Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 31:15 - ಕನ್ನಡ ಸತ್ಯವೇದವು J.V. (BSI)

15 ಕರ್ತನಾದ ಯೇಹೋವನು ಇಂತೆನ್ನುತ್ತಾನೆ - ಆ ವೃಕ್ಷವು ಪಾತಾಳಕ್ಕೆ ಇಳಿದುಹೋದ ದಿನದಲ್ಲಿ ನಾನು ದುಃಖದ ಚಿಹ್ನೆಗಳನ್ನು ಏರ್ಪಡಿಸಿದೆನು; ಅದರ ವಿಯೋಗಕ್ಕಾಗಿ ನಾನು ಮಹಾನದಿಯನ್ನು ಮರೆಮಾಡಿ ನದಿಯ ಶಾಖೆಗಳನ್ನು ತಡೆದುಬಿಟ್ಟೆನು, ಜಲಪ್ರವಾಹವು ನಿಂತುಹೋಯಿತು; ಅದಕ್ಕಾಗಿ ಲೆಬನೋನು ಗೋಳಿಡುವಂತೆ ಮಾಡಿದೆನು, ಭೂವಿುಯ ಸಕಲ ವೃಕ್ಷಗಳು ಆ ದುಃಖಕ್ಕೆ ಮೂರ್ಛೆಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆ ವೃಕ್ಷವು ಪಾತಾಳಕ್ಕೆ ಇಳಿದು ಹೋದ ದಿನದಲ್ಲಿ ನಾನು ದುಃಖವನ್ನು ಹುಟ್ಟಿಸುವೆನು. ಅದರ ವಿಯೋಗಕ್ಕಾಗಿ ನಾನು ಮಹಾ ನದಿಯನ್ನು ಮರೆಮಾಡಿ, ನದಿಗಳನ್ನು ತಡೆದುಬಿಟ್ಟೆನು, ಜಲಪ್ರವಾಹವು ನಿಂತುಹೋಯಿತು; ಅದಕ್ಕಾಗಿ ಲೆಬನೋನು ಗೋಳಿಡುವಂತೆ ಮಾಡಿದೆನು, ಭೂಮಿಯ ಸಕಲ ವೃಕ್ಷಗಳು ಆ ದುಃಖಕ್ಕೆ ಕುಗ್ಗಿಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ : “ಆ ವೃಕ್ಷ ಪಾತಾಳಕ್ಕೆ ಇಳಿದುಹೋದ ದಿನದಲ್ಲಿ ನಾನು ದುಃಖದ ಚಿಹ್ನೆಗಳನ್ನು ಏರ್ಪಡಿಸಿದೆ; ಅದರ ವಿಯೋಗಕ್ಕಾಗಿ ನಾನು ಮಹಾನದಿಯನ್ನು ಮರೆಮಾಡಿ, ನದಿಯ ಶಾಖೆಗಳನ್ನು ತಡೆದುಬಿಟ್ಟೆ; ಜಲಪ್ರವಾಹವು ನಿಂತುಹೋಯಿತು; ಅದಕ್ಕಾಗಿ ಲೆಬನೋನು ಗೋಳಿಡುವಂತೆ ಮಾಡಿದೆ. ಭೂಮಿಯ ಸಕಲ ವೃಕ್ಷಗಳು ಆ ದುಃಖಕ್ಕೆ ಮೂರ್ಛೆಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ: “ಆ ಮರವು ಪಾತಾಳಕ್ಕೆ ಹೋದ ದಿವಸದಲ್ಲಿ ನಾನು ಜನರನ್ನು ಅಳುವಂತೆ ಮಾಡಿದೆನು. ಅದನ್ನು ನಾನು ಆಳವಾದ ಸಾಗರದಿಂದ ಮುಚ್ಚಿಬಿಟ್ಟೆನು. ನಾನು ಅದರ ನದಿಗಳನ್ನೂ ಬೇರೆ ನೀರಿನ ತೊರೆಗಳನ್ನೂ ನಿಲ್ಲಿಸಿಬಿಟ್ಟೆನು. ಲೆಬನೋನ್ ಅದಕ್ಕಾಗಿ ಶೋಕಿಸುವಂತೆ ಮಾಡಿದೆನು. ಆ ದೊಡ್ಡ ಮರವು ಹೋದುದಕ್ಕಾಗಿ ಆ ಪ್ರಾಂತ್ಯದ ಬೇರೆ ಎಲ್ಲಾ ಮರಗಳು ದುಃಖದಿಂದ ಕಾಯಿಲೆಯಲ್ಲಿ ಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮಾಧಿಗೆ ಇಳಿದ ದಿನದಲ್ಲಿ ನಾನು ಆಳವಾದ ಬುಗ್ಗೆಗಳನ್ನು ದುಃಖದಿಂದ ಮುಚ್ಚಿದೆನು; ನಾನು ಅದರ ಪ್ರವಾಹವನ್ನು ತಡೆಹಿಡಿದೆನು. ಮಹಾಜಲವನ್ನು ನಿಲ್ಲಿಸಿದೆನು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಿಡುವಂತೆ ಮಾಡಿದೆನು. ಬಯಲಿನ ಮರಗಳೆಲ್ಲಾ ಕುಗ್ಗಿಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 31:15
8 ತಿಳಿವುಗಳ ಹೋಲಿಕೆ  

ಆಗ ಯೆಹೂದದ ಮತ್ತು ಯೆರೂಸಲೇವಿುನ ನೈವೇದ್ಯವು ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಯೆಹೋವನಿಗೆ ಮೆಚ್ಚಿಕೆಯಾಗಿದ್ದಂತೆ ಆಗಿರುವದು.


ಗಿಲ್ಬೋವಗುಡ್ಡಗಳೇ, ನಿಮ್ಮ ಮೇಲೆ ಮಂಜೂ ಮಳೆಯೂ ನೈವೇದ್ಯಕ್ಕಾಗಿ ಫಲಿಸುವ ಹೊಲಗಳೂ ಇಲ್ಲದೆ ಹೋಗಲಿ; ಅಲ್ಲಿ ಪರಾಕ್ರಮಶಾಲಿಗಳ ಗುರಾಣಿಗಳು ಬಿದ್ದಿರುತ್ತವೆ. ಸೌಲನ ಗುರಾಣಿಯೂ ಅಭಿಷಿಕ್ತನಲ್ಲದವನ ಗುರಾಣಿಯಂತೆ ಬಿದ್ದಿದೆ.


[ಫರೋಹನೇ,] ನಾನು ನಿನ್ನ ಬೆಳಕನ್ನು ನಂದಿಸುವಾಗ ಆಕಾಶಕ್ಕೆ ಮುಸುಕುಹಾಕಿ ಅಲ್ಲಿನ ನಕ್ಷತ್ರಗಳನ್ನು ಮಂಕುಮಾಡಿ ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು, ಚಂದ್ರನೂ ಪ್ರಕಾಶಿಸನು.


ಆಗ ಸಮುದ್ರದ ಸುತ್ತುಮುತ್ತಲಿನ ಸಕಲಪ್ರಭುಗಳು ತಮ್ಮ ಸಿಂಹಾಸನಗಳಿಂದಿಳಿದು ನಿಲುವಂಗಿಗಳನ್ನು ತೆಗೆದುಹಾಕಿ ಬೂಟೇದಾರಿಯ ವಸ್ತ್ರಗಳನ್ನು ಕಿತ್ತೆಸೆದು ತತ್ತರವನ್ನೇ ಹೊದ್ದುಕೊಂಡು ನೆಲದ ಮೇಲೆ ಕುಕ್ಕರಿಸಿ ಕ್ಷಣಕ್ಷಣವೂ ನಡುಗುತ್ತಾ ನಿನಗೆ ಬೆಚ್ಚಿ ಬೆರಗಾಗುವರು.


ಈ ನಿನ್ನ ಪತನದಿನದಲ್ಲಿ ಕರಾವಳಿಯು ನಡುಗುತ್ತದೆ; ನೀನು ಇಲ್ಲವಾದದಕ್ಕೆ ಸಮುದ್ರದ್ವೀಪಗಳು ತತ್ತರಿಸುತ್ತವೆ ಎಂಬ ಶೋಕಗೀತವನ್ನೆತ್ತುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು