Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 60:17 - ಕನ್ನಡ ಸತ್ಯವೇದವು J.V. (BSI)

17 ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇವಿುಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ, ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಒದಗಿಸುವೆ ನಿನಗೆ ಮರವಿದ್ದಲ್ಲಿ ತಾಮ್ರವನು ಹಿತ್ತಾಳೆಗೆ ಬದಲಾಗಿ ಬಂಗಾರವನು ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನು ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನು ಮಾಡುವೆ ಶಾಂತಿಯನ್ನೇ ನಿನಗೆ ಅಧಿಪತಿಯನ್ನಾಗಿ ಸದ್ಧರ್ಮವನ್ನೇ ನಿನಗೆ ಅಧಿಕಾರಿಯನ್ನಾಗಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 “ಈಗ ನಿನ್ನಲ್ಲಿ ತಾಮ್ರವಿದೆ. ನಾನು ನಿನಗೆ ಬಂಗಾರವನ್ನು ತರುವೆನು. ಈಗ ನಿನ್ನಲ್ಲಿ ಕಬ್ಬಿಣವಿದೆ. ನಾನು ನಿನಗೆ ಬೆಳ್ಳಿಯನ್ನು ತರುವೆನು. ನಿನ್ನ ಮರವನ್ನು ತಾಮ್ರವನ್ನಾಗಿ ಪರಿವರ್ತಿಸುವೆನು. ನಿನ್ನ ಕಲ್ಲುಬಂಡೆಗಳನ್ನು ಕಬ್ಬಿಣವನ್ನಾಗಿ ಮಾಡುವೆನು. ನಿಮ್ಮ ಶಿಕ್ಷೆಯನ್ನು ಸಮಾಧಾನವನ್ನಾಗಿ ಮಾಡುವೆನು. ಈಗ ನಿನ್ನನ್ನು ಹಿಂಸಿಸುವ ಜನರು ನಿನಗೆ ಸಹಾಯ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಕಂಚಿನ ಬದಲಾಗಿ ನಿನಗೆ ಬಂಗಾರವನ್ನು ತರುವೆನು. ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ, ಮರಕ್ಕೆ ಬದಲಾಗಿ ಕಂಚನ್ನೂ, ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು. ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ, ನೀತಿಯನ್ನು ನಿನಗೆ ಅಧಿಕಾರಿಯನ್ನಾಗಿ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 60:17
15 ತಿಳಿವುಗಳ ಹೋಲಿಕೆ  

ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ ನಾವಿಲ್ಲದೆ ಅವರು ಸಿದ್ಧಿಗೆ ಬರಬಾರದೆಂದು ಸಂಕಲ್ಪಿಸಿದನು.


ಆ ದಿನದಲ್ಲಿ ಯೆಹೋವನು ಯೆರೂಸಲೇವಿುನವರನ್ನು ಸುತ್ತಲು ಕಾಪಾಡುವನು; ಅವರೊಳಗೆ ಈಗಿನ ಕುಂಟನು ಆ ದಿನದಲ್ಲಿ ದಾವೀದನಂತಿರುವನು; ದಾವೀದ ವಂಶವು ದೇವರಂತೆ, ಯೆಹೋವನ ದೂತನ ಹಾಗೆ ಅವರಿಗೆ ಮುಂದಾಳಾಗುವದು.


ಇದಲ್ಲದೆ ಯೆಹೋವನು ತನ್ನ ಜನರ ವ್ರಣವನ್ನು ಕಟ್ಟಿ ಅವರ ಪೆಟ್ಟಿನ ಗಾಯವನ್ನು ಗುಣಮಾಡುವ ದಿವಸದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವದು, ಮತ್ತು ಸೂರ್ಯನ ಬೆಳಕು ಏಳರಷ್ಟು ಹೆಚ್ಚಿ ಏಳು ದಿನಗಳ ಬೆಳಕಿನಂತಾಗುವದು.


ಪೂರ್ವದಲ್ಲಿ ನಿನಗಿದ್ದಂಥ ನ್ಯಾಯಾಧಿಪತಿಗಳನ್ನೂ ಮಂತ್ರಾಲೋಚಕರನ್ನೂ ಪುನಃ ಒದಗಿಸಿಕೊಡುವೆನು; ಆಮೇಲೆ ನೀನು ಧರ್ಮಪುರಿ ಎಂತಲೂ ಸುವ್ರತನಗರಿ ಎಂತಲೂ ಅನ್ನಿಸಿಕೊಳ್ಳುವಿ.


ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.


ಆತನು ನಿನ್ನ ಪ್ರಾಂತದೊಳಗೆ ಸೌಭಾಗ್ಯವನ್ನುಂಟುಮಾಡುತ್ತಾನೆ; ಶ್ರೇಷ್ಠವಾದ ಗೋದಿಯಿಂದ ನಿನ್ನನ್ನು ತೃಪ್ತಿಗೊಳಿಸುತ್ತಾನೆ.


ನೀನು ಜನಾಂಗಗಳ ಮೊಲೆಕೂಸಾಗುವಿ, ರಾಜರು ನಿನಗೆ ಮೊಲೆಯೂಡಿಸುವರು; ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನೀನು ತಿಳಿದುಕೊಳ್ಳುವಿ.


ನಿನ್ನ ದೇಶದಲ್ಲಿ ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು, ನಿನ್ನ ಪ್ರಾಂತಗಳೊಳಗೆ ಭಂಗನಾಶನಗಳ ವಾರ್ತೆಯೇ ಕೇಳಬರುವದಿಲ್ಲ; ಆಗ ದೇವರಕ್ಷಣೆಯು ನನ್ನ ಪೌಳಿಗೋಡೆಗಳು, ದೇವಸ್ತೋತ್ರವು ನನ್ನ ಬಾಗಿಲುಗಳು ಎಂದು ಅಂದುಕೊಳ್ಳುವಿ.


ಅವನ ಸ್ಥಾನದಲ್ಲಿ ಮತ್ತೊಬ್ಬನು ಎದ್ದು ರಾಜ್ಯದಲ್ಲಿ ಶಿರೋಮಣಿಯಾದ ದೇಶವನ್ನೆಲ್ಲ ದೋಚಿಕೊಳ್ಳತಕ್ಕವನನ್ನು ನೇವಿುಸುವನು; ಆಹಾ, ಕೆಲವು ದಿನಗಳೊಳಗೆ ನಾಶವಾಗುವನು; ಆದರೆ ಕೋಪದ ಪೆಟ್ಟಿನಿಂದಲ್ಲ, ಯುದ್ಧದಿಂದಲೂ ಅಲ್ಲ.


ಬೆಳ್ಳಿಯೆಲ್ಲಾ ನನ್ನದು ಬಂಗಾರವೆಲ್ಲಾ ನನ್ನದು; ಇದು ಸೇನಾಧೀಶ್ವರ ಯೆಹೋವನ ನುಡಿ.


ದೇವಾಲಯದ ಒಳಗಣ ಮತ್ತು ಹೊರಗಣ ನೆಲವನ್ನು ಬಂಗಾರದ ತಗಡುಗಳಿಂದ ಹೊದಿಸಿದನು.


ಗುಡ್ಡದಿನ್ನೆಗಳೆಲ್ಲವು ನಿನ್ನ ಜನರಿಗೋಸ್ಕರ ನೀತಿಗನುಸಾರವಾಗಿ ಸುಕ್ಷೇಮವನ್ನು ಫಲಿಸಲಿ.


ಮುಳ್ಳಿಗೆ ಬದಲಾಗಿ ತುರಾಯಿಯೂ ದತ್ತೂರಿಗೆ ಪ್ರತಿಯಾಗಿ ಸುಗಂಧವೂ ಬೆಳೆಯುವವು; ಆ ವನವು ಯೆಹೋವನಾಮಸ್ಮರಣೆಗೆ ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು