Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 63:1 - ಕನ್ನಡ ಸತ್ಯವೇದವು J.V. (BSI)

1 ಆಹಾ, ರಕ್ತವರ್ಣದ ಉಡುಪನ್ನುಟ್ಟು ಘನವಸ್ತ್ರಗಳನ್ನು ಧರಿಸಿಕೊಂಡು ಮಹಾಶೌರ್ಯಯುಕ್ತನಾಗಿ ಮೆರೆಯುತ್ತಾ ಎದೋವಿುನ ಬೊಚ್ರದಿಂದ ಬರುವ ಈತನು ಯಾರು? ಸತ್ಯಾನುಸಾರವಾಗಿ ಮಾತಾಡುವ, ರಕ್ಷಿಸಲು ಸಮರ್ಥನಾದ ನಾನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆಹಾ, ರಕ್ತವರ್ಣದ ಉಡುಪನ್ನಿಟ್ಟು, ಘನವಸ್ತ್ರಗಳನ್ನು ಧರಿಸಿಕೊಂಡು, ಮಹಾಶೌರ್ಯಯುಕ್ತನಾಗಿ ಮೆರೆಯುತ್ತಾ, ಎದೋಮಿನ ಬೊಚ್ರದಿಂದ ಬರುವ ಇವನು ಯಾರು? ಸತ್ಯಾನುಸಾರವಾಗಿ ಮಾತನಾಡುವವನು, ರಕ್ಷಿಸಲು ಸಮರ್ಥನು ಆದ ನಾನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 “ಎದೋಮಿನ ಬೊಚ್ರನಗರದಿಂದ ಬರುವ ಈತನು ಯಾರು? ರಕ್ತಗೆಂಪಾದ ಉಡುಪನ್ನುಟ್ಟು ಥಳಥಳಿಸುವ ವಸ್ತ್ರಗಳನ್ನು ಧರಿಸಿಕೊಂಡು, ಮಹಾಶೌರ್ಯದಿಂದ ಮೆರೆಯುತ್ತಾ ನಡೆದುಬರುವ ಈತನು ಯಾರು? “ಆತನು ನಾನೇ, ಸತ್ಯವನು ಘೋಷಿಸುವವನು, ಆತನು ನಾನೇ, ಉದ್ಧರಿಸಲು ಸಮರ್ಥನು".

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಎದೋಮಿನಿಂದ ಬರುತ್ತಿರುವ ಇವನು ಯಾರು? ಅವನು ಬೊಜ್ರದಿಂದ ಬರುತ್ತಿದ್ದಾನೆ. ಆತನ ಬಟ್ಟೆಯು ಕಡುಕೆಂಪು ಬಣ್ಣದಿಂದ ತುಂಬಿದೆ. ತನ್ನ ಬಟ್ಟೆಯಲ್ಲಿ ಆತನು ಮಹಿಮಾಸ್ವರೂಪನಾಗಿ ಕಾಣುತ್ತಿದ್ದಾನೆ. ಆತನು ತನ್ನ ಬಲಸಾಮರ್ಥ್ಯಗಳಿಂದಾಗಿ ನೇರವಾಗಿ ನಡೆಯುತ್ತಿದ್ದಾನೆ. ಆತನು, “ನಾನು ಸತ್ಯವನ್ನೇ ಹೇಳುತ್ತೇನೆ, ನಿನ್ನನ್ನು ರಕ್ಷಿಸಲು ನನಗೆ ಸಾಮರ್ಥ್ಯ ಉಂಟು” ಎಂದು ಹೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರವನ್ನು ತೊಟ್ಟುಕೊಂಡವನಾಗಿ, ತನ್ನ ಮಹಾ ಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? “ನೀತಿಯನ್ನು ಘೋಷಿಸುವವನೂ, ರಕ್ಷಿಸಲು ಬಲಿಷ್ಠನೂ ನಾನೇ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 63:1
39 ತಿಳಿವುಗಳ ಹೋಲಿಕೆ  

ಆತನು ರಕ್ತಪ್ರೋಕ್ಷಿತವಾದ ವಸ್ತ್ರವನ್ನು ಧರಿಸಿಕೊಂಡಿದ್ದನು. ಆತನಿಗೆ ದೇವರ ವಾಕ್ಯವೆಂದು ಹೆಸರು.


ಯೆಹೋವನೇ, ಎದೋಮ್ಯರ ಹಾನಿಗಾಗಿ ಯೆರೂಸಲೇವಿುನ ನಾಶನದಿನವನ್ನು ನೆನಪುಮಾಡಿಕೋ. ಅವರು - ಅದನ್ನು ಹಾಳುಮಾಡಿರಿ, ಅಸ್ತಿವಾರಸಹಿತ ಹಾಳುಮಾಡಿರಿ ಎಂದು ಹೇಳಿದರಲ್ಲಾ.


ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ.


ಆತನು ಯೆರೂಸಲೇಮನ್ನು ಸೇರಲು ಪಟ್ಟಣವೆಲ್ಲಾ ಗದ್ದಲವಾಗಿ, ಈತನು ಯಾರು? ಅಂದರು.


ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಆ ಸೇಬುಮರದ ಕೆಳಗೆ ನಿನ್ನನ್ನು ಎಬ್ಬಿಸಿದೆನಲ್ಲಾ! ಇಗೋ, ಅಲ್ಲಿ ನಿನ್ನ ತಾಯಿಯು ನಿನ್ನನ್ನು ಹೆತ್ತಳು, ಅಲ್ಲೇ ಪ್ರಸವವೇದನೆ ಪಟ್ಟು, ನಿನ್ನನ್ನು ಪಡೆದಳು!


ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ಮುಣುಗಿ ಮೌನವಾಗಿರುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು ಎಂದು ಹೇಳೋಣವಾಗುವದು.


ನಾನು ರಹಸ್ಯದಲ್ಲಿ ನುಡಿದವನಲ್ಲ, ತಮೋಲೋಕದೊಳಗಿಂದ ಮಾತಾಡಿದವನಲ್ಲ, ಶೂನ್ಯವನ್ನೋ ಎಂಬಂತೆ ನನ್ನನ್ನು ಹುಡುಕಿರಿ ಎಂದು ಯಾಕೋಬ ವಂಶದವರಿಗೆ ನಾನು ಅಪ್ಪಣೆಕೊಡಲಿಲ್ಲ. ಯೆಹೋವನೆಂಬ ನಾನು ಸತ್ಯಾನುಸಾರ ನುಡಿಯುವವನು, ನೆಟ್ಟನೆಯ ಮಾತುಗಳನ್ನೇ ಆಡುತ್ತೇನೆ.


[ಯುದ್ಧದ] ಗದ್ದಲದಲ್ಲಿ ತುಳಿದಾಡಿದವರೆಲ್ಲರ ಮೆಟ್ಟುಗಳೂ ರಕ್ತದಲ್ಲಿ ಹೊರಳಾಡಿಸಿದ ಉಡುಪುಗಳೂ ಅಗ್ನಿಗೆ ಆಹಾರವಾಗಿ ಸುಟ್ಟುಹೋಗುವವು.


ಅರುಣೋದಯವು ದೃಷ್ಟಿಸುವಂತಿರುವ ಇವಳಾರು? ಚಂದ್ರನಂತೆ ಸೌಮ್ಯಳು, ಸೂರ್ಯನಂತೆ ಶುಭ್ರಳು, ಪತಾಕಿನಿಯಂತೆ ಭಯಂಕರಳು ಆಗಿರುವ ಇವಳಾರು?


ರಕ್ತಬೋಳ, ಧೂಪ, ವರ್ತಕರ ಸಕಲಸುಗಂಧ ದ್ರವ್ಯಗಳನ್ನು ಧೂಪಿಸಿದ ಧೂಮಸ್ತಂಭಗಳಂತೆ ಅರಣ್ಯದಿಂದ ಬರುವ ಈ ಮೆರವಣಿಗೆ ಯಾರದು?


ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.


ಎಲ್ಲರೂ ನನಗೆ ಅಡ್ಡಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು ಎಂಬ ನುಡಿ ನನ್ನ ಸತ್ಯದ ಬಾಯಿಂದ ಹೊರಟಿದೆ, ಅದನ್ನು ಹಿಂತೆಗೆಯೆನು, ನನ್ನ ಮೇಲೆ ಆಣೆಯಿಟ್ಟಿದ್ದೇನೆ.


ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಬಲದಿಂದ ಕಾಯುತ್ತಾನೆ.


ದೇವರಿಂದ ಶೂರಕೃತ್ಯಗಳನ್ನು ನಡಿಸುವೆವು; ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.


ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು, ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವದು; ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.


ಇವು ಪಡುವಲಲ್ಲಿ ಫಿಲಿಷ್ಟಿಯರ ಭುಜದ ಮೇಲೆ ಎರಗುವವು, ಜೊತೆಯಾಗಿ ಮೂಡಣದವರನ್ನು ಸೂರೆಗೊಳ್ಳುವವು; ಎದೋವಿುನ ಮತ್ತು ಮೋವಾಬಿನ ಮೇಲೆ ಕೈಮಾಡುವವು; ಅಮ್ಮೋನ್ಯರು ಇವುಗಳಿಗೆ ಅಧೀನರಾಗುವರು.


ಬೊಚ್ರವು ಹಾಳುಬಿದ್ದು ಬೆರಗಿಗೂ ನಿಂದೆಗೂ ಶಾಪಕ್ಕೂ ಗುರಿಯಾಗಿ ಅದಕ್ಕೆ ಸೇರಿದ ಊರುಗಳೆಲ್ಲಾ ನಿತ್ಯನಾಶನವನ್ನು ಹೊಂದುವವು ಎಂದು ನನ್ನ ಮೇಲೆ ಆಣೆಯಿಟ್ಟಿದ್ದೇನೆ. ಇದು ಯೆಹೋವನ ನುಡಿ.


ಕರ್ತನಾದ ಯೇಹೋವನು ಇಂತೆನ್ನುತ್ತಾನೆ - ಎದೋಮು ಯೆಹೂದವಂಶಕ್ಕೆ ಪ್ರತೀಕಾರಮಾಡಿದೆ; ಮುಯ್ಯಿಗೆ ಮುಯ್ಯಿತೀರಿಸಿ ಮಹಾಪರಾಧವನ್ನು ನಡಿಸಿದೆ;


ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -


ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳು ಪುರಾತನಕಾಲದಲ್ಲಿ ಬಹುವರುಷ ಪ್ರವಾದಿಸುತ್ತಾ ನಾನು ಒಬ್ಬನನ್ನು ಇಸ್ರಾಯೇಲ್ಯರ ಮೇಲೆ ಬೀಳಮಾಡುವೆನು ಎಂದು ಮುಂತಿಳಿಸಿದ್ದರಷ್ಟೆ; ನಾನು ಅವರ ಮೂಲಕ ಮುಂತಿಳಿಸಿದವನು ನೀನೇ ಅಲ್ಲವೇ.


ಓಬದ್ಯನಿಗಾದ ದೈವದರ್ಶನ. ಕರ್ತನಾದ ಯೆಹೋವನು ಎದೋವಿುನ ವಿಷಯವಾಗಿ ನುಡಿದ ವಾಕ್ಯ. ಯೆಹೋವನಿಂದ ಬಂದ ಸಮಾಚಾರವನ್ನು ಕೇಳಿದ್ದೇವೆ; ಆತನು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿಕಳುಹಿಸಿದ್ದಾನೆ - ಹೊರಡಿರಿ, ಯುದ್ಧಕ್ಕೆ ಹೊರಟು ಎದೋವಿುನ ಮೇಲೆ ಬೀಳೋಣ.


ತೇಮಾನೇ, ನಿನ್ನ ಶೂರರು ಧೈರ್ಯಗೆಟ್ಟು ಎಲ್ಲರೂ ಹತರಾಗಿ ಏಸಾವಿನ ಪರ್ವತದೊಳಗಿಂದ ನಿರ್ಮೂಲರಾಗುವರು.


ಯೆಹೋವನು ಇಂತೆನ್ನುತ್ತಾನೆ - ನಾನು ನಿಮ್ಮನ್ನು ಪ್ರೀತಿಸಿದ್ದೇನೆ; ನೀವೋ - ಯಾವ ವಿಷಯದಲ್ಲಿ ನಮ್ಮನ್ನು ಪ್ರೀತಿಸಿದ್ದೀ ಅಂದುಕೊಳ್ಳುತ್ತೀರಲ್ಲಾ. ಏಸಾವನು ಯಾಕೋಬನ ಅಣ್ಣನಲ್ಲವೆ,


ಬೆಲಗನು ಸತ್ತ ಮೇಲೆ ಬೊಚ್ರದವನಾದ ಜೆರಹನ ಮಗನಾಗಿದ್ದ ಯೋಬಾಬನು ಆಧಿಪತ್ಯಕ್ಕೆ ಬಂದನು.


ಅವನು ತನ್ನ ವಾಹನಪಶುವನ್ನು ದ್ರಾಕ್ಷಾಲತೆಗೆ ಕಟ್ಟುವನು, ರಾಜದ್ರಾಕ್ಷೆಗೆ ತನ್ನ ಕತ್ತೆಯನ್ನು ಬಿಗಿಯುವನು; ದ್ರಾಕ್ಷಾರಸದಲ್ಲಿ ತನ್ನ ಬಟ್ಟೆಗಳನ್ನು ಒಗೆಯುವನು, ದ್ರಾಕ್ಷಾರಸದಲ್ಲಿಯೇ ತನ್ನ ವಸ್ತ್ರಗಳನ್ನು ಅದ್ದಿ ತೊಳೆಯುವನು:


ಬೆಳನು ಸತ್ತ ಮೇಲೆ ಬೊಚ್ರದವನಾದ ಜೆರಹನ ಮಗ ಯೋಬಾಬನು ಆಧಿಪತ್ಯಕ್ಕೆ ಬಂದನು.


ನೀನು ಶೌರ್ಯವೆಂಬ ನಡುಕಟ್ಟನ್ನು ಬಿಗಿದುಕೊಂಡು ಬಲದಿಂದ ಪರ್ವತಗಳನ್ನು ಸ್ಥಿರವಾಗಿ ನಿಲ್ಲಿಸಿದವನೂ


ಜನಾಂಗಗಳೇ, ಸಮೀಪಿಸಿ ಕೇಳಿರಿ; ಜನಗಳೇ, ಕಿವಿಗೊಡಿರಿ! ಭೂವಿುಯೂ ಅದರಲ್ಲಿನ ಸಮಸ್ತವೂ, ಲೋಕವೂ ಅದರಿಂದ ಉದ್ಭವಿಸುವದೆಲ್ಲವೂ ಆಲಿಸಲಿ.


ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ; ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ; ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರ ಪಡಿಸುವನು.


ಜಜ್ಜಿದ ದಂಟನ್ನು ಮುರಿದು ಹಾಕದೆ ಕಳೆಗುಂದಿದ ದೀಪವನ್ನು ನಂದಿಸದೆ ಸದ್ಧರ್ಮವನ್ನು ಪ್ರಚುರಪಡಿಸಿ ಸಿದ್ಧಿಗೆ ತರುವನು.


ಕೆರೀಯೋತ್, ಬೊಚ್ರ, ಅಂತು ದೂರದ ಹತ್ತಿರದ ಮೋವಾಬಿನ ಎಲ್ಲಾ ಪಟ್ಟಣಗಳಿಗೂ ದಂಡನೆಯಾಗದೆ ಇಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು