Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:21 - ಕನ್ನಡ ಸತ್ಯವೇದವು J.V. (BSI)

21 ಅರಾಬ್ಯರೂ ಕೇದಾರಿನ ಪ್ರಧಾನರೂ ನಿನ್ನ ಕೈಕೆಳಗಣ ವರ್ತಕರು; ಕುರಿ ಟಗರು ಹೋತಗಳನ್ನು ನಿನಗಾಗಿ ಸಾಗಿಸಿಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಅರಬರು ಮತ್ತು ಕೇದಾರಿನ ಪ್ರಧಾನರೂ ನಿನ್ನ ಕೈಕೆಳಗಿನ ವರ್ತಕರಾಗಿದ್ದರು; ಕುರಿಮರಿಗಳಿಂದಲೂ, ಟಗರುಗಳಿಂದಲೂ, ಹೋತಗಳಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 “ಅರಾಬ್ಯರೂ, ಕೇದಾರಿನ ಪ್ರಮುಖರೂ ನಿನ್ನ ಕೈಕೆಳಗಣ ವರ್ತಕರು: ಕುರಿ, ಟಗರು, ಹೋತಗಳನ್ನು ನಿನಗಾಗಿ ಸಾಗಿಸಿಕೊಂಡು ಬರುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಅರಾಬ್ಯರು ಮತ್ತು ಕೇದಾರಿನವರು ಕುರಿಮರಿಗಳನ್ನು, ಟಗರು ಮತ್ತು ಆಡುಗಳನ್ನು ಕೊಟ್ಟು ವ್ಯಾಪಾರ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 “ ‘ಅರೇಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ಗ್ರಾಹಕರಾಗಿದ್ದರು. ಕುರಿಮರಿಗಳಿಂದಲೂ ಹೋತಗಳಿಂದಲೂ ನಿನ್ನೊಡನೆ ವ್ಯಾಪಾರಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:21
16 ತಿಳಿವುಗಳ ಹೋಲಿಕೆ  

ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸಿ ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ನನ್ನ ಸುಂದರಾಲಯವನ್ನು ಚಂದಗೊಳಿಸುವೆನು.


ಇಷ್ಮಾಯೇಲನ ಮಕ್ಕಳಿಗೂ ಇವರಿಂದ ಹುಟ್ಟಿದ ಕುಲಗಳಿಗೂ ಇರುವ ಹೆಸರುಗಳು ಯಾವವಂದರೆ - ಮೊದಲು ಹುಟ್ಟಿದವನು ನೆಬಾಯೋತ್; ಆಮೇಲೆ ಹುಟ್ಟಿದವರು ಕೇದಾರ್, ಅದ್ಬಯೇಲ್,


ಹಾಗರ್ ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತ. ಅವಳು ಈಗಿನ ಯೆರೂಸಲೇಮ್ ಎಂಬವಳಿಗೆ ಸರಿಬೀಳುತ್ತಾಳೆ; ಹೇಗಂದರೆ, ಈಕೆ ತನ್ನ ಮಕ್ಕಳ ಸಹಿತ ದಾಸತ್ವದಲ್ಲಿದ್ದಾಳೆ.


ಅರಬೀದೇಶದವರೂ ಆಗಿರುವ ನಾವು ನಮ್ಮ ನಮ್ಮ ಭಾಷೆಗಳಲ್ಲಿ ಇವರು ದೇವರ ಮಹತ್ತುಗಳ ವಿಷಯವಾಗಿ ಹೇಳುವದನ್ನು ಕೇಳುತ್ತೇವೆ ಅಂದುಕೊಂಡರು.


ಅರಬಿಯ ಎಲ್ಲಾ ಅರಸರು, ಅರಣ್ಯವಾಸಿಗಳಾದ ವಿುಶ್ರಜಾತಿಯವರ ಎಲ್ಲಾ ಅರಸರು,


ಕರ್ತನು ನನಗೆ ಹೇಳಿರುವದೇನಂದರೆ - ಆಳಿನ ವರುಷ ವಾಯಿದೆಗೆ ಸರಿಯಾದ ಒಂದು ವರುಷಕ್ಕೇ ಕೇದಾರಿನ ಸಕಲ ವೈಭವವು ಇಲ್ಲವಾಗುವದು;


ಯೆರೂಸಲೇವಿುನ ನಾರಿಯರೇ, ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ ಸೊಲೊಮೋನನ ಪರದೆಗಳಂತೆ ಚಂದವುಳ್ಳವಳು.


ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರಬಿಯರು ತಮ್ಮ ಪಶುಗಳಲ್ಲಿ ಏಳು ಸಾವಿರದ ಏಳು ನೂರು ಟಗರುಗಳನ್ನೂ ಏಳು ಸಾವಿರದ ಏಳು ನೂರು ಹೋತಗಳನ್ನೂ ಕೊಡುತ್ತಿದ್ದರು.


ಇಷ್ಮಾಯೇಲ್ಯರ ವಂಶಾವಳಿ - ಇಷ್ಮಾಯೇಲನಿಗೆ ಮೊದಲು ಹುಟ್ಟಿದವನು ನೆಬಾಯೋತ್; ಆಮೇಲೆ ಹುಟ್ಟಿದವರು - ಕೇದಾರ್, ಅದ್ಬೆಯೇಲ್,


ಪ್ರತಿವರುಷ ಆರುನೂರರುವತ್ತಾರು ತಲಾಂತು ಬಂಗಾರವು ದೊರಕುತ್ತಿತ್ತು.


ಅಯ್ಯೋ, ನಾನು ಮೇಷೆಕಿನವರಲ್ಲಿ ತಂಗಬೇಕಲ್ಲಾ! ಕೇದಾರಿನವರ ಪಾಳೆಯಗಳಲ್ಲಿ ವಾಸಿಸಬೇಕಾಯಿತಲ್ಲಾ!


ಅರಬಿಯ ವಿಷಯವಾದ ದೈವೋಕ್ತಿ. ಸಾರ್ಥವಾಹರಾದ ದೇದಾನ್ಯರೇ, ಮರುಭೂವಿುಯ ಪೊದೆಗಳಲ್ಲಿ ಇಳಿದುಕೊಳ್ಳಿರಿ.


ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಹೊಡೆದ ಕೇದಾರನ್ನೂ ಹಾಚೋರಿನ ರಾಷ್ಟ್ರಗಳನ್ನೂ ಕುರಿತದ್ದು. ಏಳಿರಿ, ಕೇದಾರಿಗೆ ಹೋಗಿ ಮೂಡಣ ದೇಶದವರನ್ನು ಹಾಳುಮಾಡಿರಿ ಎಂದು ಯೆಹೋವನು ಶತ್ರುಗಳಿಗೆ ಅಪ್ಪಣೆಮಾಡಿದ್ದಾನೆ.


ಕುರಿಗಳಿಂದ ನಿನಗೆ ಉಡುಪಾಗುವದು, ಆಡುಗಳಿಂದ ಹೊಲದ ಕ್ರಯವೇಳುವದು.


ಅರಣ್ಯವೂ ಅಲ್ಲಿನ ಊರುಗಳೂ ಕೇದಾರಿನವರ ಗ್ರಾಮಗಳೂ ಆರ್ಭಟಿಸಲಿ, ಸೆಲಪಟ್ಟಣದವರು ಹರ್ಷಧ್ವನಿಗೈದು ಪರ್ವತಾಗ್ರಗಳಲ್ಲಿ ಕೇಕೆ ಹಾಕಲಿ.


ಕಿತ್ತೀಮ್ ದ್ವೀಪಗಳಿಗೆ ಹೋಗಿ ನೋಡಿರಿ, ಕೇದಾರಿಗೆ ಕಳುಹಿಸಿ ವಿಚಾರಮಾಡಿರಿ; ಇಂಥಾ ಕಾರ್ಯವು ಎಲ್ಲಿಯಾದರೂ ನಡೆಯಿತೇ ಎಂದು ಚೆನ್ನಾಗಿ ಆಲೋಚಿಸಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು