Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 23:19 - ಕನ್ನಡ ಸತ್ಯವೇದವು J.V. (BSI)

19 ಆದರೂ ಇವಳು ತಾನು ಐಗುಪ್ತದೇಶದಲ್ಲಿ ಸೂಳೆಯಾಗಿದ್ದ ತನ್ನ ಎಳೆಪ್ರಾಯವನ್ನು ಜ್ಞಾಪಕಮಾಡಿಕೊಂಡು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಆದರೂ ಇವಳು ತಾನು ಐಗುಪ್ತ ದೇಶದಲ್ಲಿ ವ್ಯಭಿಚಾರಿಯಾಗಿದ್ದ ತನ್ನ ಎಳೆಯ ಪ್ರಾಯವನ್ನು ಜ್ಞಾಪಕಮಾಡಿಕೊಂಡು, ತನ್ನ ವ್ಯಭಿಚಾರವನ್ನು ಇನ್ನೂ ಹೆಚ್ಚಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಆದರೂ ಇವಳು ತಾನು ಈಜಿಪ್ಟ್ ದೇಶದಲ್ಲಿ ಸೂಳೆಯಾಗಿದ್ದ ತನ್ನ ತಾರುಣ್ಯವನ್ನು ನೆನಪುಮಾಡಿಕೊಂಡು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಮತ್ತೆಮತ್ತೆ ಒಹೊಲೀಬಳು ನನಗೆ ಅಪನಂಬಿಗಸ್ತಳಾದಳು. ಆಕೆಯು ಯುವತಿಯಾಗಿದ್ದಾಗ ಈಜಿಪ್ಟಿನಲ್ಲಿ ತಾನು ಮಾಡಿಕೊಂಡಿದ್ದ ಅನೈತಿಕ ಸಂಬಂಧಗಳನ್ನು ನೆನಪುಮಾಡಿಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆದರೂ ಅವಳು ಈಜಿಪ್ಟ್ ದೇಶದಲ್ಲಿ ವ್ಯಭಿಚಾರ ಮಾಡಿದಾಗ ತನ್ನ ಯೌವನದ ದಿನಗಳನ್ನು ಜ್ಞಾಪಕಮಾಡಿಕೊಂಡು ತನ್ನ ವ್ಯಭಿಚಾರವನ್ನು ಹೆಚ್ಚಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 23:19
13 ತಿಳಿವುಗಳ ಹೋಲಿಕೆ  

ಅವರು ಐಗುಪ್ತದಲ್ಲಿ ಸೂಳೆತನ ಮಾಡುತ್ತಿದ್ದರು, ಬಾಲ್ಯದಲ್ಲೇ ಸೂಳೆಯರಾಗಿ ನಡೆಯುತ್ತಿದ್ದರು; ಅಲ್ಲಿ ಅವರ ಸ್ತನಗಳು ಹಿಸಕಲ್ಪಟ್ಟವು, ಎಳೆಯ ತೊಟ್ಟುಗಳು ನಸುಕಲ್ಪಟ್ಟವು.


ಬೇತೇಲಿಗೆ ಬಂದು ದ್ರೋಹಮಾಡಿರಿ, ಗಿಲ್ಗಾಲಿನಲ್ಲಿ ನೆರೆದು ದ್ರೋಹವನ್ನು ಇನ್ನೂ ಹೆಚ್ಚಿಸಿರಿ; ಪ್ರತಿದಿನ ಬೆಳಿಗ್ಗೆ ನಿಮ್ಮ ಯಜ್ಞಗಳನ್ನು ಅರ್ಪಿಸಿರಿ, ಮೂರು ದಿನಕ್ಕೆ ಒಂದು ಸಲ ದಶಮಾಂಶವನ್ನು ಸಲ್ಲಿಸಿರಿ,


[ಒಹೊಲೀಬಳೇ,] ನಿನ್ನ ಪುಟ್ಟಮೊಲೆಗಳಿಗೆ ಆಶೆಬಿದ್ದ ಐಗುಪ್ತ್ಯರಿಂದ ತೊಟ್ಟುಗಳನ್ನು ನಸುಕಿಸಿಕೊಂಡ ನಿನ್ನ ಎಳೆಪ್ರಾಯದ ಕಾಮವನ್ನು ನೀನು ನೆನಪಿಗೆ ತಂದುಕೊಂಡು ಆ ವಿುಂಡರನ್ನು ಮೋಹಿಸಿದಿಯಲ್ಲಾ.


ಇವಳು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿದಳು; ಇಗೋ, ಕಸ್ದೀಯರ ಚಿತ್ರಗಳು ಅಂದರೆ ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ ತಲೆಗೆ ಚುಂಗಿನ ರುಮಾಲನ್ನು ಧರಿಸಿ ಯಾರೂ ತಪ್ಪದೆ ನೋಟಕ್ಕೆ ಸರದಾರರಂತಿದ್ದು ತಮ್ಮ ಜನ್ಮಭೂವಿುಯಾದ ಬಾಬೆಲಿನ ಕಸ್ದೀಯರೇ ಆಗಿ ಕಂಡು ಬರುವ ಮನುಷ್ಯರ ಆಕಾರಗಳು


ಅವಳು ಐಗುಪ್ತದಲ್ಲಿದ್ದಂದಿಂನಿಂದಲೂ ತನ್ನ ಸೂಳೆತನವನ್ನು ಬಿಡಲಿಲ್ಲ; ಅವಳ ಬಾಲ್ಯದಲ್ಲಿಯೇ ಅಲ್ಲಿನವರು ಅವಳೊಂದಿಗೆ ಮಲಗಿ ಅವಳ ಎಳೆಯ ತೊಟ್ಟುಗಳನ್ನು ನಸುಕಿ ಅವಳ ಸಂಗಡ ಸೂಳೆಗಾರಿಕೆಯನ್ನು ಹೆಚ್ಚೆಚ್ಚಾಗಿ ಮಾಡಿದರು.


ನೀವೆಲ್ಲರೂ ನಿಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯವಸ್ತುಗಳನ್ನು ಬಿಸಾಟುಬಿಡಿರಿ, ಐಗುಪ್ತದ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳಬೇಡಿರಿ; ನಾನು ನಿಮ್ಮ ದೇವರಾದ ಯೆಹೋವನು ಎಂಬದಾಗಿ ಅವರನ್ನು ಎಚ್ಚರಿಸಿದೆನು.


ಸಮಾರ್ಯವೆಂಬಾಕೆಯು ಕೂಡ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯಕಾರ್ಯಗಳನ್ನು ನಡಿಸಿದ್ದೀ; ನೀನು ಮಾಡಿದ ಲೆಕ್ಕವಿಲ್ಲದ ದುರಾಚಾರಗಳಿಂದ ಅವರನ್ನು ನಿರ್ದೋಷಿಗಳೆಂದು ತೋರ್ಪಡಿಸಿದಿ.


ಇದಲ್ಲದೆ ನೀನು ತುಂಬಾ ವ್ಯಾಪಾರವುಳ್ಳ ಕಸ್ದೀಯ ದೇಶಕ್ಕೆ ಸೇರಿ ಅಲ್ಲಿಯೂ ಬಹಳ ಸೂಳೆತನ ಮಾಡಿದಿ, ಆದರೂ ನಿನಗೆ ತೃಪ್ತಿಯಾಗಲಿಲ್ಲ.


ಒಂದೊಂದು ಬೀದಿಯ ಕೊನೆಯಲ್ಲಿಯೂ ನೀನು ಜಗಲಿಯನ್ನು ಕಟ್ಟಿಕೊಂಡು ನಿನ್ನ ಸೌಂದರ್ಯವನ್ನು ನೀಚ ಕೆಲಸಕ್ಕೆ ಒಪ್ಪಿಸಿ ಹಾದುಹೋಗುವವರೆಲ್ಲರನ್ನು ಸೇರಿ ಸೂಳೆತನವನ್ನು ಹೆಚ್ಚಾಗಿ ನಡಿಸಿದ್ದೀ.


ಈ ನಿನ್ನ ಅಸಹ್ಯಕಾರ್ಯಗಳನ್ನೂ ಸೂಳೆತನವನ್ನೂ ನೀನು ಪದೇಪದೇ ನಡಿಸುತ್ತಿದ್ದಾಗ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದ ನಿನ್ನ ಎಳೆತನವನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳಲಿಲ್ಲ.


ಸುಮಾರು ಮೂರು ತಿಂಗಳಾದ ಮೇಲೆ ಯೆಹೂದನು ತನ್ನ ಸೊಸೆಯಾದ ತಾಮಾರಳು ವ್ಯಭಿಚಾರದಿಂದ ಬಸುರಾಗಿದ್ದಾಳೆ ಎಂಬ ವರ್ತಮಾನವನ್ನು ತಿಳಿದು - ಅವಳನ್ನು ಹೊರಗೆ ತನ್ನಿರಿ, ಸುಡಬೇಕಾಗಿದೆ ಎಂದು ಹೇಳಿದನು.


ಇವಳು ಮುಚ್ಚುಮರೆಯಿಲ್ಲದೆ ಸೂಳೆತನಮಾಡಿ ತನ್ನ ಮಾನವನ್ನು ಕೆಡಿಸಿಕೊಂಡಾಗ ನನ್ನ ಅನುರಾಗವು ಮೊದಲು ಇವಳ ಅಕ್ಕನಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು.


ಕತ್ತೆಗಳಂತೆ ಬೆದೆಯುಳ್ಳವರೂ ಕುದುರೆಗಳಂತೆ ದಾಟುವವರೂ ಆದ ಕಸ್ದೀಯ ವಿುಂಡರನ್ನು ಮೋಹಿಸಿದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು