Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:36 - ಕನ್ನಡ ಸತ್ಯವೇದವು J.V. (BSI)

36 ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸಿಳ್ಳುಹಾಕುತ್ತಾರೆ; ನೀನು ತೀರಾ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಜನಾಂಗಗಳ ವರ್ತಕರು ನಿನ್ನನ್ನು ನೋಡಿ, ಸಿಳ್ಳು ಹಾಕುತ್ತಾರೆ; ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ನಿನ್ನ ನೋಡಿ ಸಿಳ್ಳುಹಾಕುವರು ರಾಷ್ಟ್ರಗಳ ವರ್ತಕರು. ನಾಶವಾದೆ ನೀನು ಪೂರ್ತಿಯಾಗಿ, ಇಲ್ಲವಾದೆ ಇನ್ನೆಂದಿಗು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಬೇರೆ ದೇಶಗಳಲ್ಲಿರುವ ವ್ಯಾಪಾರಿಗಳು ಆಶ್ಚರ್ಯದಿಂದ ಸಿಳ್ಳು ಹಾಕಿದರು. ನಿನಗೆ ಸಂಭವಿಸಿದ ವಿಷಯಗಳು ಜನರಿಗೆ ಭೀತಿಯನ್ನುಂಟುಮಾಡಿತು. ಯಾಕೆಂದರೆ ನಿನ್ನ ಕಥೆ ಮುಗಿಯಿತು. ನಿನಗೆ ಅಂತ್ಯವಾಯಿತು. ಇನ್ನು ನೀನು ಕಾಣುವದಿಲ್ಲ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸೀಳಿಹಾಕುತ್ತಾರೆ. ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:36
14 ತಿಳಿವುಗಳ ಹೋಲಿಕೆ  

ಆದಕಾರಣ ಬೆರಗಿನ ಸಿಳ್ಳಿಗೆ ಅವರ ದೇಶವು ನಿತ್ಯವಾಗಿ ಗುರಿಯಾಗುವದು; ಹಾದುಹೋಗುವವರೆಲ್ಲರೂ ಬೆರಗಾಗಿ ತಲೆದೂಗುವರು.


ಈ ನಿನೆವೆಯು ಮೊದಲು ಉಲ್ಲಾಸದ ನಗರಿಯಾಗಿ ನೆಮ್ಮದಿಯಿಂದ ನೆಲೆಗೊಂಡಿದ್ದು ತನ್ನ ಹೃದಯದೊಳಗೆ - ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ ಅಂದುಕೊಳ್ಳುತ್ತಿತ್ತು; ಅಯ್ಯೋ, ಎಷ್ಟೋ ಹಾಳಾಗಿ ಹೋಗಿ ಮೃಗಗಳು ತಂಗುವ ಹಕ್ಕೆಯಾಗಿದೆ! ಹಾದುಹೋಗುವವರೆಲ್ಲರೂ ಸಿಳ್ಳುಹಾಕಿ ಕೈಯಾಡಿಸುತ್ತಾರೆ.


ನಿನ್ನನ್ನು ತೀರಾ ಧ್ವಂಸಮಾಡುವೆನು; ನೀನು ಇಲ್ಲವಾಗುವಿ; ಎಷ್ಟು ಹುಡುಕಿದರೂ ನೀನು ಎಂದಿಗೂ ಸಿಕ್ಕುವದಿಲ್ಲ; ಇದು ಕರ್ತನಾದ ಯೆಹೋವನ ನುಡಿ.


ಈ ಪಟ್ಟಣವನ್ನು ಬೆರಗಿನ ಸಿಳ್ಳಿಗೆ ಗುರಿಮಾಡುವೆನು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಬಂಧಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.


ತರುವಾಯ ನಾನು ಆ ದಾರಿಯಲ್ಲಿ ಹೋಗಿ ನೋಡಲಾಗಿ ಅವನು ಇಲ್ಲದೆ ಹೋಗಿದ್ದನು; ಅವನನ್ನು ಹುಡುಕಿದರೂ ಸಿಕ್ಕಲೇ ಇಲ್ಲ.


ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.


ನಾನು ನಿನ್ನನ್ನು ಬೋಳುಬಂಡೆ ಮಾಡುವೆನು; ನೀನು ಬಲೆಗಳಿಗೆ ಹಾಸಬಂಡೆಯಾಗುವಿ; ನಿನ್ನ ಮೇಲೆ ಇನ್ನು ಕಟ್ಟಡಕಟ್ಟರು; ಯೆಹೋವನಾದ ನಾನೇ ಅಪ್ಪಣೆಕೊಟ್ಟಿದ್ದೇನೆ; ಇದು ಕರ್ತನಾದ ಯೇಹೋವನ ನುಡಿ.


ನರಪುತ್ರನೇ, ತೂರು ಯೆರೂಸಲೇವಿುನ ವಿಷಯವಾಗಿ - ಅಹಹ, ಜನಾಂಗಗಳಿಗೆ ಅಡ್ಡಿಯಾಗಿದ್ದ ಬಾಗಿಲು ಮುರಿದುಹೋಗಿದೆ, ನನ್ನ ಕಡೆಗೆ ತೆರೆದುಬಿಟ್ಟಿದೆ ; ಯೆರೂಸಲೇಮು ಹಾಳಾದ ಕಾರಣ ನಾನು ತುಂಬಿಕೊಳ್ಳುವೆನು ಅಂದುಕೊಂಡದರಿಂದ


ಹಾದುಹೋಗುವವರೆಲ್ಲರೂ ನಿನ್ನನ್ನು ನೋಡಿ ಚಪ್ಪಾಳೆಹೊಡೆಯುತ್ತಾರೆ. ಯೆರೂಸಲೇಮ್ ನಗರಿಯನ್ನು ಕಂಡು - ಆಹಾ, ಪರಿಪೂರ್ಣಸುಂದರಿ, ಸಮಸ್ತಲೋಕ ಸಂತೋಷಿಣಿ ಎನಿಸಿಕೊಳ್ಳುತ್ತಿದ್ದ ಪುರಿಯು ಇದೇಯೋ? ಛೀ ಛೀ ಎಂದು ತಲೆಯಾಡಿಸುತ್ತಾರೆ.


ಯೆಹೋವನ ರೋಷದ ದೆಸೆಯಿಂದ ಅದು ನಿರ್ಜನವಾಗಿ ತೀರಾ ಹಾಳುಬೀಳುವದು; ಬಾಬೆಲನ್ನು ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.


ಎದೋಮು ಬೆರಗಿಗೆ ಆಸ್ಪದವಾಗುವದು; ಹಾದು ಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳಿಗೆ ಬೆರಗಾಗಿ ಸಿಳ್ಳುಹಾಕುವರು.


ಉನ್ನತವಾದ ಈ ಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ - ಅಬ್ಬಬ್ಬಾ, ಇದೇನು! ಯೆಹೋವನು ಈ ದೇಶವನ್ನೂ ಈ ಆಲಯವನ್ನೂ ಹೀಗೇಕೆ ಮಾಡಿದನು ಎಂದು ಕೇಳುವರು.


ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು -


ಜನಾಂಗಗಳಲ್ಲಿ ನಿನ್ನನ್ನು ಬಲ್ಲವರೆಲ್ಲರೂ ನಿನ್ನ ಗತಿಗೆ ಬೆಚ್ಚಿ ಬೆರಗಾಗುವರು; ನೀನು ತೀರಾ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾದಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು