ಯೆಹೆಜ್ಕೇಲನು 27:24 - ಕನ್ನಡ ಸತ್ಯವೇದವು J.V. (BSI)24 ನಿನ್ನ ವ್ಯಾಪಾರಿಗಳಾಗಿ ಉತ್ತಮಾಂಬರ ಕಸೂತಿಯ ಧೂಮ್ರದ ನಿಲುವಂಗಿ ಮೊದಲಾದ ಮಾಲುಗಳನ್ನೂ ಹಗ್ಗಗಳಿಂದ ಬಲವಾಗಿ ಬಿಗಿದ ವಿಚಿತ್ರವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಗಳಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಅವರು ನಿನ್ನ ವ್ಯಾಪಾರಿಗಳಾಗಿ, ಉತ್ತಮ ಕಸೂತಿಯ ಧೂಮ್ರ ವರ್ಣದ ನಿಲುವಂಗಿ ಮೊದಲಾದ ಸರಕುಗಳನ್ನೂ, ಹಗ್ಗಗಳಿಂದ ಬಲವಾಗಿ ಬಿಗಿದ ವಿಚಿತ್ರ ವಸ್ತ್ರಗಳ ಪೆಟ್ಟಿಗೆಗಳನ್ನೂ ತಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24 ನಿನ್ನ ವ್ಯಾಪಾರಿಗಳಾಗಿ ಉತ್ತಮಾಂಬರ ಕಸೂತಿಯ ಊದ ನಿಲುವಂಗಿ ಮೊದಲಾದ ಮಾಲುಗಳನ್ನೂ ಹಗ್ಗಗಳಿಂದ ಬಲವಾಗಿ ಬಿಗಿದ ಬಣ್ಣಬಣ್ಣದ ವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಕಳುಹಿಸುತ್ತಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ಅವರು ನಿನ್ನೊಂದಿಗೆ ಉತ್ತಮ ಬಟ್ಟೆಗಳು, ಕಸೂತಿ ಕೆಲಸಗಳು, ಬಣ್ಣಬಣ್ಣದ ಜಮಖಾನೆಗಳು, ಹುರಿದ ಹಗ್ಗಗಳು, ದೇವದಾರು ಮರಗಳಿಂದ ಮಾಡಿದ ವಸ್ತುಗಳು ಇವುಗಳೊಂದಿಗೆ ವ್ಯಾಪಾರ ನಡಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಎಂದರೆ ಸುಂದರವಾದ ಬಟ್ಟೆಗಳು, ನೀಲಿಬಟ್ಟೆಗಳು, ಕಸೂತಿಯ ಕೆಲಸ ಮತ್ತು ಹಗ್ಗಗಳಿಂದ ಬಲವಾಗಿ ಬಿಗಿದ ಬಣ್ಣಬಣ್ಣದ ವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಕಳುಹಿಸುತ್ತಿದ್ದರು. ಅಧ್ಯಾಯವನ್ನು ನೋಡಿ |