Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 66:6 - ಕನ್ನಡ ಸತ್ಯವೇದವು J.V. (BSI)

6 ಇಗೋ, ಪಟ್ಟಣದ ಕಡೆಯಿಂದ ಗದ್ದಲದ ಶಬ್ದ! ದೇವಾಲಯದಲ್ಲಿ ಶಬ್ದ! ಯೆಹೋವನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ಶಬ್ದ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಇಗೋ, ಪಟ್ಟಣದ ಕಡೆಯಿಂದ ಗದ್ದಲದ ಶಬ್ದ! ದೇವಾಲಯದಲ್ಲಿ ಶಬ್ದ! ಯೆಹೋವನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ಶಬ್ದ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಇಗೋ ಕೇಳಿ, ನಗರದ ಕಡೆಯಿಂದ ಕೋಲಾಹಲದ ಶಬ್ದ, ದೇವಾಲಯದಲ್ಲಿ ಶಬ್ದ, ಸರ್ವೇಶ್ವರ ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ಶಬ್ದ !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆಲೈಸಿರಿ! ಪಟ್ಟಣದೊಳಗಿಂದ ಮತ್ತು ದೇವಾಲಯದೊಳಗಿಂದ ದೊಡ್ಡ ಶಬ್ದವು ಕೇಳಿಸುತ್ತದೆ. ಯೆಹೋವನು ತನ್ನ ವೈರಿಗಳನ್ನು ಶಿಕ್ಷಿಸುವುದೇ ಆ ಶಬ್ದ. ಅವರಿಗೆ ತಕ್ಕ ಶಿಕ್ಷೆಯನ್ನು ಯೆಹೋವನು ಕೊಡುತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಪಟ್ಟಣದೊಳಗಿನ ಗದ್ದಲದ ಶಬ್ದವು ದೇವಾಲಯದೊಳಗಿಂದ ಸ್ವರವು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಯೆಹೋವ ದೇವರ ಸ್ವರವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 66:6
7 ತಿಳಿವುಗಳ ಹೋಲಿಕೆ  

ಆಮೋಸನು ಹೀಗೆ ಪ್ರಕಟಿಸಿದನು - ಯೆಹೋವನು ಚೀಯೋನಿನಿಂದ ಗರ್ಜಿಸಿ ಯೆರೂಸಲೇವಿುನಿಂದ ದನಿಗೈಯುವನು; ಆಗ ಕುರುಬರ ಕಾವಲುಗಳು ಗೋಳಿಡುವವು, ಕರ್ಮೆಲ್ ಬೆಟ್ಟದ ತುದಿಯು ಒಣಗುವದು.


ಏಕಂದರೆ ಯೆಹೋವನು ಮುಯ್ಯಿತೀರಿಸುವ ದಿನವು ಬಂದಿದೆ; ಚೀಯೋನಿನ ವ್ಯಾಜ್ಯದಲ್ಲಿ [ಎದೋವಿುಗೆ] ದಂಡನೆವಿಧಿಸತಕ್ಕ ವರುಷವು ಒದಗಿದೆ.


ತನ್ನ ವಿರೋಧಿಗಳಲ್ಲಿಟ್ಟ ಕ್ರೋಧವನ್ನು ಈಡೇರಿಸಿ ತನ್ನ ಶತ್ರುಗಳಿಗೆ ದಂಡನೆಯನ್ನು ವಿಧಿಸಿ ಅವರವರ ಕೃತ್ಯಗಳಿಗೆ ತಕ್ಕಂತೆ ಮುಯ್ಯಿತೀರಿಸುವನು; ಕರಾವಳಿಯವರಿಗೂ ಪ್ರತಿಕ್ರಿಯೆಮಾಡುವನು.


ಆಕೆಯು ಗರ್ಭಿಣಿಯಾಗಿದ್ದು ಪ್ರಸವವೇದನೆಯಿಂದ ಸಂಕಟಪಡುತ್ತಾ ಕೂಗುತ್ತಿದ್ದಳು. ಪರಲೋಕದಲ್ಲಿ ಮತ್ತೊಂದು ಲಕ್ಷಣವು ಕಾಣಿಸಿತು.


ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂವಿುಯು ತನ್ನಲ್ಲಿ ಇಂಗಿದ್ದ ರಕ್ತವನ್ನು ವ್ಯಕ್ತಗೊಳಿಸುವದು, ತನ್ನ ನಿವಾಸಿಗಳಲ್ಲಿ ಹತರಾಗಿದ್ದವರನ್ನು ಇನ್ನು ಮರೆಮಾಜದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು