Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:29 - ಕನ್ನಡ ಸತ್ಯವೇದವು J.V. (BSI)

29 ಹುಟ್ಟುಹಾಕುವವರೆಲ್ಲರೂ ಅಂಬಿಗರೂ ಸಮುದ್ರದ ಸಕಲ ನಾವಿಕರೂ ತಮ್ಮತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಹುಟ್ಟುಹಾಕುವವರೆಲ್ಲರೂ, ಅಂಬಿಗರೂ, ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದ ಇಳಿದು ನೆಲದ ಮೇಲೆ ನಿಂತುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ದುಃಖದಿಂದರಚುವರು ಹುಟ್ಟುಹಾಕುವವರು, ಅಂಬಿಗರು, ನಾವಿಕರೆಲ್ಲರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಹಡಗಿನ ಎಲ್ಲಾ ನಾವಿಕರು ನೀರಿಗೆ ಧುಮುಕಿ ಈಜುತ್ತಾ ದಡ ಸೇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಹುಟ್ಟುಹಾಕುವ ಅಂಬಿಗರೆಲ್ಲರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:29
5 ತಿಳಿವುಗಳ ಹೋಲಿಕೆ  

ಹೌದು, ಬಹುಜನಾಂಗಗಳು ನಿನ್ನ ಗತಿಗೆ ಬೆಚ್ಚಿಬೆರಗಾಗುವಂತೆ ಮಾಡುವೆನು; ನಾನು ನನ್ನ ಖಡ್ಗವನ್ನು ಅವುಗಳ ಅರಸರ ಕಣ್ಣೆದುರಿಗೆ ಬೀಸುವಾಗ ಅವರು ನಿನ್ನ ದುರ್ಗತಿಯನ್ನು ನೆನಸಿ ಭಯಭ್ರಾಂತರಾಗುವರು; ನಿನ್ನ ಪತನದಿನದಲ್ಲಿ ಪ್ರತಿಯೊಬ್ಬನು ತನ್ನ ತನ್ನ ಪ್ರಾಣಾಪಾಯಕ್ಕೆ ಕ್ಷಣಕ್ಷಣವೂ ನಡುಗುವನು.


ಆಗ ಸಮುದ್ರದ ಸುತ್ತುಮುತ್ತಲಿನ ಸಕಲಪ್ರಭುಗಳು ತಮ್ಮ ಸಿಂಹಾಸನಗಳಿಂದಿಳಿದು ನಿಲುವಂಗಿಗಳನ್ನು ತೆಗೆದುಹಾಕಿ ಬೂಟೇದಾರಿಯ ವಸ್ತ್ರಗಳನ್ನು ಕಿತ್ತೆಸೆದು ತತ್ತರವನ್ನೇ ಹೊದ್ದುಕೊಂಡು ನೆಲದ ಮೇಲೆ ಕುಕ್ಕರಿಸಿ ಕ್ಷಣಕ್ಷಣವೂ ನಡುಗುತ್ತಾ ನಿನಗೆ ಬೆಚ್ಚಿ ಬೆರಗಾಗುವರು.


ಚೀದೋನಿನವರೂ ಅರ್ವಾದಿನವರೂ ನಿನಗೆ ಹುಟ್ಟುಹಾಕುವರು; ತೂರೇ, ನಿನ್ನಲ್ಲಿನ ವಿವೇಕಿಗಳು ನಿನ್ನ ನಾವಿಕರು;


ನಾನು ನಿನ್ನ ನಾಶನದ ಸುದ್ದಿಯನ್ನು ಜನಾಂಗಗಳಲ್ಲಿ ನಿನಗೆ ತಿಳಿಯದ ದೇಶಗಳಿಗೂ ಮುಟ್ಟಿಸುವಾಗ ಆ ಬಹುಜನಾಂಗಗಳ ಮನಸ್ಸು ಕಳವಳಪಡುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು