Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 12:22 - ಕನ್ನಡ ಸತ್ಯವೇದವು J.V. (BSI)

22 ನರಪುತ್ರನೇ, ಕ್ಲುಪ್ತಕಾಲವು ದೂರದೂರ ಹೋಗುತ್ತಲಿದೆ, ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂಬದಾಗಿ ಇಸ್ರಾಯೇಲ್ ದೇಶದವರು ಆಡಿಕೊಳ್ಳುವ ಈ ಗಾದೆ ಏನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 “ನರಪುತ್ರನೇ, ಕ್ಲುಪ್ತಕಾಲವು ದೂರ ಹೋಗುತ್ತಲಿದೆ; ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂಬುದಾಗಿ ಇಸ್ರಾಯೇಲ್ ದೇಶದವರು ಆಡಿಕೊಳ್ಳುವ ಈ ಗಾದೆ ಮಾತು ಎಂಥದ್ದು?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 “ನರಪುತ್ರನೇ, ‘ಕ್ಲುಪ್ತಕಾಲ ದೂರ ದೂರ ಹೋಗುತ್ತಲಿದೆ, ದಿವ್ಯದರ್ಶನಗಳೆಲ್ಲಾ ನಿರರ್ಥಕ’ ಎಂಬುದಾಗಿ ಇಸ್ರಯೇಲ್ ನಾಡಿನವರು ಆಡಿಕೊಳ್ಳುವ ಈ ಗಾದೆ ಏನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 “ನರಪುತ್ರನೇ, ‘ಸಂಕಷ್ಟದ ದಿನಗಳು ಉರುಳುತ್ತಿವೆ; ಎಲ್ಲಾ ದರ್ಶನಗಳು ನೆರವೇರುವುದಿಲ್ಲ’ ಎಂಬ ಈ ಗಾದೆಯನ್ನು ಇಸ್ರೇಲ್ ದೇಶದಲ್ಲಿರುವ ನೀವೆಲ್ಲರೂ ಹೇಗೆ ಅರ್ಥಮಾಡಿಕೊಳ್ಳುವಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 “ಮನುಷ್ಯಪುತ್ರನೇ, ‘ದಿನಗಳು ಬಹಳವಾಗುತ್ತಿವೆ. ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂದು ಇಸ್ರಾಯೇಲ್ ದೇಶದಲ್ಲಿ ಹೇಳಿಕೊಳ್ಳುವ ಈ ಗಾದೆ ಏನು’?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 12:22
12 ತಿಳಿವುಗಳ ಹೋಲಿಕೆ  

ಇವರು - ಮನೆಗಳನ್ನು ಕಟ್ಟಿಕೊಳ್ಳುವ ಕಾಲವು ಬಂದಿಲ್ಲ; ಈ ಪಟ್ಟಣವು ಹಂಡೆ, ನಾವು ಮಾಂಸ ಎಂದು ಹೇಳುತ್ತಾರೆ.


ನರಪುತ್ರನೇ, ಇಗೋ ಇಸ್ರಾಯೇಲ್‍ವಂಶದವರು - ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ ಎಂದು ಹೇಳುತ್ತಾರೆ.


ಆಹಾ, ಆ ಮುಖಂಡರು ಆಪತ್ತಿನ ದಿನದ ಯೋಚನೆಯನ್ನು ದೂರಕ್ಕೆ ತಳ್ಳುತ್ತಾರೆ, ಅನ್ಯಾಯದ ಪೀಠವನ್ನು ಹತ್ತಿರಕ್ಕೆ ತಂದುಕೊಳ್ಳುತ್ತಾರೆ;


ನಾವು ಆತನ ಕೆಲಸವನ್ನು ನೋಡಬೇಕು, ಅದನ್ನು ಬೇಗನೆ ನಡಿಸಲಿ, ಇಸ್ರಾಯೇಲ್ಯರ ಸದಮಲಸ್ವಾವಿುಯ ಉದ್ದೇಶವನ್ನು ನಾವು ತಿಳಿಯಬೇಕು. ಅದು ಸಮೀಪಿಸಿ ಬರಲಿ ಎಂದು ನುಡಿಯುವವರ ದುರವಸ್ಥೆಯನ್ನು ಏನು ಹೇಳಲಿ!


ಆಹಾ, ಗಾದೆಗಳಲ್ಲಿ ಜಾಣರು ತಾಯಿಯಂತೆ ಮಗಳು ಎಂಬ ಗಾದೆಯನ್ನು ನಿನ್ನ ವಿಷಯವಾಗಿ ನುಡಿಯುವರು.


ಉಪದ್ರವದ ಮೇಲೆ ಉಪದ್ರವ, ಸುದ್ದಿಯ ಮೇಲೆ ಸುದ್ದಿ, ಬರುವವು; ದಿವ್ಯದರ್ಶನವಾಯಿತೇ ಎಂದು ಪ್ರವಾದಿಯನ್ನು ಕೇಳುತ್ತಲೇ ಇರುವರು; ಯಾಜಕರಲ್ಲಿ ಧರ್ಮೋಪದೇಶವು ಅಡಗಿಹೋಗುವದು, ಹಿರಿಯರಲ್ಲಿ ಮಂತ್ರಾಲೋಚನೆಯು ಇಲ್ಲವಾಗುವದು.


ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -


ಜನಾಂಗಗಳ ಮಧ್ಯೆ ನಡೆಯುವದನ್ನು ನೋಡಿರಿ, ದೃಷ್ಟಿಯಿಡಿರಿ, ಬೆರಗಾಗಿರಿ; ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು, ಅದು ನಿಮಗೆ ತಿಳಿಯಲ್ಪಟ್ಟರೂ ನೀವು ಅದನ್ನು ನಂಬುವದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು