ ಲಾಭವೇನು? ಮಣ್ಣು ನಿನ್ನನ್ನು ಸ್ತುತಿಸುವದೋ? ಅದು ನಿನ್ನ ನಂಬಿಕೆಯನ್ನು ಹೊಗಳುವದೇನು?


ಎಲಾ ಕಪೆರ್ನೌಮೇ, ನೀನು ಪರಲೋಕಕ್ಕೆ ಏರಿಸಲ್ಪಡುವಿಯಾ? ಪಾತಾಳಕ್ಕೇ ಇಳಿಯುವಿ. ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ಸೊದೋವಿುನಲ್ಲಿ ನಡೆದಿದ್ದರೆ ಅದು ಇಂದಿನವರೆಗೂ ಉಳಿಯುತ್ತಿತ್ತು.


ನಾನು ನಿನ್ನ ಬಹುಪ್ರಜೆಯನ್ನು ಅತಿಭಯಂಕರ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು; ಐಗುಪ್ತವು ಹೆಚ್ಚಳಪಡುವ ವಸ್ತುಗಳನ್ನು ಅವರು ಸೂರೆಮಾಡುವರು; ಅದರ ಜನ ಯಾವತ್ತೂ ನಿರ್ನಾಮವಾಗುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು