Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 17:14 - ಕನ್ನಡ ಸತ್ಯವೇದವು J.V. (BSI)

14 ಇವನ ರಾಜ್ಯವು ಮೇಲಕ್ಕೆ ಏಳಲಾರದೆ ಗುಜ್ಜಾಗಿದ್ದು ಒಡಂಬಡಿಕೆಯನ್ನು ಕೈಕೊಳ್ಳುವದರಿಂದಲೇ ನಿಲ್ಲಲೆಂದು ಆ ದೇಶದ ಬಲಿಷ್ಟರನ್ನು ಗಡೀಪಾರು ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಇವನ ರಾಜ್ಯವು ಮೇಲಕ್ಕೆ ಏಳಲಾರದೆ ಇದ್ದರೂ, ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಅದು ನಿಲ್ಲುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅವನ ರಾಜ್ಯ ಏಳಿಗೆಗೆ ಬಾರದೆ ಗುಜ್ಜಾಗಿದ್ದು ಒಪ್ಪಂದಕ್ಕೆ ಬದ್ಧವಾಗಿರುವುದರಿಂದಲೇ ಅದು ನಿಲ್ಲದೆಂದು ಆ ದೇಶದ ಬಲಿಷ್ಠರನ್ನು ಗಡೀಪಾರುಮಾಡಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೆಹೂದ ರಾಜ್ಯವು ದೀನತೆಯಿಂದಿದ್ದು ದಂಗೆ ಏಳದೆ ತನ್ನ ಒಪ್ಪಂದಕ್ಕೆ ಶಾಶ್ವತವಾಗಿ ಬದ್ಧವಾಗಿರಬೇಕೆಂಬುದು ನೆಬೂಕದ್ನೆಚ್ಚರನ ಬಯಕೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆ ರಾಜ್ಯವು ಮೇಲೇಳದ ಹಾಗಿದ್ದರೂ, ಅವನು ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಅದು ನಿಲ್ಲುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 17:14
11 ತಿಳಿವುಗಳ ಹೋಲಿಕೆ  

ಅವರ ಜನ್ಮಭೂವಿುಯಾದ ಪತ್ರೋಸ್ ದೇಶಕ್ಕೆ ಪುನಃ ಬರಮಾಡುವೆನು; ಅಲ್ಲೇ ಅವರು ನಿಕೃಷ್ಟ ರಾಜ್ಯದವರಾಗಿರುವರು.


ಅದು ಗುಜ್ಜಾಗಿ ಬೆಳೆದು ದ್ರಾಕ್ಷಾಲತೆಯಾಗಿ ತುಂಬಾ ಹರಡಿಕೊಂಡು ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ ಅದರ ಕೆಳಗೆ ತನ್ನ ಬೇರುಗಳನ್ನು ಬಿಟ್ಟಿತು; ಅದು ಲತೆಯಾಗಿ ರೆಂಬೆಗಳನ್ನು ಹರಡಿಸಿ ಚಿಗುರುಗಳನ್ನು ಹೊರಡಿಸಿತು.


ಕ್ಷಾಮಕಾಲದ ಜ್ವರದಿಂದ ನಮ್ಮ ಚರ್ಮವು ಒಲೆಯಂತೆ ಸುಡುತ್ತದೆ.


ಯೆರೆಮೀಯನು ಚಿದ್ಕೀಯನಿಗೆ - ಸೇನಾಧೀಶ್ವರ ಸ್ವಾವಿುಯೂ ಇಸ್ರಾಯೇಲ್ಯರ ದೇವರೂ ಆದ ಯೆಹೋವನು ಇಂತೆನ್ನುತ್ತಾನೆ - ನೀನು ಬಾಬೆಲಿನ ಅರಸನ ಸರದಾರರನ್ನು ಮರೆಹೊಕ್ಕರೆ ನಿನ್ನ ಪ್ರಾಣವುಳಿಯುವದು, ಈ ಪಟ್ಟಣವೂ ಬೆಂಕಿಯಿಂದ ಸುಡದು, ನೀನೂ ನಿನ್ನ ಮನೆತನದವರೂ ಬದುಕುವಿರಿ;


ನಿನ್ನ ಗೋತ್ರದವರೂ ಸಂತಾನದವರೂ ನಿರಂತರವೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬಹುದು ಎಂದು ಆಜ್ಞಾಪಿಸಿದ ಇಸ್ರಾಯೇಲ್‍ದೇವರಾದ ಯೆಹೋವನೆಂಬ ನಾನು ಈಗ ತಿಳಿಸುವದೇನಂದರೆ - ಅದು ನನಗೆ ದೂರವಾಗಿರಲಿ; ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸುವವರು ತಿರಸ್ಕಾರಹೊಂದುವರು.


ಬಡತನ ಸಿರಿತನಗಳನ್ನು ಕೊಡುವವನೂ ತಗ್ಗಿಸುವವನೂ ಹೆಚ್ಚಿಸುವವನೂ ಯೆಹೋವನೇ.


ನಿಮ್ಮ ಮಧ್ಯದಲ್ಲಿರುವ ಅನ್ಯರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಗೆ ಬರುವರು; ನೀವೋ ಕಡಮೆಯಾಗುತ್ತಾ ಹೀನಸ್ಥಿತಿಗೆ ಬರುವಿರಿ.


ಆ ರಾಜ್ಯವು ಸಮಸ್ತರಾಜ್ಯಗಳಲ್ಲಿ ಕನಿಷ್ಠವೆನಿಸಿಕೊಳ್ಳುವದು; ವಿುಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ತಲೆಯೆತ್ತದು; ಅದು ಜನಾಂಗಗಳ ಮೇಲೆ ಇನ್ನು ದೊರೆತನ ಮಾಡಲಾರದಂತೆ ನಾನು ಅದನ್ನು ಕ್ಷೀಣ ಗತಿಗೆ ತರುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು