Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 20:38 - ಕನ್ನಡ ಸತ್ಯವೇದವು J.V. (BSI)

38 ದ್ರೋಹಿಗಳಾದವರನ್ನು ನಿಮ್ಮೊಳಗಿಂದ ಗುಡಿಸಿಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಪಾರುಮಾಡಿದರೂ ಅವರು ಇಸ್ರಾಯೇಲ್ ದೇಶಕ್ಕೆ ಸೇರುವದೇ ಇಲ್ಲ ; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ನನಗೆ ತಿರುಗಿ ಬಿದ್ದು ದ್ರೋಹಿಗಳಾದವರನ್ನು ನಿಮ್ಮೊಳಗಿಂದ ಕಳುಹಿಸಿ ಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಪಾರು ಮಾಡಿದರೂ, ಅವರು ಇಸ್ರಾಯೇಲ್ ದೇಶಕ್ಕೆ ಸೇರುವುದೇ ಇಲ್ಲ; ನಾನೇ ಯೆಹೋವನು” ಎಂದು ನಿಮಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ನನಗೆ ವಿಮುಖರಾದ ದ್ರೋಹಿಗಳನ್ನು ನಿಮ್ಮಿಂದ ದೂರಕ್ಕೆ ಗುಡಿಸಿಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಬಿಡುಗಡೆ ಮಾಡಿದರೂ ಅವರು ಇಸ್ರಯೇಲ್ ನಾಡಿಗೆ ಸೇರುವುದೇ ಇಲ್ಲ; ಆಗ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ನನಗೆ ವಿರೋಧವಾಗಿ ಎದ್ದು ಪಾಪಮಾಡಿದ ಜನರನ್ನು ಅವರ ಸ್ವದೇಶದಿಂದ ತೆಗೆದುಬಿಡುವೆನು. ಅವರು ಇನ್ನೆಂದಿಗೂ ಇಸ್ರೇಲ್ ದೇಶಕ್ಕೆ ಹಿಂತಿರುಗಿ ಬರುವುದೇ ಇಲ್ಲ. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧ ಮಾಡಿದವರನ್ನೂ ನಿಮ್ಮೊಂದಿಗೆ ಶುದ್ಧಮಾಡುತ್ತೇನೆ. ಅವರು ಪ್ರವಾಸಿಗಳಾಗಿದ್ದ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಆದರೆ ಅವರು ಇಸ್ರಾಯೇಲ್ ದೇಶದೊಳಗೆ ಹೋಗದ ಹಾಗೆ ಮಾಡಿ, ನಾನೇ ಯೆಹೋವ ದೇವರೆಂಬುದನ್ನು ಅವರಿಗೆ ತಿಳಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 20:38
26 ತಿಳಿವುಗಳ ಹೋಲಿಕೆ  

ವಿುಥ್ಯಾದರ್ಶನ ಹೊಂದಿ ಸುಳ್ಳು ಕಣಿ ಹೇಳುವ ಪ್ರವಾದಿಗಳ ಮೇಲೆ ನಾನು ಕೈ ಮಾಡುವೆನು; ಅವರು ನನ್ನ ಜನರ ಹಿರೀ ಸಭೆಯಲ್ಲಿ ಸೇರಕೂಡದು, ಇಸ್ರಾಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರುಗಳು ಲಿಖಿತವಾಗವು, ಅವರು ಇಸ್ರಾಯೇಲ್ ದೇಶದಲ್ಲಿ ಪ್ರವೇಶಿಸಲೂಬಾರದು; ನಾನೇ ಕರ್ತನಾದ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಆದದರಿಂದ ಇವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ಕೋಪಗೊಂಡು ಪ್ರಮಾಣಮಾಡಿದೆನು.


ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.


ಹತರಾದವರು ನಿಮ್ಮ ಮಧ್ಯದಲ್ಲಿ ಬೀಳುವರು; ಆಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದಜನಶೇಷದವರು ಸ್ವದೇಶಕ್ಕೆ ಹಿಂದಿರುಗಬೇಕೆಂದು ಎಷ್ಟು ಆಶಿಸಿದರೂ ಅವರಲ್ಲಿ ಯಾರೂ ಉಳಿದು ಅಲ್ಲಿಂದ ತಪ್ಪಿಸಿಕೊಂಡು ಯೆಹೂದಕ್ಕೆ ಹಿಂದಿರುಗುವದಿಲ್ಲ; ಓಡಿಬರುವ ಕೊಂಚ ಜನವೇ ಹೊರತು ಯಾವನೂ ಹಿಂದಿರುಗನು.


ನಿಮ್ಮ ಬೊಂಬೆಗಳಿಂದಾದ ನಿಮ್ಮ ಪಾಪವನ್ನು ನೀವು ಅನುಭವಿಸಿ ನಾನೇ ಕರ್ತನಾದ ಯೆಹೋವನು ಎಂದು ತಿಳಿದುಕೊಳ್ಳುವಿರಿ.


ಅವರ ಮೇಲೆ ಕೋಪದೃಷ್ಟಿಯನ್ನಿಡುವೆನು; ಅವರು ಬೆಂಕಿಯೊಳಗಿಂದ ತಪ್ಪಿಸಿಕೊಂಡರೂ ಬೆಂಕಿಯು ಅವರನ್ನು ನುಂಗಿಬಿಡುವದು; ನಾನು ಅವರ ಮೇಲೆ ಕೋಪದೃಷ್ಟಿಯನ್ನಿಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಆದರೆ ಯಾರ ಚಿತ್ತವು ತಮ್ಮ ಅಸಹ್ಯವಸ್ತುಗಳನ್ನೂ ಹೇಯವಿಗ್ರಹಗಳನ್ನೂ ಅನುಸರಿಸುತ್ತದೋ ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು. ಇದು ಕರ್ತನಾದ ಯೆಹೋವನ ನುಡಿ.


ಯೆಹೋವನು ನ್ಯಾಯತೀರಿಸುವವನಾಗಿ ತನ್ನನ್ನು ಪ್ರಕಟಿಸಿಕೊಂಡಿದ್ದಾನೆ; ದುಷ್ಟರು ತಾವೇ ಕಲ್ಪಿಸಿದ ಕುಯುಕ್ತಿಯಲ್ಲಿ ಸಿಕ್ಕಿಕೊಂಡಿದ್ದಾರಲ್ಲಾ. ಹಿಗ್ಗಾಯೋನ್ ಸೆಲಾ.


ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ ನಾನು ಮುಂದಣ ಕೆಲವು ಸಂಗತಿಗಳನ್ನು ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವವಂದರೆ - ಕರ್ತನು ತನ್ನ ಪ್ರಜೆಯನ್ನು ಐಗುಪ್ತ ದೇಶದೊಳಗಿಂದ ಬಿಡಿಸಿದ ತರುವಾಯ ಅವರೊಳಗೆ ನಂಬದೆಹೋದವರನ್ನು ನಾಶಮಾಡಿದನು.


ಹೀಗಿರಲಾಗಿ ಆ ವಿಶ್ರಾಂತಿಯಲ್ಲಿ ಕೆಲವರು ಸೇರಬೇಕೆಂಬುವ ಮಾತು ಇನ್ನೂ ಇರುವದರಿಂದಲೂ ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದದ್ದರಿಂದಲೂ


ದೇವರ ಕೆಲಸಗಳು ಲೋಕಾದಿಯಿಂದ ಮುಗಿದು ಹೋಗಿ [ಆತನ ವಿಶ್ರಾಂತಿಯು ಸಿದ್ಧವಾಗಿದ್ದರೂ] ಆತನು - ನನ್ನ ವಿಶ್ರಾಂತಿಯಲ್ಲಿ ಇವರು ಸೇರುವದೇ ಇಲ್ಲವೆಂದು ಕೋಪಗೊಂಡು ಪ್ರಮಾಣಮಾಡಿದೆನು ಎಂಬದಾಗಿ ಹೇಳಿದೆನಷ್ಟೆ. ನಂಬಿರುವ ನಾವಾದರೋ ಆ ವಿಶ್ರಾಂತಿಯಲ್ಲಿ ಸೇರುತ್ತಲೇ ಇದ್ದೇವೆ.


ಆದರೂ ಅವರೊಳಗೆ ಬಹುಮಂದಿಯ ವಿಷಯದಲ್ಲಿ ದೇವರು ಸಂತೋಷಿಸಲಿಲ್ಲ. ಅವರು ಅಡವಿಯಲ್ಲಿ ಸಂಹರಿಸಲ್ಪಟ್ಟರೆಂದು ಬರೆದದೆಯಷ್ಟೆ.


ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಂಡು ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು ಎಂದು ಹೇಳಿದನು.


ಆಮೇಲೆ ಸಕಲದೇಶಶಿರೋಮಣಿಯಾದ ಯಾವ ದೇಶವನ್ನು ಅವರಿಗೆ ವಾಗ್ದಾನ ಮಾಡಿದೆನೋ ಹಾಲೂ ಜೇನೂ ಹರಿಯುವ ಆ ದೇಶಕ್ಕೆ ನಿಮ್ಮನ್ನು ಸೇರಿಸೆನೆಂದು ಅರಣ್ಯದಲ್ಲಿ ಅವರಿಗೆ ಪ್ರಮಾಣ ಮಾಡಿದೆನು;


ಏಕಂದರೆ ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತವಾಗಿ ಅವರು ನನ್ನ ಆಜ್ಞಾವಿಧಿಗಳನ್ನು ಅನುಸರಿಸದೆ ನಿರಾಕರಿಸಿ ನಾನು ನೇವಿುಸಿದ ಸಬ್ಬತ್ ದಿನಗಳನ್ನು ಹೊಲೆ ಮಾಡಿದವರಾಗಿದ್ದರು.


ಹೌದು, ನಾನು ಶಿಕ್ಷಾಹಸ್ತವನ್ನೆತ್ತಿ ಭುಜಪರಾಕ್ರಮವನ್ನು ತೋರಿಸಿ ರೋಷಾಗ್ನಿಯನ್ನು ಸುರಿಸುತ್ತಾ ನಿಮ್ಮನ್ನು ಜನಾಂಗಗಳೊಳಗಿಂದ ಪಾರುಮಾಡಿ ನೀವು ಚದರಿಹೋಗಿರುವ


ಇಗೋ, ನಾನು ನೆಹೆಲಾಮ್ಯನಾದ ಶೆಮಾಯನನ್ನೂ ಅವನ ಸಂತತಿಯವರನ್ನೂ ದಂಡಿಸುವೆನು; ಅವನು ಯೆಹೋವನಾದ ನನಗೆ ವಿರುದ್ಧವಾಗಿ ದ್ರೋಹದ ಮಾತನ್ನು ಆಡಿದ್ದರಿಂದ ಈ ಜನರ ಮಧ್ಯದಲ್ಲಿ ವಾಸಿಸಲು ಅವನಿಗೆ ಯಾವ ಸಂತಾನವೂ ಇರದು; ನಾನು ನನ್ನ ಜನರಿಗೆ ಉಂಟುಮಾಡಬೇಕೆಂದಿರುವ ಮೇಲನ್ನು ಅವನು ನೋಡದೆ ಹೋಗುವನು; ಇದು ಯೆಹೋವನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು