Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 30:2 - ಕನ್ನಡ ಸತ್ಯವೇದವು J.V. (BSI)

2 ನರಪುತ್ರನೇ, ನೀನು ಈ ದೈವೋಕ್ತಿಯನ್ನು ಪ್ರಕಟಿಸು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಅರಚಿಕೊಳ್ಳಿರಿ! ಅಯ್ಯೋ ದಿನವೇ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ನರಪುತ್ರನೇ, ನೀನು ಈ ಪ್ರವಾದನೆಯನ್ನು ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಅರಚಿಕೊಳ್ಳಿರಿ! ಅಯ್ಯೋ ದುರ್ದಿನವೇ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ನರಪುತ್ರನೇ, ನೀನು ಈ ದೈವೋಕ್ತಿಯನ್ನು ಪ್ರಕಟಿಸು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅರಚಿಕೊಳ್ಳಿರಿ, ಅಯ್ಯೋ ದುರ್ದಿನವೇ! ಆ ದಿನ ಹತ್ತಿರವಾಯಿತು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 “ನರಪುತ್ರನೇ, ನನ್ನ ಪರವಾಗಿ ಮಾತನಾಡು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ’ ಎಂದು ಹೇಳು. “‘ಅಳುತ್ತಾ, “ಭಯಂಕರ ದಿವಸಗಳು ಬರುತ್ತವೆ” ಎಂದು ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 “ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ “ಅಯ್ಯೋ ಆ ದಿನ!” ಎಂದು, ಅಳುತ್ತಾ ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 30:2
17 ತಿಳಿವುಗಳ ಹೋಲಿಕೆ  

ಅರಚಿಕೊಳ್ಳಿರಿ, ಯೆಹೋವನ ದಿನವು ಸಮೀಪವಾಯಿತು; ಅದು ಸರ್ವಶಕ್ತನಿಂದ ನಾಶರೂಪವಾಗಿ ಬರುವದು.


ರೈತರೇ, ಕಂಗೆಡಿರಿ! ತೋಟಗಾರರೇ, ಗೋಳಾಡಿರಿ! ಗೋದಿಯೂ ಜವೆಗೋದಿಯೂ ಹಾಳಾಗಿವೆ; ಹೊಲದ ಬೆಳೆಯು ನಾಶವಾಗಿದೆ.


ಅಮಲೇರಿದವರೇ, ಎಚ್ಚರಗೊಳ್ಳಿರಿ, ಅಳಿರಿ; ಕುಡಿಕರೇ, ಅರಚಿಕೊಳ್ಳಿರಿ; ದ್ರಾಕ್ಷಾರಸವು ನಿಮ್ಮ ಬಾಯಿಗೆ ಇನ್ನು ಬೀಳದು.


ನರಪುತ್ರನೇ, ಕೂಗಿಕೋ, ಗೋಳಾಡು! ಖಡ್ಗವು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಪ್ರಭುಗಳೆಲ್ಲರ ಮೇಲೆಯೂ ಬಿದ್ದಿದೆ; ಆ ಪ್ರಭುಗಳು ನನ್ನ ಜನರೊಂದಿಗೆ ಖಡ್ಗಕ್ಕೆ ತುತ್ತಾಗಿದ್ದಾರೆ; ತೊಡೆಯನ್ನು ಬಡಿದುಕೋ.


ಬಯಿತ್ ಮತ್ತು ದೀಬೋನ್ ಊರುಗಳವರು ಅಳುವದಕ್ಕಾಗಿ ಪೂಜಾಸ್ಥಾನಗಳಿಗೆ ಹತ್ತಿದ್ದಾರೆ; ನೆಬೋವಿನಲ್ಲಿಯೂ ಮೇದೆಬದಲ್ಲಿಯೂ ಮೋವಾಬ್ಯರು ಗೋಳಾಡುತ್ತಾರೆ; ಎಲ್ಲರ ತಲೆಯು ಬೋಳು, ಎಲ್ಲರ ಗಡ್ಡವು ವಿಕಾರವಾಗಿ ಕತ್ತರಿಸಿದೆ.


ಅಯ್ಯೋ, ಅಯ್ಯೋ, ಮಹಾಪಟ್ಟಣವೇ, ಬಾಬೆಲೇ, ಬಲಿಷ್ಠವಾದ ನಗರಿಯೇ, ನಿನಗೆ ವಿಧಿಸಲ್ಪಟ್ಟ ದಂಡನೆಯು ಒಂದೇ ಗಳಿಗೆಯಲ್ಲಿ ಬಂತಲ್ಲಾ ಎಂದು ಹೇಳುವರು.


ಧನಿಕರೇ, ಕೇಳಿರಿ; ನಿಮಗೆ ಬರುವ ದುರ್ದಶೆಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ.


ತುರಾಯಿ ಮರವೇ, ಗೋಳಾಡು! ದೇವದಾರು ಬಿದ್ದಿದೆ, ಶ್ರೇಷ್ಠವೃಕ್ಷಗಳು ನಾಶವಾಗಿವೆ. ಬಾಷಾನಿನ ಅಲ್ಲೋನ್ ಮರಗಳೇ, ಕಿರಚಿರಿ! ನುಗ್ಗಲಾಗದ ವನವು ಉರುಳಿದೆ.


ಒರಳ ಕೇರಿಯವರೇ, ಕಿರಚಿರಿ, ಎಲ್ಲಾ ಸಾಹುಕಾರರು ಹಾಳಾದರು, ಹೊರೆಬೆಳ್ಳಿಯವರೆಲ್ಲರು ನಾಶವಾದರು.


ಯೆಹೋವನು ಇಂತೆನ್ನುತ್ತಾನೆ - ಇಗೋ, ಪ್ರವಾಹವು ಬಡಗಲಿಂದ ಹೊರಟು ತುಂಬಿತುಳುಕುವ ತೊರೆಯಾಗಿ ದೇಶವನ್ನೂ ಅದರಲ್ಲಿರುವ ಸಮಸ್ತವನ್ನೂ ಪಟ್ಟಣವನ್ನೂ ಪಟ್ಟಣದ ನಿವಾಸಿಗಳನ್ನೂ ಆಕ್ರವಿುಸುವದು; ಆಗ ಅಲ್ಲಿನವರು ಮೊರೆಯಿಡುವರು, ದೇಶದವರೆಲ್ಲಾ ಗೋಳಾಡುವರು.


ಇದರ ನಿವಿುತ್ತ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ, ಹಲುಬಿ ಗೋಳಾಡಿರಿ; ಯೆಹೋವನ ರೋಷಾಗ್ನಿಯು ನಮ್ಮನ್ನು ಬಿಟ್ಟಿಲ್ಲವಲ್ಲಾ.


ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೋ ಮನೋವ್ಯಥೆಯಿಂದ ಮೊರೆಯಿಟ್ಟು, ಆತ್ಮಕ್ಲೇಶದಿಂದ ಗೋಳಾಡುವಿರಿ.


ತಾರ್ಷೀಷಿಗೆ ಸಮುದ್ರದ ಮೇಲೆ ಹಾದುಹೋಗಿರಿ, ಕರಾವಳಿಯ ನಿವಾಸಿಗಳೇ, ಅಂಗಲಾಚಿರಿ!


ತೂರಿನ ವಿಷಯವಾದ ದೈವೋಕ್ತಿ. ತಾರ್ಷೀಷಿನ ಹಡಗುಗಳೇ, ಅಂಗಲಾಚಿರಿ! [ನಿಮ್ಮ ಆಶ್ರಯವು] ಹಾಳಾಯಿತು, ನಿಮಗೆ ನೆಲೆಯಿಲ್ಲ, ರೇವಿಲ್ಲ. (ಕಿತ್ತೀಮ್ ದೇಶೀಯರಿಂದ ಅವುಗಳಿಗೆ ತಿಳಿಯಿತು).


ಆದಕಾರಣ ಮೋವಾಬಿನ ನಿವಿುತ್ತ ಮೋವಾಬೇ ಗೋಳಾಡುವದು; ಪ್ರತಿಯೊಬ್ಬನೂ ಪ್ರಲಾಪಿಸುವನು; ಮುರಿದು ಹೋದವರಾಗಿ ನೀವು ಕೀರ್ ಹರೆಷೆಥಿನ ದೀಪದ್ರಾಕ್ಷೆಯು ಹಾಳಾಯಿತಲ್ಲಾ ಎಂದು ನರಳುವಿರಿ.


ಪುರದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಎಲ್ಲಾ ಫಿಲಿಷ್ಟಿಯರೇ, ಕುಂದಿಹೋಗಿರಿ! ಬಡಗಲಿಂದ ಹೊಗೆಯು ಬರುತ್ತಿದೆ. ಆ ವ್ಯೂಹದಲ್ಲಿ ಹಿಂದು ಬೀಳುವವರಿಲ್ಲ.


ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು