ಯೆಶಾಯ 60:10 - ಕನ್ನಡ ಸತ್ಯವೇದವು J.V. (BSI)10 ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಕಟ್ಟುವರು, ಅವರ ಅರಸರು ನಿನ್ನನ್ನು ಸೇವಿಸುವರು; ನನ್ನ ಕೋಪದಿಂದ ನಿನ್ನನ್ನು ಹೊಡೆದುಬಿಟ್ಟು ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಪುನಃ ಕಟ್ಟುವರು, ಅವರ ಅರಸರು ನಿನ್ನನ್ನು ಆರಾಧಿಸುವರು; ನನ್ನ ಕೋಪದಿಂದ ನಿನ್ನನ್ನು ಹೊಡೆದು, ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಕಟ್ಟುವರು ವಿದೇಶಿಯರು ನಿನ್ನ ಪೌಳಿಗೋಡೆಗಳನು ಅರಸರು ಕೂಡ ಸಲ್ಲಿಸುವರು ನಿನಗೆ ಸೇವೆಯನು. ಶಿಕ್ಷಿಸಿದೆ ನಿನ್ನನ್ನು ಕೋಪದಿಂದ ಆದರೆ, ಕರುಣಿಸುವೆನು ಕೃಪೆಯಿಂದ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಬೇರೆ ದೇಶದ ಮಕ್ಕಳು ನಿನ್ನ ಗೋಡೆಗಳನ್ನು ಮತ್ತೆ ಕಟ್ಟುವರು. ಅವರ ಅರಸರುಗಳು ನಿನ್ನ ಸೇವೆ ಮಾಡುವರು. “ನಾನು ಕೋಪಗೊಂಡಾಗ ನಿನ್ನನ್ನು ಬಾಧಿಸಿದೆನು. ಆದರೆ ಈಗ ನಿನಗೆ ಕರುಣೆ ತೋರುವೆನು. ನಿನ್ನನ್ನು ಆದರಿಸುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಇದಲ್ಲದೆ ವಿದೇಶಿಯರು ನಿನ್ನ ಗೋಡೆಗಳನ್ನು ಕಟ್ಟುವರು. ಅವರ ಅರಸರು ಸಹ ನಿನಗೆ ಸೇವೆಮಾಡುವರು. ಏಕೆಂದರೆ ನನ್ನ ಬೇಸರದಲ್ಲಿ ನಿನ್ನನ್ನು ಹೊಡೆದೆನು. ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. ಅಧ್ಯಾಯವನ್ನು ನೋಡಿ |