ಯೆಹೆಜ್ಕೇಲನು 21:21 - ಕನ್ನಡ ಸತ್ಯವೇದವು J.V. (BSI)21 ಮಾರ್ಗವು ಒಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಮೊದಲಲ್ಲಿ ಬಾಬೆಲಿನ ಅರಸನು ಶಕುನನೋಡುವದಕ್ಕೆ ನಿಂತಿದ್ದಾನೆ; ಬಾಣಗಳನ್ನು ಕಲಕಿ ವಿಗ್ರಹಗಳನ್ನು ಪ್ರಶ್ನೆಕೇಳಿ ಕಾಳಿಜವನ್ನು ಪರೀಕ್ಷಿಸಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 “ಮಾರ್ಗವು ಕವಲೊಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಮೊದಲಲ್ಲಿ ಬಾಬೆಲಿನ ಅರಸನು ಶಕುನ ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಕಲಕಿ, ವಿಗ್ರಹಗಳನ್ನು ಪ್ರಶ್ನೆಕೇಳಿ, ಕಾಳಿಜವನ್ನು ಪರೀಕ್ಷಿಸಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಮಾರ್ಗ ಕವಲೊಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಪ್ರಾರಂಭದಲ್ಲಿ ಬಾಬಿಲೋನಿನ ಅರಸ ಶಕುನ ನೋಡಲು ನಿಂತಿರುವನು. ಬಾಣಗಳನ್ನು ಕಲಕಿ, ವಿಗ್ರಹಗಳನ್ನು ಪ್ರಶ್ನೆ ಕೇಳಿ, ಹಸ್ತರೇಖೆಯನ್ನು ಪರೀಕ್ಷಿಸಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಇದರ ಅರ್ಥವೇನೆಂದರೆ, ರಸ್ತೆಯು ಶಾಖೆಗಳಾಗಿ ಒಡೆಯುವ ಸ್ಥಳದಲ್ಲಿ ಬಾಬಿಲೋನಿನ ರಾಜನು ಶಕುನವನ್ನು ಕೇಳಲು ನಿಂತಿದ್ದಾನೆ. ಅವನು ಕೆಲವು ಬಾಣಗಳನ್ನು ಅಲುಗಾಡಿಸಿದ್ದಾನೆ. ಅವನು ಕೆಲವು ಬಾಣಗಳನ್ನು ಚದರಿಸಿ, ತನ್ನ ವಂಶದ ವಿಗ್ರಹಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು, ಮತ್ತು ತಾನು ಕೊಂದ ಪ್ರಾಣಿಯ ಕಾಳಿಜವನ್ನು ನೋಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಬಾಬಿಲೋನಿನ ಅರಸನು, ಮಾರ್ಗವು ಒಡೆಯುವ ಸ್ಥಳದಲ್ಲಿ ಶಕುನವನ್ನು ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿದನು; ಮೂರ್ತಿಗಳ ಹತ್ತಿರ ವಿಚಾರಿಸಿದನು; ಅವನು ಹತ್ಯೆ ಮಾಡಿದ ಪ್ರಾಣಿಯ ಯಕೃತ್ತನ್ನು ಪರೀಕ್ಷಿಸುತ್ತಾರೆ. ಅಧ್ಯಾಯವನ್ನು ನೋಡಿ |