Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 12:28 - ಕನ್ನಡ ಸತ್ಯವೇದವು J.V. (BSI)

28 ಆದಕಾರಣ ನೀನು ಅವರಿಗೆ ಹೀಗೆ ಹೇಳು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವದೂ ಸಾವಕಾಶವಾಗದು; ನಾನಾಡುವ ಮಾತು ನೆರವೇರುವದು ಖಂಡಿತ; ಇದು ಕರ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 “ಆದಕಾರಣ ನೀನು ಅವರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವುದೂ ನೆರವೇರದೆ ಇರದು; ನಾನಾಡುವ ಮಾತು ನೆರವೇರುವುದು ಖಂಡಿತ’ ಇದು ಕರ್ತನಾದ ಯೆಹೋವನ ನುಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಆದಕಾರಣ ನೀನು ಅವರಿಗೆ ಹೀಗೆ ಹೇಳು: ಸರ್ವೇಶ್ವರನಾದ ದೇವರು ಹೇಳುವುದನ್ನು ಗಮನಿಸಿ: ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವುದೂ ಸಾವಕಾಶವಾಗದು; ನಾನಾಡುವ ಮಾತು ನೆರವೇರುವುದು ಖಂಡಿತ; ಇದು ಸರ್ವೇಶ್ವರನಾದ ದೇವರ ನುಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಆದ್ದರಿಂದ ಅವರಿಗೆ ನೀನು ಈ ವಿಷಯವನ್ನು ತಿಳಿಸು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: ಏನೆಂದರೆ ನಾನು ಇನ್ನು ಹೆಚ್ಚು ತಡಮಾಡುವುದಿಲ್ಲ. ನಾನೊಂದು ವಿಷಯವು ನೆರವೇರುವುದು ಎಂದು ಹೇಳಿದರೆ ಅದು ಖಂಡಿತ ನೆರವೇರುವುದು.’” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 “ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ, ನನ್ನ ಯಾವುದೇ ಮಾತು ಇನ್ನು ತಡವಾಗದು. ನಾನು ಹೇಳಿದ್ದೆಲ್ಲವನ್ನು ನೆರವೇರುವುದೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 12:28
15 ತಿಳಿವುಗಳ ಹೋಲಿಕೆ  

ಆದದರಿಂದ ನೀನು ಹೊಂದಿದ ಉಪದೇಶವನ್ನೂ ಅದನ್ನು ಕೇಳಿದ ರೀತಿಯನ್ನೂ ನೆನಪಿಗೆ ತಂದುಕೊಂಡು ಅದನ್ನು ಕಾಪಾಡಿಕೋ ಮತ್ತು ದೇವರ ಕಡೆಗೆ ತಿರುಗಿಕೋ. ನೀನು ಎಚ್ಚರವಾಗಿಲ್ಲದಿದ್ದರೆ ಕಳ್ಳನು ಬರುವಂತೆ ಬರುವೆನು; ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ತಿಳಿಯುವದೇ ಇಲ್ಲ.


ಖಡ್ಗಕ್ಕೆ ತಪ್ಪಿಸಿಕೊಂಡವರು ಕೊಂಚ ಜನ ಮಾತ್ರವೇ ಆಗಿ ಐಗುಪ್ತದಿಂದ ಯೆಹೂದಕ್ಕೆ ಹಿಂದಿರುಗುವರು; ಆಗ ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದ ಜನಶೇಷದವರೆಲ್ಲರೂ ನನ್ನ ಮಾತು ಸಾಗತಕ್ಕದ್ದೋ ತಮ್ಮ ಮಾತು ಸಾಗತಕ್ಕದ್ದೋ ಎಂದು ತಿಳಿದುಕೊಳ್ಳುವರು.


ಜನಾಂಗಘಾತುಕವಾದ ಒಂದು ಸಿಂಹವು ತನ್ನ ಪೊದೆಯೊಳಗಿಂದ ಎದ್ದಿದೆ; ಹೊರಟಿದೆ, ಸ್ಥಳದಿಂದ ತೆರಳಿದೆ; ನಿನ್ನ ದೇಶವನ್ನು ಹಾಳುಮಾಡುವದು, ನಿನ್ನ ಪಟ್ಟಣಗಳು ಪಾಳುಬಿದ್ದು ನಿರ್ನಿವಾಸಿಗಳಾಗುವವು.


ದೇಶನಿವಾಸಿಯೇ, ನಿನ್ನ ಗತಿ ಆಯಿತು. ಸಮಯ ಬಂತು, ದಿನ ಹತ್ತರಿಸಿತು; ಬೆಟ್ಟಗಳ ಮೇಲೆ ಕೇಳಿಸುವ ಧ್ವನಿಯು ಉತ್ಸಾಹ ಧ್ವನಿಯಲ್ಲ, ಕಳಕಳವೇ.


ನರಪುತ್ರನೇ, ಇಗೋ ಇಸ್ರಾಯೇಲ್‍ವಂಶದವರು - ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ ಎಂದು ಹೇಳುತ್ತಾರೆ.


ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -


ಇದಲ್ಲದೆ ಯೆಹೋವನು - ಯೆರೆಮೀಯನೇ, ಏನು ನೋಡುತ್ತೀ ಎಂದು ನನ್ನನ್ನು ಕೇಳಿದನು, ಅದಕ್ಕೆ ನಾನು - ಚಚ್ಚರ ಮರದ ರೆಂಬೆಯನ್ನು ನೋಡುತ್ತೇನೆ ಅಂದೆನು.


ಆಗ ಯೆಹೋವನು ನನಗೆ - ಸರಿಯಾಗಿ ನೋಡಿದ್ದೀ, ನನ್ನ ಮಾತನ್ನು ನೆರವೇರಿಸುವದಕ್ಕೆ ಎಚ್ಚರಗೊಂಡಿದ್ದೇನೆ ಎಂದು ತಿಳಿದುಕೋ ಎಂಬದಾಗಿ ಹೇಳಿದನು.


ಇನ್ನೊಂದು ಸಲ ಯೆಹೋವನು ಏನು ನೋಡುತ್ತೀ ಎಂದು ನನ್ನನ್ನು ಕೇಳಿದನು. ಅದಕ್ಕೆ ನಾನು - ಉರಿಸುತ್ತಿರುವ ಬೆಂಕಿಯಿಂದುಕ್ಕುವ ಹಂಡೆಯನ್ನು ನೋಡುತ್ತೇನೆ. ಅದರ ಬಾಯಿ ಬಡಗಲಿಂದ ಇತ್ತ ಬಾಗಿಕೊಂಡಿದೆ ಅಂದೆನು.


ಮಾರಿದವನು ಎಷ್ಟು ವರುಷ ಬದುಕಿದರೂ ಮಾರಿದ ಸೊತ್ತು ಅವನ ವಶಕ್ಕೆ ತಿರುಗಿಬಾರದು; ಉಂಟಾದ ದಿವ್ಯದರ್ಶನವು ಸಮೂಹದವರಿಗೆಲ್ಲಾ ಸಂಬಂಧಿಸಿದೆ, ಯಾರೂ ಹಿಂದಿರುಗರು, ಯಾರೂ ತಮ್ಮ ಅಧರ್ಮದಿಂದ ತಮ್ಮ ಜೀವವನ್ನು ಉಳಿಸಿಕೊಳ್ಳರು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು