Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:33 - ಕನ್ನಡ ಸತ್ಯವೇದವು J.V. (BSI)

33 ನಿನ್ನ ಸರಕುಗಳು ಸಮುದ್ರಗಳನ್ನು ಹಾದು ಹರಡಿಕೊಂಡವು. ಅವುಗಳಿಂದ ಬಹುಜನಾಂಗಗಳನ್ನು ತುಂಬಿಸಿದಿ; ನಿನ್ನ ಅಪಾರವಾದ ಐಶ್ವರ್ಯದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ನಿನ್ನ ಸರಕುಗಳು ಸಮುದ್ರಗಳನ್ನು ದಾಟಿ ಹರಡಿಕೊಂಡವು, ಅವುಗಳಿಂದ ಅನೇಕ ಜನಾಂಗಗಳನ್ನು ತೃಪ್ತಿಪಡಿಸಿದಿ; ನಿನ್ನ ಅಪಾರವಾದ ಐಶ್ವರ್ಯದಿಂದಲೂ, ವ್ಯಾಪಾರದ ವಸ್ತುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಅಪಾರ ಐಶ್ವರ್ಯದಿಂದ, ವಾಣಿಜ್ಯ ದಿನಸುಗಳಿಂದ ನೀನು ತುಂಬಿಸಿದೆ ಬಹುರಾಷ್ಟ್ರಗಳನು, ಸಮೃದ್ಧಿಗೊಳಿಸಿದೆ ಭೂರಾಜರನು. ಈಗಾಗಿವೆ ಸಮುದ್ರದ ಪಾಲು ಆ ಸರಕು ಸಾಮಗ್ರಿಗಳೆಲ್ಲವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ನಿನ್ನ ವ್ಯಾಪಾರಿಗಳು ಸಮುದ್ರದಾಚೆ ಹೋದರು; ನೀನು ಅನೇಕರನ್ನು ತೃಪ್ತಿಗೊಳಿಸಿದಿ. ನಿನ್ನ ಐಶ್ವರ್ಯದಿಂದಲೂ ನೀನು ಮಾರಿದ ಸರಕುಗಳಿಂದಲೂ ನೀನು ಲೋಕದ ರಾಜರನ್ನು ಐಶ್ವರ್ಯವಂತರನ್ನಾಗಿ ಮಾಡಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ. ನಿನ್ನ ಅಪಾರವಾದ ಐಶ್ವರ್ಯದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:33
9 ತಿಳಿವುಗಳ ಹೋಲಿಕೆ  

ಆಗ ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಹೊಯಿದುಕೊಂಡು ಅಳುತ್ತಾ ಗೋಳಾಡುತ್ತಾ - ಅಯ್ಯೋ, ಅಯ್ಯೋ, ಸಮುದ್ರದ ಮೇಲೆ ಹಡಗುಳ್ಳವರೆಲ್ಲರನ್ನು ತನ್ನ ಅಮೂಲ್ಯ ದ್ರವ್ಯಗಳಿಂದ ಐಶ್ವರ್ಯವಂತರನ್ನಾಗಿ ಮಾಡಿದ ಈ ಮಹಾ ಪಟ್ಟಣಕ್ಕೆ ಎಂಥಾ ಗತಿ ಬಂತು; ಇವಳು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ ಎಂದು ಕೂಗಿ ಹೇಳಿದರು.


ಎಲ್ಲಾ ಜನಾಂಗಗಳು ಅವಳ ಅತಿಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದರು; ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು; ಅವಳು ಸುಖಭೋಗಿನಿಯಾಗಿದ್ದದರಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು ಎಂದು ಹೇಳಿದನು.


ನಿನ್ನ ವಿುತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದಿ. ಆದಕಾರಣ ನಾನು ನಿನ್ನನ್ನು ದೇವರ ಪರ್ವತದಿಂದ ಹೊಲಸನ್ನಾಗಿ ತಳ್ಳಿಬಿಟ್ಟೆನು; ಹೌದು. ನೆರಳುಕೊಡುವ ಕೆರೂಬಿಯೇ, ಕೆಂಡದ ಮಳೆಯ ಮಧ್ಯದಲ್ಲಿನ ನಿನ್ನ ನೆಲೆಯಿಂದ ನಾನು ನಿನ್ನನ್ನು ಕಿತ್ತು ಧ್ವಂಸಮಾಡಿದೆನು.


ಸಮುದ್ರದ್ವಾರದಲ್ಲಿ ವಾಸಿಸುತ್ತಾ ಜನಾಂಗಗಳಿಗಾಗಿ ಬಹುದ್ವೀಪಗಳೊಂದಿಗೆ ವ್ಯಾಪಾರಮಾಡುವ ಪುರಿಯೇ! ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ತೂರೇ, ಪರಿಪೂರ್ಣಸುಂದರಿಯಾಗಿದ್ದೇನೆ ಅಂದುಕೊಂಡಿಯಲ್ಲಾ!


ತೂರ್ ಪಟ್ಟಣವು ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ದೂಳಿನಂತೆಯೂ ಬಂಗಾರವನ್ನು ಬೀದಿಯ ಬದಿಯಂತೆಯೂ ರಾಶಿರಾಶಿ ಮಾಡಿಕೊಂಡಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು