Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 21:9 - ಕನ್ನಡ ಸತ್ಯವೇದವು J.V. (BSI)

9 ಕರ್ತನು ಇಂತೆನ್ನುತ್ತಾನೆ ಎಂಬದಾಗಿ ನುಡಿದು ಹೀಗೆ ಸಾರು - ಆಹಾ, ಖಡ್ಗ, ಖಡ್ಗ, ಸಾಣೆಹಿಡಿದಿದೆ, ತಿಕ್ಕಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 “ನರಪುತ್ರನೇ, ಕರ್ತನು ಇಂತೆನ್ನುತ್ತಾನೆ ಎಂಬುದಾಗಿ ನುಡಿದು ಹೀಗೆ ಸಾರು, ‘ಆಹಾ, ಖಡ್ಗ, ಸಾಣೆ ಹಿಡಿದ ಖಡ್ಗ, ಮಸೆದ ಖಡ್ಗ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 “ನರಪುತ್ರನೇ, ಪ್ರವಾದಿಸು ಸರ್ವೇಶ್ವರ ಹೀಗೆನ್ನುತ್ತಾರೆಂದು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ನರಪುತ್ರನೇ, ನನ್ನ ಪರವಾಗಿ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “‘ನೋಡು, ಒಂದು ಖಡ್ಗ, ಹರಿತವಾದ ಖಡ್ಗ, ಆ ಖಡ್ಗವು ಉಜ್ಜಿ ಶುಭ್ರಮಾಡಲ್ಪಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ಮನುಷ್ಯಪುತ್ರನೇ, ಪ್ರವಾದಿಸಿ, ‘ಯೆಹೋವ ದೇವರು ಹೀಗೆ ಹೇಳುತ್ತಾರೆಂದು ಹೇಳು: “ ‘ಆ ಒಂದು ಖಡ್ಗವು ಹದಮಾಡಲಾಗಿದೆ; ಮೆರುಗೂ ಸಹ ಮಾಡಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 21:9
17 ತಿಳಿವುಗಳ ಹೋಲಿಕೆ  

ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ - ಅಮ್ಮೋನ್ಯರ ವಿಷಯದಲ್ಲಿಯೂ ಅವರು ಮಾಡುವ ದೂಷಣೆಯ ವಿಷಯದಲ್ಲಿಯೂ ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ಖಡ್ಗ, ಖಡ್ಗ, ಸಂಹರಿಸುವದಕ್ಕೆ ಹಿರಿದಿದೆ, ವಿುಂಚುವಂತೆ ತೀರಾತಿಕ್ಕಿದೆ;


ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ನಿನಗೆ ವಿರುದ್ಧನಾಗಿದ್ದೇನೆ, ನನ್ನ ಖಡ್ಗವನ್ನು ಒರೆಯಿಂದ ಹಿರಿದು ನಿನ್ನಲ್ಲಿನ ಶಿಷ್ಟರನ್ನೂ ದುಷ್ಟರನ್ನೂ ಸಂಹರಿಸಿಬಿಡುವೆನು.


ಶತ್ರುವಶವಾಗಿ ಸೆರೆಗೆ ಹೋದರೂ ಖಡ್ಗವು ನನ್ನ ಆಜ್ಞಾನುಸಾರ ಅಲ್ಲಿಯೂ ಅವರನ್ನು ಹತಿಸುವದು; ಮೇಲಿಗಲ್ಲ, ಕೇಡಿಗಾಗಿಯೇ ಅವರ ಮೇಲೆ ದೃಷ್ಟಿಯಿಡುವೆನು.


ಅವರ ಹೃದಯವು ನೀರಾಗಿ ಬಹುಜನ ಎಡವಿಬೀಳುವಂತೆ ಸಂಹರಿಸುವ ಖಡ್ಗವನ್ನು ಅವರ ಪುರದ್ವಾರಗಳಿಗೆಲ್ಲಾ ತಂದಿದ್ದೇನೆ. ಆಹಾ, ವಿುಂಚಿನಂತೆ ವಿುಂಚುತ್ತದೆ, ವಧೆಗಾಗಿ ಉಜ್ಜಿದೆ!


ನೀನು ಅವರಿಗೆ - ಮರಣವ್ಯಾಧಿಗೆ ಗೊತ್ತಾದವರು ಮರಣವ್ಯಾಧಿಗೆ, ಖಡ್ಗಕ್ಕೆ ಗೊತ್ತಾದವರು ಖಡ್ಗಕ್ಕೆ, ಕ್ಷಾಮಕ್ಕೆ ಗೊತ್ತಾದವರು ಕ್ಷಾಮಕ್ಕೆ, ಸೆರೆಗೆ ಗೊತ್ತಾದವರು ಸೆರೆಗೆ ಗುರಿಯಾಗಿ ಹೋಗಲಿ; ಇದೇ ಯೆಹೋವನ ನುಡಿ ಎಂದು ಹೇಳು.


ಕೊಳ್ಳೆಗಾರರು ಅರಣ್ಯದ ಎಲ್ಲಾ ಬೋಳುಗುಡ್ಡಗಳಲ್ಲಿಯೂ ಕಂಡುಬಂದಿದ್ದಾರೆ; ಯೆಹೋವನ ಖಡ್ಗವು ದೇಶದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ನುಂಗಿಬಿಡುತ್ತಿದೆ; ಯಾರಿಗೂ ನೆಮ್ಮದಿಯಿಲ್ಲ.


ಯೆಹೋವನು ಅಗ್ನಿಯಿಂದಲೂ ತನ್ನ ಖಡ್ಗದಿಂದಲೂ ಎಲ್ಲಾ ನರಜನ್ಮದವರಿಗೂ ನ್ಯಾಯತೀರಿಸುವನು; ಆಗ ಆತನಿಂದ ಹತರಾಗುವವರು ಬಹುಜನ.


ಆ ದಿನದಲ್ಲಿ ಯೆಹೋವನು ಕಠಿನವೂ ಮಹತ್ತೂ ಬಲವೂ ಆಗಿರುವ ತನ್ನ ಖಡ್ಗದಿಂದ ವೇಗವಾಗಿ ಓಡುವ ಸರ್ಪ, ಡೊಂಕಾಗಿ ಹರಿಯುವ ಸರ್ಪ, ಈ ಎರಡು ಹೆಬ್ಬಾವುಗಳನ್ನು ಹೊಡೆದು ಮಹಾ ನದಿಯಲ್ಲಿನ ಘಟಸರ್ಪವನ್ನೂ ಕೊಂದುಹಾಕುವನು.


ಅವನು ಬಾಣವನ್ನು ಕೀಳಲು ಅದು ಬೆನ್ನಿನಿಂದ ಬರುವದು, ಥಳಥಳಿಸುತ್ತಾ ಅವನ ಪಿತ್ತಕೋಶದೊಳಗಿಂದ ಹೊರಡುತ್ತಿರುವದು, ಭಯಭ್ರಾಂತಿಗಳು ಅವನನ್ನು ಮುತ್ತಿಕೊಳ್ಳುವವು.


ರಥಾಶ್ವಗಳನ್ನು ಕಟ್ಟಿರಿ, ವಾಹನಾಶ್ವಗಳನ್ನು ಹತ್ತಿರಿ, ಶಿರಸ್ತ್ರಾಣಗಳನ್ನು ಹಾಕಿಕೊಂಡು ಯುದ್ಧಕ್ಕೆ ನಿಲ್ಲಿರಿ, ಬರ್ಜಿಗಳನ್ನು ಬೆಳಗಿರಿ, ಕವಚ ತೊಟ್ಟುಕೊಳ್ಳಿರಿ.


ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - ನರಪುತ್ರನೇ,


ಎಲ್ಲಾ ಒಂದೇ ಸರಿ, ಆದಕಾರಣ ನಾನು - ನಿರ್ದೋಷಿಯನ್ನೂ ದೋಷಿಯನ್ನೂ ಆತನು ನಾಶಮಾಡುತ್ತಾನೆ ಎಂದು ಹೇಳುತ್ತೇನೆ.


ಖಡ್ಗವು ವಿಶ್ರಾಂತಿಗೊಳ್ಳುವದು ಹೇಗೆ? ಅಷ್ಕೆಲೋನಿನ ಮತ್ತು ಕರಾವಳಿಯ ವಿಷಯವಾಗಿ ಯೆಹೋವನು ಅದಕ್ಕೆ ಅಪ್ಪಣೆಕೊಟ್ಟನಲ್ಲಾ; ಅಲ್ಲಿಗೇ ಅದನ್ನು ನೇವಿುಸಿದ್ದಾನೆ.


ನಾನು ನಿನ್ನಲ್ಲಿನ ಶಿಷ್ಟರನ್ನೂ ದುಷ್ಟರನ್ನೂ ಸಂಹರಿಸಬೇಕೆಂದಿರುವದರಿಂದ ನನ್ನ ಖಡ್ಗವು ಒರೆಯಿಂದ ಹೊರಟು ತೆಂಕಲಿಂದ ಬಡಗಲವರೆಗೆ ಸಕಲನರಪ್ರಾಣಿಗಳ ಮೇಲೆ ಬೀಳುವದು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು