Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 13:9 - ಕನ್ನಡ ಸತ್ಯವೇದವು J.V. (BSI)

9 ವಿುಥ್ಯಾದರ್ಶನ ಹೊಂದಿ ಸುಳ್ಳು ಕಣಿ ಹೇಳುವ ಪ್ರವಾದಿಗಳ ಮೇಲೆ ನಾನು ಕೈ ಮಾಡುವೆನು; ಅವರು ನನ್ನ ಜನರ ಹಿರೀ ಸಭೆಯಲ್ಲಿ ಸೇರಕೂಡದು, ಇಸ್ರಾಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರುಗಳು ಲಿಖಿತವಾಗವು, ಅವರು ಇಸ್ರಾಯೇಲ್ ದೇಶದಲ್ಲಿ ಪ್ರವೇಶಿಸಲೂಬಾರದು; ನಾನೇ ಕರ್ತನಾದ ಯೆಹೋವನು ಎಂದು ನಿಮಗೆ ಗೊತ್ತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ‘ಮಿಥ್ಯ ದರ್ಶನಹೊಂದಿ, ಸುಳ್ಳು ಕಣಿ ಹೇಳುವ ಪ್ರವಾದಿಗಳ ಮೇಲೆ ನಾನು ಕೈಮಾಡುವೆನು; ಅವರು ನನ್ನ ಜನರ ಹಿರೀಸಭೆಯಲ್ಲಿ ಸೇರಬಾರದು, ಇಸ್ರಾಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರುಗಳು ಲಿಖಿತವಾಗಬಾರದು, ಅವರು ಇಸ್ರಾಯೇಲ್ ದೇಶದಲ್ಲಿ ಪ್ರವೇಶಿಸಲೂಬಾರದು; ನಾನೇ ಕರ್ತನಾದ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಮಿಥ್ಯದರ್ಶನ ಹೊಂದಿ ಸುಳ್ಳು ಭವಿಷ್ಯ ಹೇಳುವ ಪ್ರವಾದಿಗಳ ಮೇಲೆ ನಾನು ಕೈಮಾಡುವೆನು; ಅವರು ನನ್ನ ಜನರ ಹಿರಿಯ ಸಭೆಯಲ್ಲಿ ಸೇರಕೂಡದು, ಇಸ್ರಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರು ಲಿಖಿತವಾಗಬಾರದು, ಅವರು ಇಸ್ರಯೇಲ್ ನಾಡನ್ನು ಪ್ರವೇಶಿಸಲೂಬಾರದು. ನಾನೇ ಸರ್ವೇಶ್ವರನಾದ ದೇವರು ಎಂದು ನಿಮಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೆಹೋವನು ಹೇಳುವುದೇನೆಂದರೆ, “ಯಾವ ಪ್ರವಾದಿಗಳು ಸುಳ್ಳುದರ್ಶನವನ್ನು ನೋಡಿ ಸುಳ್ಳನ್ನು ಹೇಳಿದ್ದಾರೋ, ಅವರನ್ನು ಶಿಕ್ಷಿಸುವೆನು. ನನ್ನ ಜನರ ಮಧ್ಯೆಯಿಂದ ಅವರನ್ನು ತೆಗೆದುಬಿಡುವೆನು. ಅವರ ಹೆಸರುಗಳು ಇಸ್ರೇಲರ ವಂಶಾವಳಿ ಪಟ್ಟಿಯಲ್ಲಿ ಇರುವುದಿಲ್ಲ. ಅವರು ಇಸ್ರೇಲ್ ದೇಶಕ್ಕೆ ಹಿಂದಿರುಗಿ ಬರುವುದಿಲ್ಲ. ನಾನೇ ಒಡೆಯನಾದ ಯೆಹೋವನೆಂದು ಆಗ ನಿಮಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಸುಳ್ಳಾದದ್ದನ್ನು ದರ್ಶಿಸಿ, ಸುಳ್ಳು ಕಣಿ ಹೇಳುವ ಪ್ರವಾದಿಗಳಿಗೆ ವಿರುದ್ಧವಾಗಿ ನನ್ನ ಹಸ್ತವಿರುವುದು. ಅವರು ನನ್ನ ಜನರ ಸಭೆಯಲ್ಲಿ ಇರುವುದೂ ಇಲ್ಲ, ಇಸ್ರಾಯೇಲನ ಮನೆತನದವರ ಪಟ್ಟಿಯಲ್ಲಿ ಬರೆಯಲಾಗುವುದೂ ಇಲ್ಲ. ಇಸ್ರಾಯೇಲಿನ ದೇಶದಲ್ಲಿ ಪ್ರವೇಶಿಸುವುದೂ ಇಲ್ಲ. ಆಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 13:9
40 ತಿಳಿವುಗಳ ಹೋಲಿಕೆ  

ದ್ರೋಹಿಗಳಾದವರನ್ನು ನಿಮ್ಮೊಳಗಿಂದ ಗುಡಿಸಿಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಪಾರುಮಾಡಿದರೂ ಅವರು ಇಸ್ರಾಯೇಲ್ ದೇಶಕ್ಕೆ ಸೇರುವದೇ ಇಲ್ಲ ; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಯೆಹೋವನು ಜನಾಂಗಗಳ ಪಟ್ಟಿಯನ್ನು ಮಾಡುವಾಗ [ಪ್ರತಿಯೊಂದರ ವಿಷಯ] - ಇದು ಅಲ್ಲಿಯೇ ಹುಟ್ಟಿದ್ದು ಎಂದು ಬರೆಯುವನು. ಸೆಲಾ.


ಜೀವಿತರ ಪಟ್ಟಿಯಿಂದ ಅವರ ಹೆಸರು ತೆಗೆಯಲ್ಪಡಲಿ; ಸದ್ಭಕ್ತರ ಹೆಸರಿನ ಸಂಗಡ ಅವರದು ಬರೆಯಲ್ಪಡದಿರಲಿ.


ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾಪಾಲಕನಾದ ಮೀಕಾಯೇಲನು ಆ ಕಾಲದಲ್ಲಿ ಏಳುವನು; ಮೊಟ್ಟ ಮೊದಲು ಜನಾಂಗವು ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸದಂಥ ಸಂಕಟವು ಸಂಭವಿಸುವದು; ಆಗ ನಿನ್ನ ಜನರೊಳಗೆ ಯಾರ ಹೆಸರುಗಳು [ಜೀವಬಾಧ್ಯರ] ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು.


ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ ತಾವು ಇಸ್ರಾಯೇಲ್ಯರೆಂಬದನ್ನು


ಯಾವನ ಹೆಸರು ಜೀವಬಾಧ್ಯರ ಪಟ್ಟಿಯಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.


ಇದಲ್ಲದೆ ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವದನ್ನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು; ಮತ್ತು ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು; ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ಸತ್ತವರಿಗೆ ನ್ಯಾಯತೀರ್ಪಾಯಿತು.


ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ನಮಸ್ಕರಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರ ಜೊತೆಯಲ್ಲಿ ಸೆರೆಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ಹಾಕಲ್ಪಟ್ಟರು;


ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪಟ್ಟಿಯಲ್ಲಿ ಯಾರಾರ ಹೆಸರುಗಳು ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಅದಕ್ಕೆ ನಮಸ್ಕಾರ ಮಾಡುವರು.


ಪರಲೋಕದಲ್ಲಿ ಹೆಸರು ಬರಸಿಕೊಂಡಿರುವ ಚೊಚ್ಚಲಮಕ್ಕಳ ಸಭೆಗೂ ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ ಸಿದ್ಧಿಗೆ ಬಂದಿರುವ ನೀತಿವಂತರ ಆತ್ಮಗಳ ಬಳಿಗೂ


ಸತ್ಯ ಸಯುಜನೇ, ಅವರಿಗೆ ಸಹಾಯಕನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸಪಟ್ಟವರು. ಅವರವರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆದವೆ.


ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ ಎಂಬದಾಗಿ ಹೇಳಿದನು.


ಅವರು ಯೆಹೋವನ ದೇಶದಲ್ಲಿ ಇನ್ನು ವಾಸಿಸರು. ಎಫ್ರಾಯೀಮ್ಯರು ಐಗುಪ್ತಕ್ಕೆ ಹಿಂದಿರುಗುವರು, ಅಶ್ಶೂರದಲ್ಲಿ ಅವರು ತಿನ್ನುವ ಆಹಾರವು ಹೊಲಸಾಗುವದು.


ಆಗ ಜನ ತುಂಬಿದ ಊರುಗಳು ಹಾಳಾಗಿ ದೇಶವು ಬೀಡುಬೀಳುವದು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು, ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಯೆಹೋವನು ತನ್ನ ಹೃದಯಾಲೋಚನೆಗಳನ್ನು ನಡಿಸಿ ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು; ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಸ್ಪಷ್ಟವಾಗಿ ಗ್ರಹಿಸುವಿರಿ.


ಯೆಹೋವನೇ, ಇಸ್ರಾಯೇಲ್ಯರ ನಿರೀಕ್ಷೆಯೇ, ನಿನ್ನನ್ನು ಬಿಟ್ಟುಹೋಗುವವರು ಆಶಾಭಂಗಪಡುವರು; ಯೆಹೋವನಾದ ನಿನ್ನನ್ನು ತೊರೆದವರು ಜೀವಜಲದ ಬುಗ್ಗೆಯನ್ನು ತೊರೆದವರಾಗಿದ್ದಾರೆ; ಅವರ ಹೆಸರು ದೂಳಿನಲ್ಲಿ ಬರೆಯಲ್ಪಡುವದು.


ಮತ್ತು ಚೀಯೋನಿನಲ್ಲಿ ಉಳಿದವರು, ಯೆರೂಸಲೇವಿುನಲ್ಲಿ ನಿಂತವರು, ಅಂತು ಜೀವಬಾಧ್ಯರ ಪಟ್ಟಿಯಲ್ಲಿ ಹೆಸರುಬಿದ್ದ ಯೆರೂಸಲೇವಿುನವರೆಲ್ಲರೂ ದೇವರ ಜನರೆನಿಸಿಕೊಳ್ಳುವರು.


ಮೋಸಗಾರನು ನನ್ನ ಮನೆಯಲ್ಲಿರಲೇಬಾರದು; ಸುಳ್ಳುಗಾರನು ನನ್ನ ಮುಂದೆ ನಿಲ್ಲಕೂಡದು.


ದೇವರೇ, ನನ್ನ ಮೂರ್ಖತನವು ನಿನಗೆ ಗೊತ್ತು; ನನ್ನ ಅಪರಾಧಗಳು ನಿನಗೆ ಮರೆಯಾಗಿಲ್ಲ.


ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು.


ಇಸ್ರಾಯೇಲ್ಯರೆಂಬದನ್ನು ಸ್ಥಾಪಿಸಲಾರದವರಾದ ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು 642 ಮಂದಿ.


ಆಗ ಮುದುಕನು - ನಾನೂ ನಿನ್ನಂತೆ ಪ್ರವಾದಿಯಾಗಿದ್ದೇನೆ; ಒಬ್ಬ ದೇವದೂತನು ನನಗೆ ಕಾಣಿಸಿಕೊಂಡು ನಿನ್ನನ್ನು ಕರಕೊಂಡು ಬರಬೇಕೆಂದೂ ನಿನಗೆ ಅನ್ನಪಾನಗಳನ್ನು ಕೊಡಬೇಕೆಂದೂ ಯೆಹೋವನ ಹೆಸರಿನಲ್ಲಿ ಆಜ್ಞಾಪಿಸಿದ್ದಾನೆ ಎಂದು ಹೇಳಿದನು; ಆದರೆ ಈ ಮಾತು ಸುಳ್ಳು.


ಆ ಕಾಲದಲ್ಲಿ ಅರಸನ ಎದೆಯು ಕುಂದುವದು, ಅಧಿಪತಿಗಳ ಹೃದಯವು ಕುಗ್ಗುವದು, ಯಾಜಕರು ಸ್ತಬ್ಧರಾಗುವರು, ಪ್ರವಾದಿಗಳು ಬೆರಗಾಗುವರು ಎಂದು ಯೆಹೋವನು ಅನ್ನುತ್ತಾನೆ.


ನೀವು ಸುಣ್ಣ ಬಳಿದ ಗೋಡೆಯನ್ನು ನಾನು ಹೀಗೆ ಕೆಡವಿ ನೆಲಸಮಮಾಡಿ ಅದರ ಅಸ್ತಿವಾರವನ್ನು ಬೈಲುಪಡಿಸುವೆನು; ಅದು ಬಿದ್ದು ಹೋಗುವದು, ಮತ್ತು ನೀವು ಅದರೊಳಗೆ ಸಿಕ್ಕಿಕೊಂಡು ನಾಶವಾಗುವಿರಿ; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ನೀವು ವಿುಥ್ಯಾದರ್ಶನವನ್ನು ಹೊಂದಿ ಕಣಿಹೇಳುವ ಕೆಲಸವು ಇನ್ನು ನಡಿಯುವದೇ ಇಲ್ಲ; ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಆದದರಿಂದ ಇವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ಕೋಪಗೊಂಡು ಪ್ರಮಾಣಮಾಡಿದೆನು.


ಆದಕಾರಣ ನನ್ನ ಅಪ್ಪಣೆಯಿಲ್ಲದೆ ನನ್ನ ಹೆಸರಿನಿಂದ ಪ್ರವಾದಿಸುತ್ತಾ ಖಡ್ಗವೂ ಕ್ಷಾಮವೂ ಈ ದೇಶಕ್ಕೆ ಬಾರವು ಎಂದು ಬೋಧಿಸುವ ಪ್ರವಾದಿಗಳ ವಿಷಯದಲ್ಲಿ ಯೆಹೋವನಾದ ನಾನು - ಖಡ್ಗದಿಂದಲೂ ಕ್ಷಾಮದಿಂದಲೂ ಈ ಪ್ರವಾದಿಗಳು ನಿರ್ಮೂಲರಾಗುವರು ಎಂದು ಹೇಳುತ್ತೇನೆ.


[ಆಹಾ, ಯಾಜಕರೇ,] ನೀವು ಹಗಲಿನಲ್ಲಿ ಎಡವುವಿರಿ; ರಾತ್ರಿಯಲ್ಲಿ ನಿಮ್ಮೊಂದಿಗೆ ಪ್ರವಾದಿಗಳೂ ಎಡವುವರು; ನಾನು ನಿಮ್ಮ ವಂಶಮೂಲವನ್ನು ನಾಶಮಾಡುವೆನು.


ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವವರೂ ಹಲ್ಲುಗಳಿಗೆ ಕುರುಕುವದೇನಾದರೂ ಸಿಕ್ಕಿರುವ ತನಕ ಶುಭವನ್ನು ಪ್ರಕಟಿಸುವವರೂ ತಮ್ಮ ಬಾಯಿಗೆ ಕವಳಕೊಡದವನ ಮೇಲೆ ಯುದ್ಧನಿರ್ಧರಿಸುವವರೂ ಆಗಿರುವ ಪ್ರವಾದಿಗಳ ವಿಷಯವಾಗಿ ಯೆಹೋವನು ಇಂತೆನ್ನುತ್ತಾನೆ -


ನೀವು ಇಂಥವರಾದಕಾರಣ ನಿಮಗೆ ರಾತ್ರಿಯಾಗುವದು, ದಿವ್ಯದರ್ಶನವಾಗದು; ನಿಮಗೆ ಕತ್ತಲುಕವಿಯುವದು, ಕಣಿಹೇಳಲಾಗದು; ಸೂರ್ಯನು ಪ್ರವಾದಿಗಳಿಗೆ ಮುಣುಗುವನು, ಹಗಲು ಅವರಿಗೆ ಕಾರ್ಗತ್ತಲಾಗುವದು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು