Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 16:26 - ಕನ್ನಡ ಸತ್ಯವೇದವು J.V. (BSI)

26 ನಿನ್ನ ನೆರೆಯವರೂ ಅತಿಕಾವಿುಗಳೂ ಆದ ಐಗುಪ್ತ್ಯರೊಂದಿಗೆ ಸಹ ನೀನು ಕಲೆತು ಹೆಚ್ಚಾಗಿ ಹಾದರಮಾಡಿ ನನ್ನನ್ನು ರೇಗಿಸಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ನಿನ್ನ ನೆರೆಯವರೂ ಅತಿಕಾಮಿಗಳೂ ಆದ ಐಗುಪ್ತ್ಯರೊಂದಿಗೆ ಸಹ ನೀನು ಬೆರೆತು ಹೆಚ್ಚಾಗಿ ವ್ಯಭಿಚಾರಮಾಡಿ ನನ್ನನ್ನು ರೇಗಿಸಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ನಿನ್ನ ನೆರೆಯವರೂ ಅತಿಕಾಮಿಗಳೂ ಆದ ಈಜಿಪ್ಟರೊಂದಿಗೆ ಸಹ ನೀನು ಕಲೆತು ಹೆಚ್ಚಾಗಿ ಹಾದರಮಾಡಿ ನನ್ನನ್ನು ಕೆರಳಿಸಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಬಳಿಕ ನಿನ್ನ ನೆರೆಯವರೂ ಅತೀ ಕಾಮುಕರೂ ಆಗಿದ್ದ ಈಜಿಪ್ಟಿನವರ ಬಳಿಗೆ ನೀನು ಹೋದೆ. ನನ್ನನ್ನು ಕೋಪಗೊಳಿಸುವುದಕ್ಕಾಗಿ ನೀನು ಅವರೊಂದಿಗೆ ಹಲವಾರು ಸಲ ಲೈಂಗಿಕ ಸಂಪರ್ಕ ಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಇದಲ್ಲದೆ ಅತಿಕಾಮಿಗಳಾದ ನಿನ್ನ ನೆರೆಯವರಾದ ಈಜಿಪ್ಟಿನವರ ಸಂಗಡ ವ್ಯಭಿಚಾರ ಮಾಡಿದೆ; ನನ್ನನ್ನು ರೇಗಿಸುವ ಹಾಗೆ ವ್ಯಭಿಚಾರವನ್ನು ಹೆಚ್ಚಿಸಿದೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 16:26
15 ತಿಳಿವುಗಳ ಹೋಲಿಕೆ  

ಅವಳು ಐಗುಪ್ತದಲ್ಲಿದ್ದಂದಿಂನಿಂದಲೂ ತನ್ನ ಸೂಳೆತನವನ್ನು ಬಿಡಲಿಲ್ಲ; ಅವಳ ಬಾಲ್ಯದಲ್ಲಿಯೇ ಅಲ್ಲಿನವರು ಅವಳೊಂದಿಗೆ ಮಲಗಿ ಅವಳ ಎಳೆಯ ತೊಟ್ಟುಗಳನ್ನು ನಸುಕಿ ಅವಳ ಸಂಗಡ ಸೂಳೆಗಾರಿಕೆಯನ್ನು ಹೆಚ್ಚೆಚ್ಚಾಗಿ ಮಾಡಿದರು.


ಅವರು ಐಗುಪ್ತದಲ್ಲಿ ಸೂಳೆತನ ಮಾಡುತ್ತಿದ್ದರು, ಬಾಲ್ಯದಲ್ಲೇ ಸೂಳೆಯರಾಗಿ ನಡೆಯುತ್ತಿದ್ದರು; ಅಲ್ಲಿ ಅವರ ಸ್ತನಗಳು ಹಿಸಕಲ್ಪಟ್ಟವು, ಎಳೆಯ ತೊಟ್ಟುಗಳು ನಸುಕಲ್ಪಟ್ಟವು.


ಆಗ ಆತನು ನನಗೆ - ನರಪುತ್ರನೇ, ನೋಡಿದಿಯಾ? ಯೆಹೂದವಂಶದವರು ತಾವು ಇಲ್ಲಿ ನಡಿಸುವ ಅಸಹ್ಯಕಾರ್ಯಗಳು ಅಲ್ಪವೆಂದು ಭಾವಿಸಿಕಂಡರೇನೋ? ದೇಶವನ್ನು ಹಿಂಸೆಯಿಂದ ತುಂಬಿಸಿಬಿಟ್ಟದ್ದಲ್ಲದೆ ನನ್ನನ್ನು ಕೆಣಕಬೇಕೆಂದೇ ಮತ್ತೆ ಯತ್ನಿಸುತ್ತಿದ್ದಾರೆ; ನೋಡು, ಪತ್ರೆಯನ್ನು ಮೂಗಿಗೆ ಒತ್ತಿಕೊಳ್ಳುತ್ತಾರೆ.


ನನ್ನನ್ನು ಯೆಹೋವನ ಆಲಯದ ಬಡಗಣ ಬಾಗಿಲ ಮುಂದಕ್ಕೆ ಕರತಂದನು; ಇಗೋ, ಅಲ್ಲಿ ಸ್ತ್ರೀಯರು ತಮ್ಮೂಜ್ ದೇವತೆಗೋಸ್ಕರ ಅಳುತ್ತಾ ಕೂತಿದ್ದರು.


ಅಕಟಾ, ಎಲ್ಲಾ ಜಾತಿಯ ಕ್ರಿವಿುಕೀಟಗಳೂ ಅಸಹ್ಯಮೃಗಗಳೂ ಇಸ್ರಾಯೇಲ್‍ವಂಶದವರು ಪೂಜಿಸುವ ಸಕಲಮೂರ್ತಿಗಳೂ ಸುತ್ತಲೂ ಗೋಡೆಯಲ್ಲಿ ಚಿತ್ರಿಸಲ್ಪಟ್ಟಿದ್ದವು.


ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.


ಹೀಗಿರುವದರಿಂದ ನೀವು ಯೆಹೋವನಲ್ಲಿ ಭಯ ಭಕ್ತಿಯುಳ್ಳವರಾಗಿರ್ರಿ; ಆತನನ್ನು ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ ಸೇವಿಸಿರಿ. ನಿಮ್ಮ ಪೂರ್ವಿಕರು [ಯೂಫ್ರೇಟೀಸ್] ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಪೂಜಿಸುತ್ತಿದ್ದ ದೇವತೆಗಳನ್ನು ನಿಮ್ಮಲ್ಲಿಂದ ತೆಗೆದುಹಾಕಿರಿ; ಯೆಹೋವನನ್ನೇ ಸೇವಿಸಿರಿ.


ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು ಬಸವನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯಿಸಲಾಗಿ ಅವರು - ಇಸ್ರಾಯೇಲ್ಯರೇ, ನೋಡಿರಿ; ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರಕೊಂಡುಬಂದ ದೇವರು ಎಂದು ಹೇಳಿದರು.


ಯೆಹೋವನು ಹೀಗನ್ನುತ್ತಾನೆ - ಗಂಡನು ತ್ಯಜಿಸಿದವಳು ಅವನಿಂದ ಹೊರಟು ಮತ್ತೊಬ್ಬನವಳಾದ ಮೇಲೆ ಅವಳನ್ನು ಆ ಗಂಡನು ತಿರಿಗಿ ಸೇರಿಸಿಕೊಂಡಾನೇ? ಸೇರಿಸಿಕೊಂಡರೆ ಆ ದೇಶವು ಕೇವಲ ಅಪವಿತ್ರವಾಗಿ ಹೋಗುವದಲ್ಲವೆ! ಹೀಗಿರಲು ಬಹುಮಂದಿ ವಿುಂಡರೊಡನೆ ಸೂಳೆತನ ಮಾಡಿದ ನೀನು ನನ್ನ ಬಳಿಗೆ ತಿರಿಗಿ ಬರುತ್ತೀಯಾ?


ಆ ಸ್ರಾವವು ಹರಿಯುತ್ತಿದ್ದರೂ ನಿಂತುಹೋಗಿದ್ದರೂ ಆ ದೇಹಸ್ಥಿತಿಯಿಂದ ಅವನು ಅಶುದ್ಧನು.


ಬಹಳವಾಗಿ ಆಲೋಚಿಸಿ ಕಡೆಯಲ್ಲಿ ಬಂಗಾರದ ಎರಡು ಬಸವ ಮೂರ್ತಿಗಳನ್ನು ಮಾಡಿಸಿ ಇಸ್ರಾಯೇಲ್ಯರಿಗೆ - ನೀವು ಜಾತ್ರೆಗಾಗಿ ಯೆರೂಸಲೇವಿುಗೆ ಹೋದದ್ದು ಸಾಕಾಯಿತು; ಇಗೋ, ನಿಮ್ಮನ್ನು ಐಗುಪ್ತದಿಂದ ಕರತಂದ ದೇವರುಗಳು ಇಲ್ಲಿರುತ್ತವೆ ಎಂದು ಹೇಳಿ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು