ಯೆಹೆಜ್ಕೇಲನು 27:3 - ಕನ್ನಡ ಸತ್ಯವೇದವು J.V. (BSI)3 ಸಮುದ್ರದ್ವಾರದಲ್ಲಿ ವಾಸಿಸುತ್ತಾ ಜನಾಂಗಗಳಿಗಾಗಿ ಬಹುದ್ವೀಪಗಳೊಂದಿಗೆ ವ್ಯಾಪಾರಮಾಡುವ ಪುರಿಯೇ! ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ತೂರೇ, ಪರಿಪೂರ್ಣಸುಂದರಿಯಾಗಿದ್ದೇನೆ ಅಂದುಕೊಂಡಿಯಲ್ಲಾ! ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ‘ಸಮುದ್ರ ದ್ವಾರದಲ್ಲಿ ವಾಸಿಸುತ್ತಾ, ಜನಾಂಗಗಳಿಗಾಗಿ ಅನೇಕ ದ್ವೀಪಗಳೊಂದಿಗೆ ವ್ಯಾಪಾರ ಮಾಡುವ ನಗರಿಯೇ!’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ತೂರೇ, ‘ನಾನು ಪರಿಪೂರ್ಣ ಸುಂದರಿಯಾಗಿದ್ದೇನೆ’ ಎಂದು ನೀನು ಅಂದುಕೊಂಡಿದ್ದೀ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಸಮುದ್ರದ್ವಾರದಲ್ಲಿ ವಾಸಿಸುವ ನಗರಿಯೇ, ರಾಷ್ಟ್ರಗಳಿಗೂ ಹಲವಾರು ದ್ವೀಪಗಳಿಗೂ ನಡುವೆ ವ್ಯಾಪಾರ ನಡೆಸುವವಳೇ, ಸರ್ವೇಶ್ವರನಾದ ದೇವರು ಹೇಳುವುದನ್ನು ಕೇಳು: “ಟೈರ್ ನಗರಿಯೇ, ‘ನಾನೋರ್ವ ನಾವೆ,’ ‘ಸರ್ವಾಂಗ ಸುಂದರಿ ನಾನಾಗಿರುವೆ,’ ಎಂದು ಕೊಚ್ಚಿಕೊಂಡೆಯಲ್ಲವೆ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಅದರ ಬಗ್ಗೆ ಈ ರೀತಿಯಾಗಿ ಹೇಳು: “‘ತೂರೇ, ನೀನು ಸಮುದ್ರಕ್ಕೆ ಬಾಗಿಲು. ಅನೇಕ ದೇಶಗಳಿಗೆ ನೀನು ವ್ಯಾಪಾರಿ. ಕರಾವಳಿಯ ಅನೇಕ ದೇಶಗಳಿಗೆ ನೀನು ಪ್ರಯಾಣಿಸುವೆ.’ ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ. ತೂರೇ, ನೀನು ಅತಿ ಸುಂದರಳೆಂದು ಭಾವಿಸಿರುವೆ. ನೀನು ಪರಿಪೂರ್ಣ ಸುಂದರಳೆಂದು ತಿಳಿದಿರುವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಟೈರಿಗೆ ಹೇಳು, ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳ ಜನರ ನಡುವೆ ವ್ಯಾಪಾರವನ್ನು ನಡೆಸುವವಳೇ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, “ ‘ಟೈರ್ ನಗರಿಯೇ, “ನಾನು ಪೂರ್ಣ ಸೌಂದರ್ಯವತಿ,” ಎಂದು ನೀನು ಅಂದುಕೊಂಡಿದ್ದೀಯಲ್ಲಾ! ಅಧ್ಯಾಯವನ್ನು ನೋಡಿ |