Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 14:4 - ಕನ್ನಡ ಸತ್ಯವೇದವು J.V. (BSI)

4 ಆದಕಾರಣ ನೀನು ಅವರನ್ನು ಸಂಬೋಧಿಸಿ ಹೀಗೆ ಹೇಳು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲ್ ವಂಶದವರಲ್ಲಿ ಯಾವ ಯಾವನು ತನ್ನ ಬೊಂಬೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆ ಇಟ್ಟುಕೊಂಡು ಪ್ರವಾದಿಯನ್ನು ಪ್ರಶ್ನೆಕೇಳುವದಕ್ಕೆ ಬರುವನೋ ಅವನ ಪಾತಕಕ್ಕೆ ಅಂದರೆ ಅವನ ಲೆಕ್ಕವಿಲ್ಲದ ಬೊಂಬೆಗಳಿಗೆ ತಕ್ಕ ಹಾಗೆ ಯೆಹೋವನಾದ ನಾನು ಅವನಿಗೆ ಉತ್ತರವನ್ನು ಕೊಡುವೆನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆದಕಾರಣ ನೀನು ಅವರನ್ನು ಸಂಬೋಧಿಸಿ ಹೀಗೆ ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರಲ್ಲಿ ಯಾರು ತನ್ನ ವಿಗ್ರಹಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ, ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆಯೇ ಇಟ್ಟುಕೊಂಡು, ಪ್ರವಾದಿಯನ್ನು ಪ್ರಶ್ನೆ ಕೇಳುವುದಕ್ಕೆ ಬರುವ ಅವನಿಗೆ ಯೆಹೋವನಾದ ನಾನು ಅವನ ಲೆಕ್ಕವಿಲ್ಲದ ವಿಗ್ರಹಗಳಿಗೆ ತಕ್ಕ ಹಾಗೆ ಉತ್ತರವನ್ನು ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 “ಆದಕಾರಣ ನೀನು ಅವರನ್ನು ಸಂಬೋಧಿಸಿ ಹೀಗೆ ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಸ್ರಯೇಲ್ ವಂಶದವರಲ್ಲಿ ಯಾರು ಯಾರು ವಿಗ್ರಹಗಳನ್ನು ತಮ್ಮ ಹೃದಯದಲ್ಲಿ ನೆಲೆಗೊಳಿಸಿಕೊಂಡಿದ್ದಾರೋ, ಪಾಪಕಾರಿಯಾದ ಆ ವಿಘ್ನವನ್ನು ತಮ್ಮ ಮುಂದೆಯೇ ಇಟ್ಟುಕೊಂಡಿದ್ದಾರೋ ಅಂಥವರು ಪ್ರವಾದಿಯನ್ನು ಪ್ರಶ್ನೆ ಕೇಳುವುದಕ್ಕೆ ಬಂದರೆ ಅವರು ಪಾತಕಕ್ಕೆ ಅಂದರೆ, ಅವರ ಲೆಕ್ಕವಿಲ್ಲದ ವಿಗ್ರಹಗಳಿಗೆ ತಕ್ಕ ಹಾಗೆ ಸರ್ವೇಶ್ವರನಾದ ನಾನೇ ಅವರಿಗೆ ಉತ್ತರಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದರೆ ನಾನು ಅವರಿಗೆ ಉತ್ತರಕೊಡುವೆನು. ಅವರಿಗೆ ನೀನು ಹೀಗೆ ಹೇಳಬೇಕು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ಇಸ್ರೇಲರಲ್ಲಿ ಯಾರಾದರೂ ಪ್ರವಾದಿಯ ಬಳಿಗೆ ಬಂದು ನನ್ನ ಸಲಹೆಯನ್ನು ಕೇಳಿದರೆ, ನಾನೇ ಆ ಮನುಷ್ಯನಿಗೆ ಉತ್ತರ ಕೊಡುವೆನು. ಅವನ ಬಳಿಯಲ್ಲಿ ಹೊಲಸು ವಿಗ್ರಹಗಳಿದ್ದರೂ, ಅವನನ್ನು ಪಾಪದಲ್ಲಿ ಬೀಳುವಂತೆ ಮಾಡಿದ ವಸ್ತುಗಳನ್ನು ಅವನು ಇಟ್ಟುಕೊಂಡಿದ್ದರೂ, ಅವನು ಆ ವಿಗ್ರಹಗಳನ್ನು ಇನ್ನೂ ಪೂಜೆ ಮಾಡುತ್ತಿದ್ದರೂ ನಾನು ಅವನೊಂದಿಗೆ ಮಾತನಾಡುವೆನು. ಅವನ ವಿಗ್ರಹಾರಾಧನೆಗೆ ತಕ್ಕ ಉತ್ತರವನ್ನೇ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆದ್ದರಿಂದ ನೀನು ಅವರ ಸಂಗಡ ಮಾತನಾಡಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರ ಪ್ರತಿಯೊಬ್ಬನೂ ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲಿ ನೆಲೆಗೊಳಿಸಿ, ತಮ್ಮ ಅಕ್ರಮದ ವಿಘ್ನಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬರುವ ಅವನಿಗೆ ಯೆಹೋವ ದೇವರಾದ ನಾನು ಅವರ ವಿಗ್ರಹಗಳ ಸಮೂಹಕ್ಕೆ ತಕ್ಕ ಹಾಗೆ ಉತ್ತರಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 14:4
12 ತಿಳಿವುಗಳ ಹೋಲಿಕೆ  

ಏಕಂದರೆ ಇಸ್ರಾಯೇಲ್ ವಂಶದವರಲ್ಲಾಗಲಿ ಇಸ್ರಾಯೇಲಿನೊಳಗೆ ವಾಸವಾಗಿರುವ ವಿದೇಶಿಗಳಲ್ಲಾಗಲಿ ಯಾವನು ನನ್ನಿಂದ ಅಗಲಿ ತನ್ನ ಬೊಂಬೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬಂದು ಅವನ ಮೂಲಕ ದೈವೋತ್ತರವನ್ನು ಕೇಳಿಕೊಳ್ಳುವನೋ ಅವನಿಗೆ ಯೆಹೋವನಾದ ನಾನೇ ಉತ್ತರಕೊಟ್ಟು


ಅದಕ್ಕೆ ತಕ್ಕಂತೆ ನಾನು ಇವರಿಗೋಸ್ಕರ ಕುತಂತ್ರಗಳನ್ನು ಆರಿಸಿಕೊಂಡು ಇವರು ಅಂಜುತ್ತಿದ್ದ ವಿಪತ್ತುಗಳನ್ನು ಬರಮಾಡುವೆನು; ಏಕೆಂದರೆ ನಾನು ಕೂಗಿದಾಗ ಯಾರೂ ಉತ್ತರಕೊಡಲಿಲ್ಲ, ನಾನು ಹೇಳಿದಾಗ ಇವರು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡಿಸಿ ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡರು.


ದುಷ್ಟರ ಗತಿಯನ್ನು ಏನು ಹೇಳಲಿ! ಅವರ ಕಾರ್ಯಗಳಿಗೆ ತಕ್ಕ ಪ್ರತಿಫಲವು ಅವರಿಗೆ ಲಭಿಸುವದಲ್ಲವೆ.


ಆಮೇಲೆ ಆತನು ನನಗೆ ಹೀಗೆ ಹೇಳಿದನು - ನರಪುತ್ರನೇ, ನೀನು ಇಸ್ರಾಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ನುಡಿ.


ಅವರು ಕೇಳಿದರೂ ಕೇಳದೆಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ನುಡಿಯಲೇಬೇಕು; ಅವರು ದ್ರೋಹಿಗಳೇ ಹೌದು.


ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವದಕ್ಕೆ ದೂತರನ್ನು ಕಳುಹಿಸಿದ್ದೇನು? ಅಂಥ ವಿಚಾರಮಾಡುವದಕ್ಕೆ ಇಸ್ರಾಯೇಲ್ಯರಲ್ಲಿ ದೇವರಿಲ್ಲವೋ? ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದಿಳಿಯದೆ ಸಾಯಲೇಬೇಕು ಎಂಬದಾಗಿ ಯೆಹೋವನು ಅನ್ನುತ್ತಾನೆ ಎಂದು ಹೇಳಿದನು.


ನರಪುತ್ರನೇ, ಇವರು ತಮ್ಮ ಬೊಂಬೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತಮಗೆ ಪಾಪಕಾರಿಯಾದ ವಿಘ್ನವನ್ನು ತಮ್ಮ ಮುಂದೆ ಇಟ್ಟುಕೊಂಡಿದ್ದಾರೆ; ಇಂಥವರಿಗೆ ನಾನು ದೈವೋತ್ತರವನ್ನು ದಯಪಾಲಿಸುವದು ಯುಕ್ತವೋ? ಎಂದಿಗೂ ಅಲ್ಲ.


ಆದಕಾರಣ ನೀನು ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀವು ನಿಮ್ಮ ಬೊಂಬೆಗಳನ್ನು ತೊರೆದುಬಿಟ್ಟು ಹಿಂದಿರುಗಿರಿ, ನಿಮ್ಮ ಎಲ್ಲಾ ಅಸಹ್ಯವಸ್ತುಗಳ ಕಡೆಗೆ ಬೆನ್ನುಮಾಡಿರಿ.


ಅವರು ತಮ್ಮ ಬೊಂಬೆಗಳ ಮುಂದೆ ಜನರಿಗಾಗಿ ಸೇವೆಮಾಡಿ ಇಸ್ರಾಯೇಲ್ ವಂಶದವರಿಗೆ ಪಾಪಕಾರಿ ವಿಘ್ನವಾದದರಿಂದ ನಾನು ಅವರ ಮೇಲೆ ಕೈಯೆತ್ತಿದ್ದೇನೆ, ಅವರು ತಮ್ಮ ದೋಷಫಲವನ್ನು ಅನುಭವಿಸೇ ತೀರಬೇಕು; ಇದು ಕರ್ತನಾದ ಯೆಹೋವನ ನುಡಿ.


ಜನಪಶುಗಳನ್ನೂ ಆಕಾಶದ ಪಕ್ಷಿಗಳನ್ನೂ ಸಮುದ್ರದ ಮೀನುಗಳನ್ನೂ ನಾಶಪಡಿಸುವೆನು; ವಿಗ್ರಹಗಳೆಂಬ ವಿಘ್ನಗಳನ್ನೂ ಅವುಗಳಿಗೆ ಎಡವುವ ದುಷ್ಟರನ್ನೂ ಸಂಹರಿಸುವೆನು; ಭೂವಿುಯ ಮೇಲಿಂದ ನರಸಂತಾನವನ್ನು ಕಿತ್ತುಹಾಕುವೆನು; ಇದು ಯೆಹೋವನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು