Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 32:12 - ಕನ್ನಡ ಸತ್ಯವೇದವು J.V. (BSI)

12 ನಾನು ನಿನ್ನ ಬಹುಪ್ರಜೆಯನ್ನು ಅತಿಭಯಂಕರ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು; ಐಗುಪ್ತವು ಹೆಚ್ಚಳಪಡುವ ವಸ್ತುಗಳನ್ನು ಅವರು ಸೂರೆಮಾಡುವರು; ಅದರ ಜನ ಯಾವತ್ತೂ ನಿರ್ನಾಮವಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಾನು ನಿನ್ನ ಪ್ರಜೆಯನ್ನು ಅತಿಭಯಂಕರ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು. ಅವರು ಐಗುಪ್ತದ ಮಹತ್ತನ್ನು ನಾಶ ಮಾಡುವರು. ಅದರ ಜನ ಸಮೂಹವೆಲ್ಲಾ ನಿರ್ನಾಮವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಿನ್ನ ಬಹುಪ್ರಜೆಯನ್ನು ಅತಿ ಭಯಾನಕ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು; ಈಜಿಪ್ಟ್ ಹೆಚ್ಚಳಪಡುವ ವಸ್ತುಗಳನ್ನೇ ಅವರು ಸೂರೆಮಾಡುವರು; ಅದರ ಜನ ನಿರ್ನಾಮವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಕ್ರೂರ ರಾಷ್ಟ್ರಗಳ ಆ ಸೈನಿಕರಿಂದ ನಿನ್ನ ಜನರನ್ನು ಯುದ್ಧದಲ್ಲಿ ಹತಗೊಳಿಸುವೆನು. ಈಜಿಪ್ಟಿನ ಜನರನ್ನೂ ಅವರು ಹೆಮ್ಮೆಪಡುವಂತ ವಸ್ತುಗಳನ್ನೂ ಆ ಸೈನಿಕರು ನಾಶಗೊಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಪರಾಕ್ರಮಶಾಲಿಗಳ ಖಡ್ಗಗಳಿಂದ ಜನಾಂಗಗಳಲ್ಲಿ ಭಯಂಕರರಾಗಿರುವ ನಿನ್ನ ಸಮೂಹವನ್ನು ನಾನು ಬೀಳುವಂತೆ ಮಾಡುವೆನು. ಅವರು ಈಜಿಪ್ಟಿನ ಮಹತ್ತನ್ನು ಕೆಡಿಸುವರು. ಅದರ ಜನಸಮೂಹವೆಲ್ಲಾ ಹಾಳಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 32:12
11 ತಿಳಿವುಗಳ ಹೋಲಿಕೆ  

ನಾನು ನಿನ್ನ ಮೇಲೆ ಅತಿ ಭಯಂಕರ ಜನಾಂಗದವರಾದ ಮ್ಲೇಚ್ಫರನ್ನು ಬೀಳಮಾಡುವೆನು; ಅವರು ನಿನ್ನ ಜ್ಞಾನದ ಸೊಬಗಿನ ಮೇಲೆ ಕತ್ತಿಹಿರಿದು ನಿನ್ನ ಹೊಳಪನ್ನು ಹೊಲಸುಮಾಡುವರು.


ನಾನು ಅದನ್ನು ಜನಾಂಗಗಳಲ್ಲಿ ಮಹಾಬಲಿಷ್ಠನಾದವನ ಕೈಗೆ ಕೊಟ್ಟುಬಿಟ್ಟಿದ್ದೇನೆ. ಅವನು ಅದರ ಕೆಟ್ಟತನಕ್ಕೆ ತಕ್ಕಂತೆ ಅದನ್ನು ದಂಡಿಸೇ ದಂಡಿಸುವನು; ನಾನು ಅದನ್ನು ತಳ್ಳಿಹಾಕಿದೆನು.


ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಐಗುಪ್ತದೇಶವನ್ನು ಕೊಡುವೆನು; ಅವನು ಅದರ ಜನ ಯಾವತ್ತನ್ನು ಒಯ್ದು ಆ ದೇಶವನ್ನು ಸೂರೆಮಾಡಿ ಕೊಳ್ಳೆಹೊಡೆಯುವನು; ಅದೇ ಅವನ ಸೈನ್ಯಕ್ಕೆ ಸಂಬಳ.


ಆ ದೇಶವನ್ನು ನಾಶಪಡಿಸಲಿಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು; ಅವರು ಐಗುಪ್ತದ ಮೇಲೆ ಕತ್ತಿಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು.


ಜನಾಂಗಗಳಲ್ಲಿ ನಿನ್ನನ್ನು ಬಲ್ಲವರೆಲ್ಲರೂ ನಿನ್ನ ಗತಿಗೆ ಬೆಚ್ಚಿ ಬೆರಗಾಗುವರು; ನೀನು ತೀರಾ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾದಿ.


ಅತಿಭಯಂಕರ ಜನಾಂಗದವರಾದ ಮ್ಲೇಚ್ಫರು ಅದನ್ನು ಕಡಿದುಹಾಕಿ ಹೋಗಿಬಿಟ್ಟಿದ್ದಾರೆ; ಅದರ ರೆಂಬೆಗಳು ಗುಡ್ಡಗಳಲ್ಲಿಯೂ ಎಲ್ಲಾ ಹಳ್ಳಕೊಳ್ಳಗಳಲ್ಲಿಯೂ ಬಿದ್ದಿವೆ; ಅದರ ಕೊಂಬೆಗಳು ದೇಶದ ಎಲ್ಲಾ ತೊರೆಗಳ ಹತ್ತಿರ ಮುರಿದುಹಾಕಲ್ಪಟ್ಟಿವೆ; ಲೋಕದ ಸಮಸ್ತಜನಾಂಗಗಳು ಅದರ ನೆರಳಿನಿಂದ ತೊಲಗಿ ಅದನ್ನು ಬಿಟ್ಟುಹೋಗಿವೆ.


ನಿನ್ನ ಅವಮಾನದ ಸುದ್ದಿಯು ಜನಾಂಗಗಳಿಗೆ ಕೇಳಬಂದಿದೆ, ನಿನ್ನ ಕೂಗಾಟವು ಲೋಕದಲ್ಲೆಲ್ಲಾ ತುಂಬಿದೆ; ವೀರನು ವೀರನನ್ನು ಎಡವಿ ಇಬ್ಬರೂ ಬಿದ್ದಿದ್ದಾರೆ.


ನರಪುತ್ರನೇ, ನೀನು ಐಗುಪ್ತದ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ ಅವರನ್ನೂ ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು