Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 23:41 - ಕನ್ನಡ ಸತ್ಯವೇದವು J.V. (BSI)

41 ನಿನ್ನನ್ನು ಆಭರಣಗಳಿಂದ ಸಿಂಗರಿಸಿಕೊಂಡು ವೈಭವದ ಮಂಚದ ಮೇಲೆ ಕೂತಿದ್ದಿ; ಅದರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿದ್ದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ವೈಭವದ ಮಂಚದ ಮೇಲೆ ಕುಳಿತುಕೊಂಡೆ. ಅವರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ನಿನ್ನನ್ನು ಆಭರಣಗಳಿಂದ ಸಿಂಗರಿಸಿಕೊಂಡು ವೈಭವದ ಮಂಚದ ಮೇಲೆ ಕೂತಿರುವೆ. ಅದರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ನೀನು ಅಮೋಘವಾದ ಮಂಚದಲ್ಲಿ ಕುಳಿತುಕೊಂಡೆ. ಅದರ ಮುಂದೆ ಸಿದ್ಧಪಡಿಸಲ್ಪಟ್ಟಿದ್ದ ಮೇಜಿತ್ತು. ಆ ಮೇಜಿನ ಮೇಲೆ ನನ್ನ ಧೂಪ ಮತ್ತು ಎಣ್ಣೆಯನ್ನು ಇಟ್ಟಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ವೈಭವದ ಮಂಚದ ಮೇಲೆ ಕುಳಿತುಕೊಂಡೆ. ಅವರ ಮುಂದೆ ನನ್ನ ಧೂಪವನ್ನು ನನ್ನ ಎಣ್ಣೆಯನ್ನು ಇಟ್ಟಿದ್ದ ಮೇಜನ್ನು ಸಿದ್ಧಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 23:41
14 ತಿಳಿವುಗಳ ಹೋಲಿಕೆ  

ಅಲ್ಲಿ ಬಿಳೀ ನೂಲಿನ ಬಟ್ಟೆಗಳೂ ನೀಲಿಬಟ್ಟೆಗಳೂ ಧೂಮ್ರವರ್ಣವುಳ್ಳ ನಾರಿನ ದಾರದಿಂದ ಸಂಗಮೀರ ಕಲ್ಲು ಕಂಬಗಳಲ್ಲಿನ ಬೆಳ್ಳಿಯ ಉಂಗುರಗಳಿಗೆ ಕಟ್ಟಲ್ಪಟ್ಟಿದ್ದವು. ಜರತಾರೆಯ ಕಸೂತಿ ಹಾಕಿರುವ ಲೋಡುಗಳು ಕೆಂಪು ಬಿಳಿ ಹಳದಿ ಕಪ್ಪು ಬಣ್ಣಗಳುಳ್ಳ ಸಂಗಮೀರ ಕಲ್ಲುಗಳಿಂದ ರಚಿತವಾದ ನೆಲಗಟ್ಟಿನ ಮೇಲೆ ಇಡಲ್ಪಟ್ಟಿದ್ದವು.


ದಂತದ ಮಂಚಗಳ ಮೇಲೆ ಮಲಗುತ್ತಾರೆ, ತಮ್ಮ ಗದ್ದುಗೆಗಳಲ್ಲಿ ಹಾಯಾಗಿ ಒರಗಿಕೊಳ್ಳುತ್ತಾರೆ; ಹಿಂಡಿನ ಮರಿಗಳನ್ನೂ ಕೊಟ್ಟಿಗೆಯ ಕರುಗಳನ್ನೂ ತಿನ್ನುತ್ತಾರೆ;


ಅವರು ನನ್ನ ಪವಿತ್ರಾಲಯವನ್ನು ಪ್ರವೇಶಿಸಿ ನನ್ನ ಸೇವೆಮಾಡುವದಕ್ಕೆ ನನ್ನ ವೇದಿಯನ್ನು ಸಮೀಪಿಸಿ ನನ್ನ [ಆಲಯದ] ಪಾರುಪತ್ಯವನ್ನು ವಹಿಸುವರು.


ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು, ಸುರಿಯುವೆವು ಎಂದು ನಾವು ಬಾಯಿಬಿಟ್ಟು ಹೇಳಿದ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುವೆವು. ಮೊದಲು ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇವಿುನ ಬೀದಿಗಳಲ್ಲಿ ನಾವೂ ನಮ್ಮ ಪಿತೃಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಹೀಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬಾ ಉಂಡು ಸುಖಪಡುತ್ತಿದ್ದೆವು.


ಆದರೆ ಯೆಹೋವನಾದ ನನ್ನನ್ನು ತೊರೆದು ನನ್ನ ಪವಿತ್ರಪರ್ವತವನ್ನು ಮರೆತು ಶುಭದಾಯಕದೇವತೆಗೆ ಔತಣವನ್ನು ಅಣಿಮಾಡಿ ಗತಿದಾಯಕದೇವತೆಗೆ ಮದ್ಯವನ್ನು ತುಂಬಾ ಬೆರಸಿದ ನಿಮಗೆ ಕತ್ತಿಯನ್ನೇ ಗತಿಯಾಗಮಾಡುವೆನು.


ಮಹೋನ್ನತಪರ್ವತದಲ್ಲಿ ನೀನು ಮಂಚವನ್ನು ಹಾಕಿಕೊಂಡಿದ್ದೀ, ಯಜ್ಞಮಾಡಲು ಆ ಬೆಟ್ಟವನ್ನೇರಿದ್ದೀ.


ನನ್ನ ಯಜ್ಞವೇದಿಯ ಮೇಲೆ ಅಶುದ್ಧ ಪದಾರ್ಥಗಳನ್ನು ಅರ್ಪಿಸುತ್ತೀರಲ್ಲಾ. ಯಾವ ವಿಷಯದಲ್ಲಿ ನಿನ್ನನ್ನು ಅಶುದ್ಧಗೊಳಿಸಿದ್ದೇವೆ ಅನ್ನುತ್ತೀರೋ?ಯೆಹೋವನ ಮೇಜಿಗೆ ಘನತೆಯೇನಿದೆ ಎಂದು ನೀವು ಅಂದುಕೊಳ್ಳುವದರಲ್ಲಿಯೇ.


ಒಂದೊಂದು ಯಜ್ಞವೇದಿಯ ಹತ್ತಿರದಲ್ಲಿಯೂ ಅಡವಾಗಿ ಇಟ್ಟುಕೊಂಡ ಬಟ್ಟೆಗಳ ಮೇಲೆ ಮಲಗಿಕೊಳ್ಳುತ್ತಾರೆ; ದಂಡಹಾಕಿಸಿಕೊಂಡವರ ದ್ರಾಕ್ಷಾರಸವನ್ನು ತಮ್ಮ ದೇವರ ಮಂದಿರದಲ್ಲಿಯೂ ಕುಡಿಯುತ್ತಾರೆ.


ಅವನು - ಒಲ್ಲೆನು; ಊಟಮಾಡುವದಿಲ್ಲ ಅಂದನು. ಆದರೆ ಅವನ ಸೇವಕರೂ ಆ ಸ್ತ್ರೀಯೂ ಬಹಳವಾಗಿ ಬೇಡಿಕೊಂಡದರಿಂದ ಅವನು ಕಡೆಗೆ ಅವರ ಮಾತಿಗೆ ಒಪ್ಪಿ ನೆಲದಿಂದೆದ್ದು ಮಂಚದ ಮೇಲೆ ಕೂತುಕೊಂಡನು.


ಅಲ್ಲಿ ಮರದ ವೇದಿಯೊಂದಿತ್ತು; ಅದರ ಎತ್ತರ ಮೂರು ಮೊಳ, ಉದ್ದ ಎರಡು ಮೊಳ; ಅದರ ಮೂಲೆಗಳೂ ಪೀಠವೂ ಪಕ್ಕಗಳೂ ಮರದ್ದೇ; ಆ ಪುರುಷನು ನನಗೆ - ಇದು ಯೆಹೋವನ ಸಮ್ಮುಖದ ಮೇಜು ಎಂದು ಹೇಳಿದನು.


ಆ ವಂಶದವರು ಎತ್ತರವಾದ ಎಲ್ಲಾ ಗುಡ್ಡಗಳ ಮೇಲೂ ಎಲ್ಲಾ ಬೆಟ್ಟಗಳ ತುದಿಗಳಲ್ಲಿಯೂ ಸೊಂಪಾದ ಎಲ್ಲಾ ಮರಗಳ ಕೆಳಗೂ ತಮ್ಮ ಸಮಸ್ತ ವಿಗ್ರಹಗಳಿಗೆ ಸುಗಂಧಹೋಮಮಾಡುತ್ತಿದ್ದ ದಟ್ಟವಾದ ಎಲ್ಲಾ ಏಲಾ ಮರಗಳ ಕೆಳಗೂ ಹತರಾಗಿ ತಮ್ಮ ಯಜ್ಞವೇದಿಗಳ ಸುತ್ತಲು ತಮ್ಮ ಬೊಂಬೆಗಳ ನಡುವೆ ಬಿದ್ದಿರುವಾಗ ನಾನೇ ಯೆಹೋವನು ಎಂದು ಗೊತ್ತಾಗುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು