Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:2 - ಕನ್ನಡ ಸತ್ಯವೇದವು J.V. (BSI)

2 ನರಪುತ್ರನೇ, ನೀನು ತೂರಿನ ವಿಷಯದಲ್ಲಿ ಶೋಕಗೀತವನ್ನೆತ್ತು, ಅದಕ್ಕೆ ಹೀಗೆ ನುಡಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ನರಪುತ್ರನೇ, ನೀನು ತೂರಿನ ವಿಷಯದಲ್ಲಿ ಶೋಕ ಗೀತೆಯನ್ನೆತ್ತು, ಅದಕ್ಕೆ ಹೀಗೆ ನುಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ನರಪುತ್ರನೇ, ಟೈರ್‍ನಗರ ಕುರಿತ ಶೋಕಗೀತೆಯೊಂದನ್ನು ಹಾಡಿ, ಹೀಗೆಂದು ಹೇಳು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 “ನರಪುತ್ರನೇ, ತೂರಿನ ವಿಷಯವಾದ ಶೋಕಗೀತೆಯನ್ನು ಹಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 “ಮನುಷ್ಯಪುತ್ರನೇ, ಈಗ ಟೈರಿನ ಬಗ್ಗೆ ನೀನು ಗೋಳಾಟವನ್ನೆತ್ತು;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:2
12 ತಿಳಿವುಗಳ ಹೋಲಿಕೆ  

ನರಪುತ್ರನೇ, ನೀನು ತೂರಿನ ಅರಸನ ವಿಷಯದಲ್ಲಿ ಶೋಕಗೀತವನ್ನೆತ್ತು, ಅವನಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀನು ಸರ್ವಸುಲಕ್ಷಣಶಿರೋಮಣಿ, ಪೂರ್ಣಜ್ಞಾನಿ, ಪರಿಪೂರ್ಣಸುಂದರ.


ಇಸ್ರಾಯೇಲಿನ ಪ್ರಭುಗಳ ವಿಷಯವಾಗಿ ಈ ಶೋಕಗೀತವನ್ನು ಎತ್ತು -


ನಾನು ಪರ್ವತಗಳಿಗಾಗಿ ಅತ್ತು ಗೋಳಾಡುವೆನು, ಅಡವಿಯ ಕಾವಲುಗಳಿಗಾಗಿ ಶೋಕಗೀತವನ್ನು ಹಾಡುವೆನು; ಅವು ಸುಟ್ಟುಹೋಗಿವೆ, ಯಾರೂ ಹಾದುಹೋಗರು, ದನದ ಸದ್ದು ಕಿವಿಗೆ ಬೀಳದು, ಮೃಗಪಕ್ಷಿಗಳು ತೊಲಗಿಹೋಗಿವೆ.


ಸೇನಾಧೀಶ್ವರದೇವರಾದ ಯೆಹೋವಕರ್ತನು ಇಂತೆನ್ನುತ್ತಾನೆ - ಎಲ್ಲಾ ಚೌಕಗಳಲ್ಲಿ ಕಿರಿಚಾಟವಾಗುವದು, ಸಕಲ ಬೀದಿಗಳಲ್ಲಿ ಅಯ್ಯಯ್ಯೋ ಎಂದು ಅರಚಿಕೊಳ್ಳುವರು; ರೈತರನ್ನು ಪ್ರಲಾಪಿಸುವದಕ್ಕೂ ಗೋಳಾಟದವರನ್ನು ಗೋಳಿಡುವದಕ್ಕೂ ಕರೆಯುವರು.


ಇಸ್ರಾಯೇಲ್ ವಂಶದವರೇ, ನಾನು ನಿಮ್ಮ ವಿಷಯದಲ್ಲಿ ಶೋಕಗೀತವಾಗಿ ಎತ್ತುವ ಈ ಮಾತನ್ನು ಕೇಳಿರಿ -


ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ವಿಷಯವಾಗಿ ಶೋಕಗೀತವನ್ನೆತ್ತಿ ಅವನಿಗೆ ಹೀಗೆ ನುಡಿ - ನೀನು ಜನಾಂಗಗಳಲ್ಲಿ ಮೃಗರಾಜನೆನಿಸಿಕೊಂಡಿದ್ದಿ; ಇಗೋ ಮಹಾನದಿಯಲ್ಲಿನ ಪೇರ್ಮೊಸಳೆಯಾಗಿಬಿಟ್ಟಿ; ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು ನೀರನ್ನು ನಿನ್ನ ಕಾಲುಗಳಿಂದ ಕಲಕಿ ಜನಾಂಗಗಳ ಹೊಳೆಗಳನ್ನೂ ತುಳಿದು ಬದಿಮಾಡಿದಿ.


ಅವರು ರೋದನಮಾಡುತ್ತಾ ನಿನ್ನ ವಿಷಯವಾಗಿ ಶೋಕಗೀತವನೆತ್ತಿ ಹೀಗೆ ಪ್ರಲಾಪಿಸುವರು - ಸಮುದ್ರದ ನಡುವೆ ಬಿಕೋ ಎನ್ನುವ ತೂರಿಗೆ ಯಾವದು ಸಮಾನ?


ಇವರು ನಿನ್ನ ವಿಷಯದಲ್ಲಿ - ನಾವಿಕರ ನಿವಾಸವೇ, ಹೆಸರುವಾಸಿಯ ಪುರಿಯೇ, ಸಮುದ್ರದಿಂದ ಬಲಗೊಂಡ ನಗರಿಯೇ, ನೀನು ಎಷ್ಟೋ ಹಾಳಾದಿ! ಸಮುದ್ರಸಂಚಾರಿಗಳಿಗೆಲ್ಲಾ ಭಯಾಸ್ಪದರಾಗಿದ್ದ ನಿನ್ನ ನಿವಾಸಿಗಳು ಎಷ್ಟೋ ಹಾಳಾದರು!


ಹೀಗಿರಲು ಕರ್ತನಾದ ಯೆಹೋವನ ಈ ಮಾತನ್ನು ಕೇಳಿರಿ - ಆಹಾ, ನನ್ನ ಕೋಪವೆಂಬ ರೋಷಾಗ್ನಿಯು ಈ ಸ್ಥಳದಲ್ಲಿ ಸುರಿಯಲ್ಪಡುವದು; ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಕಾಡುಮರಗಳ ಮೇಲೆಯೂ ಭೂವಿುಯ ಬೆಳೆಯ ಮೇಲೆಯೂ ಅದನ್ನು ಸುರಿಯುವೆನು; ಆರದೆ ದಹಿಸುವದು.


ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು -


ಇವರಿಗಾಗಲಿ ಇವರ ಪಿತೃಗಳಿಗಾಗಲಿ ಗೊತ್ತಿಲ್ಲದ ಜನಾಂಗಗಳೊಳಗೆ ಇವರನ್ನು ಚದರಿಸಿಬಿಟ್ಟು ಇವರು ನಿರ್ಮೂಲವಾಗುವ ತನಕ ಖಡ್ಗವನ್ನು ಇವರ ಹಿಂದೆ ಕಳುಹಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು