Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 23:43 - ಕನ್ನಡ ಸತ್ಯವೇದವು J.V. (BSI)

43 ಆಗ ನಾನು - ಆಹಾ, ಕಳೆಗುಂದಿದವಳಿಗೆ ಇನ್ನೂ ವ್ಯಭಿಚಾರವೇ! ಇವರು ಅವಳೊಂದಿಗೆ ಅವಳು ಇವರೊಂದಿಗೆ ಜಾರತನ ಮಾಡುತ್ತಾರಲ್ಲಾ ಅಂದುಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

43 ಆಗ ನಾನು, ‘ಆಹಾ, ಕಳೆಗುಂದಿದವಳಿಗೆ ಇನ್ನೂ ವ್ಯಭಿಚಾರವೇ! ಇವರು ಅವಳೊಂದಿಗೆ, ಅವಳು ಇವರೊಂದಿಗೆ ವ್ಯಭಿಚಾರ ಮಾಡುತ್ತಾರಲ್ಲಾ’ ಅಂದುಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

43 ಆಗ ನಾನು - ‘ಆಹಾ, ಕಳೆಗುಂದಿದವಳಿಗೆ ಇನ್ನೂ ವ್ಯಭಿಚಾರವೇ! ಇವರು ಅವಳೊಂದಿಗೆ ಅವಳು ಇವರೊಂದಿಗೆ ಜಾರತನ ಮಾಡುತ್ತಾರಲ್ಲಾ’ ಎಂದುಕೊಂಡೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

43 ಆಗ ನಾನು ಅನೈತಿಕ ಜೀವಿತದಲ್ಲಿ ಬತ್ತಿಹೋದ ಒಬ್ಬ ಹೆಂಗಸಿನ ಬಗ್ಗೆ, (ನನ್ನೊಳಗೆ) ‘ಈಗಲೂ ಸಹ ಅವರು ಆಕೆಯೊಂದಿಗೆ ಲೈಂಗಿಕ ಪಾಪ ಮಾಡುವರೇ?’ ಎಂದುಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

43 ಆಮೇಲೆ ನಾನು ಅವಳಿಗೆ ಹೇಳಿದ್ದೇನೆಂದರೆ, ‘ವ್ಯಭಿಚಾರದಿಂದ ಸವೆದು ಹೋದವಳು ಅವಳೇ, ಮತ್ತೆ ಅವರು ಅವಳ ಸಂಗಡ ವ್ಯಭಿಚರಿಸಬಹುದೇ?’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 23:43
6 ತಿಳಿವುಗಳ ಹೋಲಿಕೆ  

ಕರ್ತನೇ, ನಿನ್ನ ಸಮಸ್ತ ಧರ್ಮಕಾರ್ಯಗಳಿಗೆ ಅನುಸಾರವಾಗಿ ನಿನ್ನ ಪಟ್ಟಣವೂ ನಿನ್ನ ಪವಿತ್ರಪರ್ವತವೂ ಆದ ಯೆರೂಸಲೇವಿುನ ಮೇಲಣ ನಿನ್ನ ಕೋಪವನ್ನು, ನಿನ್ನ ರೋಷಾಗ್ನಿಯನ್ನು ದಯಮಾಡಿ ತೊಲಗಿಸಿಬಿಡು; ನಮ್ಮ ಮತ್ತು ನಮ್ಮ ಪಿತೃಗಳ ಪಾಪಾಪರಾಧಗಳ ನಿವಿುತ್ತ ಯೆರೂಸಲೇಮೂ ನಿನ್ನ ಜನವೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆಯಲ್ಲಾ.


ಅವರು ಐಗುಪ್ತದಲ್ಲಿ ಸೂಳೆತನ ಮಾಡುತ್ತಿದ್ದರು, ಬಾಲ್ಯದಲ್ಲೇ ಸೂಳೆಯರಾಗಿ ನಡೆಯುತ್ತಿದ್ದರು; ಅಲ್ಲಿ ಅವರ ಸ್ತನಗಳು ಹಿಸಕಲ್ಪಟ್ಟವು, ಎಳೆಯ ತೊಟ್ಟುಗಳು ನಸುಕಲ್ಪಟ್ಟವು.


ಕೂಷ್ಯನು ತನ್ನ ಚರ್ಮವನ್ನು ಮಾರ್ಪಡಿಸಬಲ್ಲನೇ? ಚಿರತೆಯು ತನ್ನ ಚುಕ್ಕೆಗಳನ್ನು ಬದಲಾಯಿಸೀತೇ? ಹೀಗಾದರೆ ದುಷ್ಟತನದಲ್ಲಿ ಶಿಕ್ಷಿತರಾದ ನೀವು ಶಿಷ್ಟತನದಲ್ಲಿ ನಡೆಯಬಹುದು.


ನಮ್ಮ ಪಿತೃಗಳಂತೆ ನಾವೂ ಪಾಪಿಗಳು; ಅಪರಾಧಮಾಡಿದೆವು; ದುಷ್ಟತನವನ್ನು ನಡಿಸಿದೆವು.


ನಾವು ನಮ್ಮ ಪಿತೃಗಳ ಕಾಲದಿಂದ ಇಂದಿನವರೆಗೂ ಮಹಾಪರಾಧಿಗಳೇ. ನಮ್ಮ ಪಾಪಗಳ ದೆಸೆಯಿಂದ ನಾವೂ ನಮ್ಮ ಅರಸರೂ ಯಾಜಕರೂ ಅನ್ಯದೇಶಗಳ ರಾಜರ ಕೈಗೆ ಒಪ್ಪಿಸಲ್ಪಟ್ಟು ಈಗಿರುವಂತೆ ಕತ್ತಿಗೂ ಸೆರೆಗೂ ಸುಲಿಗೆಗೂ ಅಪಮಾನಕ್ಕೂ ಗುರಿಯಾದೆವು.


ಸೂಳೆಯನ್ನು ಸೇರುವ ಹಾಗೆ ಈ ಜನರು ಅವಳನ್ನು ಸೇರಿದರು; ಹೌದು, ಕೆಟ್ಟ ಹೆಂಗಸರಾದ ಒಹೊಲಳನ್ನೂ ಒಹೊಲೀಬಳನ್ನೂ ಸೇರಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು