ಯೆಶಾಯ 60:14 - ಕನ್ನಡ ಸತ್ಯವೇದವು J.V. (BSI)14 ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾವಿುಯ ಚೀಯೋನ್ ಎಂದು ಕೊಂಡಾಡುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾಮಿಯ ಚೀಯೋನ್ ಎಂದು ಕೊಂಡಾಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ನಿನ್ನ ತುಳಿದವರ ಸಂತಾನ ಬರುವುದು ನಿನ್ನ ಬಳಿಗೆ ತಲೆಬಾಗಿ ನಿನ್ನ ಬೇಡವೆಂದವರು ಬೀಳುವರು ಕಾಲಿಗೆ ಸಾಷ್ಟಾಂಗವಾಗಿ. ಹೊಗಳುವರು ‘ನೀನೇ ಸರ್ವೇಶ್ವರನ ನಗರವೆಂದು, ಇಸ್ರಯೇಲಿನ ಪರಮಪಾವನ ಸಿಯೋನ್’ ಎಂದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಹಿಂದಿನ ದಿವಸಗಳಲ್ಲಿ ಜನರು ನಿನಗೆ ಹಿಂಸೆ ಕೊಟ್ಟರು. ಆ ಜನರು ಈಗ ನಿನ್ನ ಮುಂದೆ ಅಡ್ಡಬೀಳುವರು. ಗತಿಸಿದ ದಿವಸಗಳಲ್ಲಿ ಜನರು ನಿನ್ನನ್ನು ದ್ವೇಷಿಸಿದರು. ಆದರೆ ಈಗ ಅವರು ನಿನ್ನ ಕಾಲಿನ ಮುಂದೆ ಬೀಳುವರು. ಅವರು ನಿನ್ನನ್ನು ‘ಯೆಹೋವನ ಪಟ್ಟಣ,’ ‘ಇಸ್ರೇಲಿನ ಪರಿಶುದ್ಧನಾದ ಯೆಹೋವನ ಚೀಯೋನ್’ ಎಂದು ಕರೆಯುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಆಗ ನಿನ್ನನ್ನು ಕುಗ್ಗಿಸಿದವರು, ಬಗ್ಗಿಕೊಂಡು ನಿನ್ನ ಬಳಿಗೆ ಬರುವರು. ನಿನ್ನನ್ನು ಅಸಹ್ಯಿಸಿದವರೆಲ್ಲರೂ ನಿನ್ನ ಪಾದಗಳಿಗೆ ಅಡ್ಡಬಿದ್ದು, ನಿನ್ನನ್ನು ಯೆಹೋವ ದೇವರ ಪಟ್ಟಣವೆಂದೂ, ಇಸ್ರಾಯೇಲಿನ ಪರಿಶುದ್ಧನ ಚೀಯೋನೆಂದೂ ಕರೆಯುವರು. ಅಧ್ಯಾಯವನ್ನು ನೋಡಿ |